HEALTH TIPS

No title

                     ಗಮನ ಸೆಳೆದ ತುಳು ರಂಗನಾಟಕ `ಮುಕ್ಕಣ್ಣನಾಟ'
    ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ವಾಷರ್ಿಕ ಪ್ರತಿಷ್ಠಾ ದಿನದ ಶುದ್ಧಿಕಲಶದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಂಗನಟ, ರಂಗ ನಿದರ್ೇಶಕ ಉದಯ್ ಸಾರಂಗ್ ನಿದರ್ೇಶನದ ತುಳು ರಂಗನಾಟಕ ಪ್ರದರ್ಶನಕೊಂಡಿತು. ಮೊದಲನೇಯದಾಗಿ ಈ ಪ್ರದೇಶಕ್ಕೆ ಇದು ಒಂದು ಹೊಸ ಪ್ರಯತ್ನವಾಗಿತ್ತು.
   ಬಾಲ ಪ್ರತಿಭೆ ಸನ್ನಿಧಿ ಟಿ.ರೈ ಮುನ್ನಡೆಸುತ್ತಿರುವ ಕಾತರ್ಿಕೇಯ ಚಾರಿಟೆಬಲ್ ಟ್ರಸ್ಟ್ನ ಕರಾಟೆಯ ಮಕ್ಕಳು ಇಲ್ಲಿ ತಮ್ಮೊಳಗಿರುವ ಪ್ರತಿಭೆಯನ್ನು ಎಲ್ಲರು ಗುರುತಿಸುವಂತಹ ಪ್ರದರ್ಶನ ನೀಡಿದರು. ವಿಶೇಷವೆಂದರೆ ಸುಮಾರು ಐದು ವರ್ಷ ಪ್ರಾಯದಿಂದ ಹದಿನೇಳರ ವಯಸ್ಸಿನ 19 ಮಕ್ಕಳು ಈ ನಾಟಕದಲ್ಲಿ ಭಾಗವಹಿಸಿದ್ದರು. ಕತೆಗನುಸಾರವಾಗಿ ತಮ್ಮ ತಮ್ಮ ಸಂಭಾಷಣೆಯನ್ನು ತಾವೇ ಸಿದ್ಧ ಪಡಿಸಿಕೊಂಡು ಸಹಜವಾಗಿ ನಟಿಸಿದ ಮಕ್ಕಳು ಎಲ್ಲರ ಹೊಗಳಿಕೆಗೆ ಪಾತ್ರರಾದರು.
   ಎಲ್ಲೆಡೆಯೂ ದೇವರಿದ್ದಾನೆ ಮತ್ತು ದೇವರ ಹೆಸರಲ್ಲಿ ನಡೆಯುವ ಮೋಸದ ವಿರುದ್ಧ ಜನ ಜಾಗೃತಿ  ಮೂಡಿಸುವಲ್ಲಿ ಮಕ್ಕಳು ಯಶಸ್ವಿಯಾದರು. ಪುಟಾಣಿ ಮಕ್ಕಳಲ್ಲಿ ಅಡಗಿದ್ದ ಪ್ರತಿಭೆಯನ್ನು ಹೊರಜಗತ್ತಿಗೆ ತೆರೆದಿಡುವ ಸನ್ನಿಧಿಯ ಪ್ರಯತ್ನಕ್ಕೆ ಉದಯ ಸಾರಂಗ್, ವಿನು ಬೋವಿಕ್ಕಾನ ಮತ್ತು ಬಳಗದವರು ಸಮರ್ಥ ಮಾರ್ಗದರ್ಶನ ನೀಡಿದರು. ರಂಗದ ಮೇಲೆ ಈ ಮಕ್ಕಳು ತಮ್ಮ ತಮ್ಮ ಪಾತ್ರದಲ್ಲಿ ಲೀನರಾಗಿ ನಟನೆಗಿಳಿದಾಗ ದೊಡ್ಡ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕವರ್ಗ ನಿಬ್ಬೆರಗಾಗಿ ನಿಂತು ವೀಕ್ಷಿಸಿದರು. ನಾಟಕಕ್ಕೆ ನಿಕ್ಷಿತಾ ನೃತ್ಯ, ಸುರೇಂದ್ರ ಆಚಾರ್ಯ ಮತ್ತು ಸನ್ನಿಧಿ ಸಂಗೀತ ಸಂಯೋಜನೆ ಮಾಡಿದ್ದರು. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ದೇವಸ್ಥಾನದ ಆಡಳಿತ ಮಂಡಳಿ, ಮಕ್ಕಳ ಪೋಷಕರು ಮತ್ತು ಕಾತರ್ಿಕೇಯ ಚಾರಿಟೆಬಲ್ ಟ್ರಸ್ಟ್ ವಹಿಸಿಕೊಂಡಿತ್ತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries