HEALTH TIPS

No title

           ಸಹಸ್ರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಜಟಾಧಾರಿ ದೈವ ಪ್ರತಿಷ್ಠೆ
               ಭಾವುಕತೆಯಲ್ಲಿ ಮಿಂದೆದ್ದ ಭಜಕರು
   ಪೆರ್ಲ: ಸ್ವರ್ಗ ಮಲೆತ್ತಡ್ಕದ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಏ.18 ರಿಂದ ಆರಂಭಗೊಂಡಿರುವ ಶ್ರೀನಾಗ ಪ್ರತಿಷ್ಠೆ,, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆ ಉತ್ಸವದ ಅಂಗವಾಗಿ ಭಾನುವಾರ ಜಟಾಧಾರಿ ಪ್ರತಿಷ್ಠೆ, ಜೀವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕಗಳೊಂದಿಗೆ ಗ್ರಾಮೀಣ ಪ್ರದೇಶದ ಸಹಸ್ರ ವರ್ಷಗಳಿಗಿಂತಲೂ ಹಿಂದಿನ ಐತಿಹ್ಯಗಳಿರುವ ಕ್ಷೇತ್ರದ ಪುನರುತ್ಥಾನಕ್ಕೆ ನಾಂದಿಯಾಯಿತು.
   ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಿಗ್ಗೆ 6.ರಿಂದ ಗಣಪತಿ ಹವನ, ಪ್ರತಿಷ್ಠಾಂಗ  ಕಲಶಪೂಜೆ, ಚಂಡಿಕಾ ಹವನ ಪ್ರಾರಂಭ ವಿಧಿವಿಧಾನಗಳು ಋತ್ವಿಜರಿಂದ ನೆರವೇರಿತು.
9 ಕ್ಕೆ ಏತಡ್ಕ ಶ್ರೀ ದುಗರ್ಾಪರಮೇಶ್ವರಿ ಭಜನಾ ಮಂದಿರ ಮತ್ತು ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ, ಸ್ವೀಕಾರ ನೆರವೇರಿತು. ಬಳಿಕ 10.52ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಜಟಾಧಾರಿ ಪ್ರತಿಷ್ಠೆ, ಜೀವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ತಾಂಬೂಲ, ಚಂಡಿಕಾಹವನದ ಪೂಣರ್ಾಹುತಿ,ಮಹಾಪೂಜೆ,ಮಹಾಮಂತ್ರಾಕ್ಷತೆಗಳು ವೈಧಿಕ, ತಾಂತ್ರಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಶ್ರೀ ಡಾ.ಬಳ್ಳಪದವು ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ಸಾಂಗವಾಗಿ ನೆರವೇರಿತು.
   ಮಧ್ಯಾಹ್ನ 1 ರಿಂದ ಪ್ರಸಾದ ಭೋಜನ, ಅಪರಾಹ್ನ 2.30 ರಿಂದ ಧಾಮರ್ಿಕ ಸಭೆ ನಡೆಯಿತು. ಬಳಿಕ ಸಂಜೆ 5.30 ರಿಂದ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆ ಶುಭದಾ ಪತ್ತಡ್ಕ ಮತ್ತು ಬಳಗದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಸಂಜೆ 6.30 ರಿಂದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ, ಇಲ್ಲಿನ ಮಕ್ಕಳ ಮೇಳದವರಿಂದ  "ಪಾಂಚಜನ್ಯ-ಬಬ್ರುವಾಹನ " ಎಂಬ ಪೌರಾಣಿಕ ಆಖ್ಯಾನವನ್ನು ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಗುರು  ಸಬ್ಬಣಕೋಡಿ ರಾಮ್ ಭಟ್ ಅವರು ನಿದರ್ೇಶನದಲ್ಲಿ ಪ್ರದಶರ್ಿಸಲಾಯಿತು. ಅತಿಥಿ ಭಾಗವತರಾಗಿ  ಪ್ರಸಾದ್ ಬಲಿಪರು ಭಾಗವಹಿಸಿದರು.
    ಇಂದಿನ ಕಾರ್ಯಕ್ರಮ: (ಸೋಮವಾರ)
    ಪ್ರಾತಃಕಾಲ ಗಂಟೆ 6 ರಿಂದ ಗಣಪತಿ ಹವನ, ಪೂವರ್ಾಹ್ನ ಗಂಟೆ 9.30 ಕ್ಕೆ ಮಂಜೇಶ್ವರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್
ಅಧ್ಯಕ್ಷ ಸೋಮಶೇಖರ ಜೆ.ಎಸ್ ರಿಂದ ದೀಪ ಪ್ರಜ್ವಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭ ನಡೆಯಲಿದೆ. 10 ರಿಂದ ಭಕ್ತಿ ಸಂಗೀತ ಭಜನೆ, ಮಧ್ಯಾಹ್ನ 12ಕ್ಕೆ  ಶ್ರೀ ಜಟಾಧಾರಿ ದೈವದ ಭಂಡಾರ ಆಗಮನ, 1.ರಿಂದ ಬ್ರಾಹ್ಮಣ ಸಂತರ್ಪಣೆ, ಮಂತ್ರಾಕ್ಷತೆ, ಪ್ರಸಾದ ಭೋಜನ, ಅಪರಾಹ್ನ 3 ರಿಂದ: ಭಜನಾ ಸಂಕೀರ್ತನೆ, 5.30 ರಿಂದ ವಿದ್ವಾನ್ ಗಣೇಶ್ ಕುಮಾರ್ ಆಚಾರ್ಯ  ಎಸ್.ಪಿ. ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ, ರಾತ್ರಿ 9 ರಿಂದ ಯಕ್ಷಗಾನ ವೈಭವ  ಅಮೋಘ ಯಕ್ಷಗಾನ ಬಯಲಾಟ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಪ್ರಸಂಗ ಕದಂಬ ಕೌಶಿಕೆ ಪ್ರದರ್ಶನಗೊಳ್ಳಿದೆ. ಬಳಿಕ ರಾತ್ರಿ 2 ರಿಂದ ಶ್ರೀ ಜಟಾಧಾರಿ ದೈವದ ಮಹಿಮೆ ನಡೆಯಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries