ಅಗ್ರಗಣ್ಯ ಲೇಖಕ, ಸಾಹಿತಿ, ಸಂಶೋಧಕ ದಿ.ಬೇಕಲ ರಾಮನಾಯಕ
ಸಂಸ್ಮರಣೆ, ಅಭಿನಂದನೆ, ಗೌರವಾರ್ಪಣೆ
ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದಲ್ಲಿ ಎ.21 ರಂದು ಶನಿವಾರ ಸಂಜೆ 4.30 ರಿಂದ ಅಗ್ರಗಣ್ಯ ಲೇಖಕ, ಸಾಹಿತಿ, ಸಂಶೋಧಕ ದಿ.ಬೇಕಲ ರಾಮನಾಯಕ ಸಂಸ್ಮರಣೆ, ಅಭಿನಂದನೆ, ಗೌರವಾರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿರಿಯ ಭಾಷಾಂತರಕಾರ, ಲೇಖಕ, ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಎ.ನರಸಿಂಹ ಭಟ್ ಅವರಿಗೆ ಅಭಿನಂದನೆ ಮತ್ತು ಹಿರಿಯ ಕವಯತ್ರಿ, ಲೇಖಕಿ ಮಾಲತಿ ಕಮಲಾಕ್ಷ ಅವರಿಗೆ ಗೌರವಾರ್ಪಣೆ ಜರಗಲಿದೆ.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಉದ್ಘಾಟಿಸುವರು. ಬೇಕಲರ ಸಂಸ್ಮರಣಾ ಭಾಷಣವನ್ನು ಆಶಾ ಜಗದೀಶ್ ಮಾಡಲಿದ್ದಾರೆ. ಕಮಲಾಕ್ಷ ಕಲ್ಲುಗದ್ದೆ, ಮುಖ್ಯೋಪಾಧ್ಯಾಯ ರಾಜೇಶ್ಚಂದ್ರ ಮಾಸ್ತರ್, ಪ್ರಾಧ್ಯಾಪಿಕೆ ಶೈಲಾ ಪ್ರಕಾಶ್ ಚಂದ್ರ ಮಂಗಳೂರು, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಶುಭಾಶಂಸನೆಗೈಯುವರು. ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಂಘಟಕ ಜಗದೀಶ್ ಕೂಡ್ಲು, ಪ್ರಾಧ್ಯಾಪಿಕೆ ಲತಾ ಪ್ರಕಾಶ್ ರಾವ್, ಸಂಧ್ಯಾರಾಣಿ ಟೀಚರ್ ಉಪಸ್ಥಿತರಿರುವರು.
ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಕೆ.ವಾಮನ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು ಎಂದು ಕನ್ನಡ ಭವನದ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.