HEALTH TIPS

No title

             ಭಾರತೀಯ ಸಂವಿಧಾನದಲ್ಲಿ ಮುಖ್ಯ ನ್ಯಾಯಮೂತರ್ಿಗಳ ಪದಚ್ಯುತಿಗೊಳಿಸುವ ಪ್ರಕ್ರಿಯೆ ಹೇಗೆ?
              ಮುಖ್ಯನ್ಯಾಯಮೂತರ್ಿ ದೀಪಕ್ ಮಿಶ್ರಾ ಪದಚ್ಯುತಿಗೆ ನಿಲುವಳಿ ನೋಟಿಸ್ ಹಿನ್ನೆಲೆ
    ನವದೆಹಲಿ: ಭಾರತದ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ಅವರ ವಿರುದ್ಧ ಸಹೋದ್ಯೋಗಿ ನ್ಯಾಯಾಧೀಶರೇ ತಾರತಮ್ಯ ಆರೋಪ ಮಾಡಿದ ಬೆನ್ನಲ್ಲೇ ಸಿಜೆಐ ಪದಚ್ಯುತಿಗೆ ವಿಪಕ್ಷಗಳು ಸಂಸತ್ ನ ಉಭಯ ಕಲಾಪದಲ್ಲಿ ನಿಲುವಳಿ ನೋಟಿಸ್ ನೀಡಿವೆ.
   ಈಗಾಗಲೇ ಪ್ರಮುಖ ವಿಪಕ್ಷ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯಸಭೆ ಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಪದಚ್ಯುತಿ ನಿಲುವಳಿ ನೋಟಿಸ್ ನೀಡಲಾಗಿದ್ದು, ಭಾರತೀಯ ಸಂವಿಧಾನದ ಅನುಚ್ಛೇಧ 124ರ ಅಡಿಯಲ್ಲಿ ಸುಪ್ರೀಂ ಕೋಟರ್್ ಮುಖ್ಯ ನ್ಯಾಯಾಧೀಶರ ಮತ್ತು ಅನುಚ್ಛೇಧ 128ರ ಅಡಿಯಲ್ಲಿ ಹೈಕೋಟರ್್ ಮುಖ್ಯ ನ್ಯಾಯಾಧೀಶರ ಪದಚ್ಯುತಿಗೊಳಿಸುವ ಅವಕಾಶವಿದೆ.
   ಆದರೆ ಸಂವಿಧಾನದ ಯಾವುದೇ ಭಾಗದಲ್ಲೂ ನ್ಯಾಯಾಧೀಶರ ಪದಚ್ಯುತಿ ಪದ (ಇಂಪೀಟ್ಮೆಂಟ್) ಬಳಕೆಯಾಗಿಲ್ಲ. ಆದರೆ ದೇಶದ ರಾಷ್ಟ್ರಪತಿಗಳ ಆದೇಶದ ಮೇರೆಗೆ ಭಾರತದ ಮುಖ್ಯ ನ್ಯಾಯಮೂತರ್ಿಗಳನ್ನು ಅವರ ಸೇವೆಯಿಂದ ತೆಗೆದುಹಾಕಬಹುದಾಗಿದೆ. ಇನ್ನು ರಾಷ್ಟ್ರಪತಿಗಳೂ ಕೂಡ ಸಂಸತ್ ಉಭಯ ಸಭೆಗಳಲ್ಲಿ ಈ ಬಗ್ಗೆ ನಿಲುವಳಿ ಮಂಡನೆಯಾಗಿ ಅನುಮೋದನೆ ಪಡೆದ ಬಳಿಕವೇ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸುವ ಆದೇಶ ನೀಡಹುದಾಗಿದೆ.
ಇನ್ನು ನ್ಯಾಯಾಧೀಶರ ವಿಚಾರಣಾ ಕಾಯ್ದೆ 1968ರಲ್ಲಿ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ವಿವರಿಸಲಾಗಿದೆ. ಕಾಯ್ದೆಯ ಅನ್ವಯ ನ್ಯಾಯಾಧೀಶರನ್ನು ವಜಾಗೊಳಿಸಲು ಸಂಸತ್ ಉಭಯ ಸಭೆಗಳ ಅನುಮೋದನೆ ಕಡ್ಡಾಯ. ಉಳಿದಂತೆ ನ್ಯಾಯಾಧೀಶರ ವಜಾಗೆ ಅನುಸರಿಸಬೇಕಾದ ಕೆಲ ಪ್ರಮುಖ ಪ್ರಕ್ರಿಯೆಗಳು ಇಂತಿವೆ.
1.ಲೋಕಸಭೆಯ ಕನಿಷ್ಠ 100 ಸದಸ್ಯರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಸಹಿಹಾಕಿ ಸ್ಪೀಕರ್ ಗೆ ನೀಡಬೇಕು.
2.ಅಂತೆಯೇ ರಾಜ್ಯಸಭೆಯ ಕನಿಷ್ಠ 50 ಸದಸ್ಯರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಸಹಿಹಾಕಿ ಸಭಾಧ್ಯಕ್ಷರಿಗೆ ನೀಡಬೇಕು.
3.ಹೀಗೆ ತಮ್ಮ ಬಳಿ ಸದಸ್ಯರು ನೀಡಿದ ಸಹಿ ಹಾಕಿದ ನೋಟಿಸ್ ಕುರಿತಂತೆ ಲೋಕಸಭೆಯ ಸ್ಪೀಕರ್ ಹಾಗೂ ರಾಜ್ಯಸಭೆಯ ಅಧ್ಯಕ್ಷರು ಪರಸ್ಪರ ಚಚರ್ೆ ನಡೆಸಿ, ಸದಸ್ಯರು ನೋಟಿಸ್ ನಲ್ಲಿ ನೀಡಿರುವ ಅಂಶಗಳು ಪೂರಕವಾಗಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು.
4. ಈ ಅಂಶಗಳ ಪರಿಶೀಲನೆ ಬಳಿಕ ಉಭಯ ಸಭಾಧ್ಯಕ್ಷರು ಪದಚ್ಯುತಿ ನಿಲುವಳಿಗೆ ಮನ್ನಣೆ ನೀಡಬೇಕೇ ಅಥವಾ ನೋಟಿಸ್ ಅನ್ನು ನಿರಾಕರಿಸಬೇಕೆ ಎಂಬುದನ್ನು ನಿರ್ಧರಿಸಬೇಕು.
5.ಒಂದು ವೇಳೆ ಪದಚ್ಯುತಿ ನಿಲುವಳಿಗೆ ಅನುಮೋದನೆ ನೀಡಬೇಕು ಎಂದಾದರೆ, ನೋಟಿಸ್ ಪಡೆದ ಸ್ಪೀಕರ್ ಅಥವಾ ಸಭಾಧ್ಯಕ್ಷರು ಸಿಜೆಐ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ತನಿಖೆ ನಡೆಸಲು ಮೂರು ಸದಸ್ಯರ ಸಮಿತಿ ರಚನೆ ಮಾಡುತ್ತಾರೆ. ಈ ಸಮಿತಿಯಲ್ಲಿ ಸುಪ್ರೀಂ ಕೋಟರ್್ ನ ನ್ಯಾಯಾಧೀಶರು, ಹೈಕೋಟರ್್ ಮುಖ್ಯನ್ಯಾಯಾಧೀಶರು ಮತ್ತು ವಿಶೇಷ ನ್ಯಾಯವಾದಿ ಇರಲಿದ್ದಾರೆ.
6.ಈ ಸಮಿತಿ ಸದಸ್ಯರು ಆರೋಪಗಳ ಆಧಾರದ ಮೇರೆಗೆ ತನಿಖೆ ನಡೆಸಲಿದ್ದು, ಆ ಅಂಶಗಳ ಆಧಾರದ ಮೇರೆಗೆ ಆರೋಪಪಟ್ಟಿ ತಯಾರಿಸಲಿದೆ.
7.ಈ ಆರೋಪ ಪಟ್ಟಿಯ ಪ್ರತಿಯನ್ನು ಆರೋಪಿತ ಸಿಜೆಐಗೆ ಕಳುಹಿಸಲಿದ್ದು, ಅವರೂ ಕೂಡ ಆರೋಪಗಳಿಗೆ ಲಿಖಿತ ಉತ್ತರ ನೀಡಲು ಅವಕಾಶ ನೀಡಲಾಗುತ್ತದೆ.
8.ಸಿಜೆಐ ವಿರುದ್ಧ ಆರೋಪಗಳು ಮತ್ತು ಅದಕ್ಕೆ ಮುಖ್ಯ ನ್ಯಾಯಾಮೂತರ್ಿಗಳು ನೀಡಿದ ಲಿಖಿತ ಉತ್ತರದ ಆಧಾರದ ಮೇರೆಗೆ ಸಮಿತಿ ತನ್ನ ವರದಿ ಸಿದ್ಧಪಡಿಸಿ ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ನೀಡಲಿದೆ. ಆ ವರದಿಯನ್ನು ಮತ್ತೆ ಸಂಬಂಧಪಟ್ಟ ಸಂಸತ್ ಸದನದಲ್ಲಿ ಮಂಡಿಸಲಿದ್ದಾರೆ.
9.ಒಂದು ವೇಳೆ ಸಮಿತಿ ವರದಿಯಲ್ಲಿ ಮುಖ್ಯ ನ್ಯಾಯಮೂತರ್ಿಗಳ ವಿರುದ್ಧದ ಆರೋಪದಲ್ಲಿ ಸತ್ಯ ಕಂಡುಬಂದರೆ ಅಥವಾ ಮುಖ್ಯ ನ್ಯಾಯಾಧೀಶರ ಕರ್ತವ್ಯದಲ್ಲಿ ದುರ್ಬಳಕೆ ಅಥವಾ ಅಸಮರ್ಥತೆ ಕಂಡುಬಂದಿದ್ದರೆ ಆಗ ಸಂಬಂಧ ಪಟ್ಟ ಸಂಸತ್ ಸದನದಲ್ಲಿ ವರದಿ ಕುರಿತು ಚಚರ್ೆ ನಡೆಸಿ ಅನುಮೋದನೆ ಪಡೆಯಲಾಗುತ್ತದೆ.
10. ಹೀಗೆ ಸಂಸತ್ ನ ಸದನದಲ್ಲಿ ಚಚರ್ೆಗೆ ಬರಲಿರುವ ವರದಿ ಮತ್ತು ನಿರ್ಣಯಕ್ಕೆ ಸಂಸತ್ ನ ಉಭಯ ಸದನಗಳಲ್ಲೂ ಬಹುಮತ ಲಭಿಸಬೇಕಿರುತ್ತದೆ. ಸಭೆಯ ಒಟ್ಟಾರೆ ಸದಸ್ಯ ಬಲದ ಪೈಕಿ ಕನಿಷ್ಠ ಮೂರನೇ ಎರಡರಷ್ಟು ಮತ ಲಭಿಸಬೇಕು.
11.ಒಂದು ವೇಳೆ ಸಂಸತ್ ಸಭೆಯಲ್ಲಿ ಸಿಜೆಐ ಪದಚ್ಯುತಿಗೊಳಿಸುವ ನಿರ್ಣಯಕ್ಕೆ ಬಹುಮತ ಲಭಿಸಿದ್ದೇ ಆದರೆ ಮತ್ತೊಂದು ಸದನದ ಅನುಮೋದನೆಗಾಗಿ ನಿರ್ಣಯವನ್ನು ರವಾನೆ ಮಾಡಲಾಗುತ್ತದೆ.
12.ಒಂದು ವೇಳೆ  ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕಾರವಾದರೆ, ಬಳಿಕ ಈ ನಿರ್ಣಯವನ್ನು ರಾಷ್ಟ್ರಪತಿಗಳ ಅನುಮೋದನೆಗೆ ರವಾನೆ ಮಾಡಲಾಗುತ್ತದೆ. ಬಳಿಕ ಈ ನಿರ್ಣಯಕ್ಕೆ ರಾಷ್ಟ್ಪಪತಿಗಳು ಅನುಮೋದನೆ ನೀಡಲಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries