ಕನ್ನಡಾಭಿಮಾನ ಜಾಗೃತಿ ಬೆಳೆಯಲಿ - ಬಳ್ಳಕ್ಕುರಾಯ
ಮುಳ್ಳೇರಿಯ : ಕಾಸರಗೋಡಿನ ಇದ್ದುಕೊಂಡು ಸಮಸ್ಯೆಗಳನ್ನು ಪರಿಹರಿಸಬೇಕು. ಕಾಸರಗೋಡಿನ ಕನ್ನಡಿಗರು ವಿರೋಧಿ ತಂತ್ರಗಳಿಗೆ ಮಣಿಯುವುದಿಲ್ಲ. ಕಾಸರಗೋಡಿನಲ್ಲಿ ತಳಮಟ್ಟದಿಂದ ಕನ್ನಡ ಜಾಗೃತಿ ಆಗಬೇಕು' ಎಂದು ಕನ್ನಡ ಹೋರಾಟ ಸಮಿತಿ ಅಧ್ಯಕ್ಷರಾದ ನ್ಯಾಯವಾದಿಮುರಲೀಧರ ಬಳ್ಳಕ್ಕುರಾಯ ಹೇಳಿದರು.
ಅವರು ಕಾಸರಗೋಡು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ನಡೆದ ಕಾಸರಗೋಡು ಕನ್ನಡಿಗರ ಸಮಸ್ಯೆ ಮತ್ತು ಪರಿಹಾರಗಳು ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಔದ್ಯೋಗಿಕ ರಂಗದ ಸವಾಲುಗಳು - ಪರಿಹಾರ ವಿಚಾರ ಮಂಡಿಸಿದ ವಕೀಲ ಥಾಮಸ್ಡಿಸೋಜಾ ಮಾತನಾಡಿ,'ಕಾಸರಗೋಡಿನ ವಿವಿಧ ಪಂಚಾಯಿತಿನ ಗ್ರಾಮಸಭೆಗಳಿಂದಲೇ ಮಲಯಾಳ ಹೇರಿಕೆಯ ಯತ್ನ ನಡೆಯುತ್ತದೆ. ನ್ಯಾಯಾಲಯ, ಪೊಲೀಸರು ಕೂಡಾ ಮಲಯಾಳವನ್ನು ಅವಲಂಬಿಸುತ್ತಾರೆ. ಕಾಸರಗೋಡಿನ ಅನೇಕ ಕನ್ನಡಿಗ ಅಧಿಕಾರಿಗಳೂ ಕೂಡಾ ಮೇಲಧಿಕಾರಿಯ ಕೈಗೊಂಬೆಯಾಗಿದ್ದಾರೆ. ಮಕ್ಕಳನ್ನು, ಯುವಕರನ್ನು ಕನ್ನಡ ಕಟ್ಟುವ ಕೆಲಸಕ್ಕೆ ಬಳಸಬೇಕು' ಎಂದು ಹೇಳಿದರು.ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳು ಮತ್ತು ಪರಿಹಾರ ವಿಚಾರದಲ್ಲಿ ನಿವೃತ್ತ ಶಿಕ್ಷಕ ಎಂ ವಿ ಮಹಾಲಿಂಗೇಶ್ವರ ಭಟ್ ಮಾತನಾಡಿ,'ಮಕ್ಕಳ ರಕ್ಷಕರಲ್ಲಿ ಇರುವ ಕನ್ನಡದ ಬಗ್ಗೆ ನಿರ್ಲಕ್ಷ್ಯ, ಕನ್ನಡ ಪಠ್ಯ ಪುಸ್ತಕ ಹಾಗೂ ಸಕಾಲದಲ್ಲಿ ಪೂರೈಕೆ ಆಗದಿರುವುದು, ಅದ್ಯಾಪಕರಿಗೆ, ಸಕರ್ಾರದ ಕೈಪಿಡಿ ನೀಡದಿರುವುದು, ಗಡಿಭಾಗದ ಕನ್ನಡಿಗರು ಕನರ್ಾಟಕಕ್ಕೆ ವಲಸೆ ಹೋಗುವುದು ಕಾಸರಗೋಡು ಕನ್ನಡ ಕುಸಿತಕ್ಕೆ ಮೂಲ ಕಾರಣ' ಎಂದು ಹೇಳಿದರು.
ಭಾಷೆ, ಕಲೆ, ಸಾಂಸ್ಕೃತಿಕ ನೆಲೆಯ ಸವಾಲುಗಳು ಎಂಬ ವಿಚಾರದಲ್ಲಿ ಪ್ರಬಂಧ ಮಂಡಿಸಿದ ಆಶಾ ದಿಲೀಪ್ ಸುಳ್ಯಮೆ ಅವರು ನಮ್ಮ ಸಾಧನೆಯನ್ನು ಅರಿತುಕೊಂಡಾಗ, ನಾವು ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು. ಪ್ರೀತಿ, ವಿಶ್ವಾಸ, ಸೌಹಾರ್ದತೆಯು ಕಾಸರಗೋಡಿನ ಕನ್ನಡಿಗರ ರಕ್ತಗತ ಗುಣ. ಯಕ್ಷಗಾನ, ರಂಗಭೂಮಿಯಲ್ಲಿ ಕಾಸರಗೋಡು ಜಿಲ್ಲೆ ಪ್ರಖ್ಯಾತವಾಗಿದೆ ಎಂದು ಹೇಳಿದರು. ರಾಧಾಕೃಷ್ಣ ಸ್ವಾಗತಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಡಿ ಬಿ ವಂದಿಸಿದರು. ಡಾ. ಬೇ ಸಿ ಗೋಪಾಲಕೃಷ್ಣ ನಿರ್ವಹಿಸಿದರು.
ಎಳೆಯರ ಕವಿಗೋಷ್ಠಿ : ಸಮ್ಮೇಳನದ ಅಂಗವಾಗಿ ಮಕ್ಕಳ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ,ಕುಮಾರಿ ಮೇಧಾ ನಾಯರ್ಪಳ್ಳ ಮಾತನಾಡಿ, 'ಶುದ್ಧ ಕನ್ನಡವು ಕಾಸರಗೋಡಿನಲ್ಲಿ ಇದೆ. ಹೊಂದಾಣಿಕೆಯಾಗುವಪದಗಳ ಸಂಯೋಗವೇ ಸುಂದರ ಕವನಗಳು. ಒತ್ತಡದಿಂದ ಶಬ್ದಗಳ ಹೊಂದಿಸುವಿಕೆಯಿಂದ ಸುಂದರ ಕವನಗಳ ಸೃಷ್ಟಿ ಅಸಾಧ್ಯ. ಕವನಗಳು ಕಬ್ಬಿನ ಹಾಗೆ ಜಗಿದಷ್ಟು ರಸ ಬಿಡುಗಡೆಯಾಗುತ್ತದೆ' ಎಂದು ಹೇಳಿದರು.
ಕವಿಗೋಷ್ಠಿಯ ಸನ್ನಿಧಿ ಟಿ ರೈ, ಸುಪ್ರಿತಾ ಸುಧೀರ್ ರೈ, ಪ್ರಿಯಾ ಎಸ್, ಆಕಾಶ್ ಸಿ, ಭಾವನ ಕೃಷ್ಣ ಎಂ, ಮೇಘಾ ಶಿವರಾಜ್, ಆಶಾ ಕೆ, ವರಲಕ್ಷ್ಮಿ, ಚಿನ್ಮಯಕೃಷ್ಣ ಕೆ ಕವನ ವಾಚಿಸಿದರು. ಎಂ ಪದ್ಮಾವತಿ ಸ್ವಾಗತಿಸಿ, ಕೆ ಎನ್ ಸರಸ್ವತಿ ವಂದಿಸಿದರು.