ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ನಾಲ್ವರೂ ಸಾವನ್ನಪ್ಪಿರುವುದು ದೃಢ- ಸುಷ್ಮಾ ಸ್ವರಾಜ್
ನವದೆಹಲಿ: ಕಳೆದ ವಾರ ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯರ ಕುಟುಂಬದ ನಾಲ್ವರೂ ಮೃತಪಟ್ಟಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಖಚಿತಪಡಿಸಿದ್ದಾರೆ.
ಭಾರತದ ಸಂದೀಪ್ ತೊಟ್ಟಪಿಲ್ಲಿ ಮತ್ತು ಅವರ ಕುಟುಂಬದ ದುರಂದ ಸಾವಿಗೆ ಸುಷ್ಮಾ ಸ್ವರಾಜ್ ತೀವ್ರ ಸಂತಾಪ ಸೂಚಿಸಿದ್ದು, ಪತಿ, ಪತ್ನಿ ಹಾಗೂ ಇಬ್ಬರ ಮಕ್ಕಳ ಮೃತದೇಹವನ್ನು ಇಯೆಲ್ ನದಿಯಿಂದ ಹೊರ ತೆಗೆಯಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಒರೆಗಾನ್ ದಿಂದ ಕ್ಯಾಲಿಫೋನರ್ಿಯಾಕ್ಕೆ ಎಸ್ಯುವಿ( ಸ್ಫೋಟರ್್ ಯುಟಿಲಿಟಿ ವೆಹಿಕಲ್ ) ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದೀಪ್ ತೊಟ್ಟಪಿಲ್ಲಿ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದರು.
ಸಂದೀಪ್, ಪತ್ನಿ ಸೌಮ್ಯ, 9 ವರ್ಷದ ಸಾಚಿ ಹಾಗೂ ಪುತ್ರ ಸಿದ್ಧಾಂತ್ ಈಗ ಶವವಾಗಿ ಪತ್ತೆಯಾಗಿದ್ದಾರೆ. ನದಿಯಲ್ಲಿ ಬೋಟಿಂಗ್ ನಡೆಸುತ್ತಿದ್ದ ತಂಡದ ಸದಸ್ಯರು ಕಾರನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿ ಶವಗಳನ್ನು ಮೇಲಕ್ಕೆತ್ತಲಾಗಿದೆ. ಈ ಕುರಿತಾಗಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು ಸಾವಿಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.