HEALTH TIPS

No title

              ಕ್ಷೇತ್ರದ ``ಕುದಿಕಳ" ದಲ್ಲಿ  ಮುಸಲ್ಮಾನರಿಂದ ವೀಳ್ಯದೆಲೆ, ತೆಂಗಿನ ಕಾಯಿ ಮಾರಾಟ: ಮತ ಸೌಹಾರ್ದಕ್ಕೆ ಸಾಕ್ಷಿಯಗುತ್ತಿರುವ ಉದ್ಯಾವರ ಮಾಡ ಕ್ಷೇತ್ರ
     ಮಂಜೇಶ್ವರ: ಜಾತಿ ಧರ್ಮಗಳ ಸೌಹಾರ್ಧತೆಗಳು ವಿವಿಧ ಕಾರಣಗಳಿಂದ ಇಮದು ಕುಸಿಯುತ್ತಿರುವ ಭೀತಿಯ ಮಧ್ಯೆ  ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಕಳೆದ ಸುಮಾರು ಎಂಟುನೂರು ವರ್ಷಗಳಿಂದಲೂ ವಾಡಿಕೆಯಲ್ಲಿರುವ ಹಿಂದೂ ಮುಸಲ್ಮಾರನ್ನು ಒಗ್ಗೂಡಿಸುವಂತಹ ಹಲವು ಸಂಪ್ರದಾಯಗಳು ಈಗಲೂ ಜೀವಂತವಿರುವುದು ಭಾವೀ ಜನಾಂಗಕ್ಕೆ ಮಾರ್ಗದರ್ಶಕ ಮತ್ತು ಪರಂಪರೆ ಸಾಗಿಬಂದ ಸೂಚಿಯಾಗಿ ಉಳಿದುಕೊಂಡು ಮುಮದುವರಿಯುತ್ತಿದೆ.  ಉದ್ಯಾವರ ಸಾವಿರ ಜಮಾಹತ್ ಹಾಗೂ ಉದ್ಯಾವರ ಶ್ರೀ ಅರಸು ಕ್ಷೇತ್ರಕ್ಕಿರುವ ಸಂಬಂಧವನ್ನು ಎತ್ತಿ ತೋರಿಸುವಂತಹ ಹಲವು ಸಂಪ್ರದಾಯಗಳು ಇಂದಿನ ತಲೆಮಾರಿಗೊಂದು ಮಾದರಿಯಾಗಿದೆ.
    ವಾಡಿಕೆಯಂತೆ ಈ ವರ್ಷವೂ ಉದ್ಯಾವರ ಶ್ರೀ ಅರಸು ಕ್ಷೇತ್ರದ ಜಾತ್ರೆಗೆ ದಿನ ನಿಶ್ಚಯ (ಕುದಿಕಳ-ಕುದಿ=ದಿನ, ಕಳ-ನಿರ್ಧರಿಸುವ ಸ್ಥಳ) ಸೋಮವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಯಿಂದ ನೆರವೇರಿತು. ದಿನ ನಿಶ್ಚಯದಂದು ಸಿಂಹಾಸನ ಕಟ್ಟೆಯಲ್ಲಿ ಒಂದು ಭಾಗದಲ್ಲಿ ಉದ್ಯಾವರ ಸಾವಿರ ಜಮಾಅತಿಗೊಳಪಟ್ಟ ಮುಸಲ್ಮಾನರು ಹಾಗೂ ಇನ್ನೊಂದು ಭಾಗದಲ್ಲಿ ಬ್ರಹ್ಮಸಭೆ ಅಂದರೆ ಕ್ಷೇತ್ರಕ್ಕೆ ಸಂಬಂಧಪಟ್ಟವರು ಕುಳಿತುಕೊಳ್ಳುವರು. ಬಳಿಕ ದಿನ ಕಟ್ಟೆಯ ಮುಂಬಾಗದಲ್ಲಿ ಪಾತ್ರಿಗಳ ಆಗಮನದೊಂದಿಗೆ ದಿನ ನಿಶ್ಚಯವನ್ನು ಓದಿ ಹೇಳಲಾಯಿತು. ಈ ಸಂದರ್ಭ ಭಗವತೀ ಭೇಟಿ ಕೂಡಾ ನಡೆಯಿತು. ಭೇಟಿಯ ಬಳಿಕ ಕ್ಷೇತ್ರದ ಉತ್ಸವದ ಧ್ವಜಾರೋಹಣದ ಉಸ್ತುವಾರಿಯನ್ನು ಅವರಿಗೆ ನೀಡಲಾಯಿತು. ಬಳಿಕ ಕ್ಷೇತ್ರದಲ್ಲಿ ವಾಡಿಕೆಯಲ್ಲಿರುವ ವೀಳ್ಯದೆಲೆ ಮಾರಾಟ ಹಾಗೂ ತೆಂಗಿನ ಕಾಯಿ ಮಾರಾಟ ನಡೆಯಿತು. ಕುದಿಕಳದಲ್ಲಿ ವೀಳ್ಯದೆಲೆ ಮಾರಾಟ ಮಾಡುವುದು ಉದ್ಯಾವರ ಜಮಾಅತಿಗೊಳಪಟ್ಟ ಅನುವಂಶೀಯ ಕುಟುಂಬಗೊಳಪಟ್ಟ ಒಬ್ಬ ಮುಸಲ್ಮಾನಾಗಬೇಕಾಗಿದೆ. ಇದರಂತೆ ಇದೇ ಕುಟುಂಬದಲ್ಲೊಬ್ಬನಾದ ಸಯ್ಯದ್ ಎಂಬಾತ ವೀಳ್ಯದೆಲೆ ಹಾಗೂ ತೆಂಗಿನ ಕಾಯಿ ಮಾರಾಟ ಮಾಡಿದ. ನಾಲ್ಕು ತೆಂಗಿನ ಕಾಯಿಗಳಲ್ಲಿ ಎರಡೆರಡನ್ನು ಅಣ್ಣ ದೈವ ಹಾಗೂ ತಮ್ಮ ದೈವ ಖರೀದಿಸಿ ತೆಂಗಿನ ಕಾಯಿ ಒಡೆಯುವ ಸ್ಪಧರ್ೆ ನಡೆಯಿತು.
   ಇದರಲ್ಲಿ ಅಣ್ಣ ದೈವ ಜಯಗಳಿಸಿದರೆ ಕೋಳಿ ಅಂಕದಲ್ಲಿ ಊರವರು ಗೆದ್ದಿರುವುದಾಗಿ ಲೆಕ್ಕ. ತಮ್ಮ ದೈವ ಜಯಗಳಿಸಿದರೆ ಪರವೂರಿನವರು ಜಯಗಳಿಸಿರುವುದಾಗಿ ಲೆಕ್ಕ. ಏ. 14 ಕ್ಕೆ ಪಂಚಾಂಗ ನೋಡುವ ಕಾರ್ಯಕ್ರಮ, 20 ರಂದು ಕ್ಷೇತ್ರ ದೈವಗಳ ಜಮಾಅತ್ ಭೇಟಿ, ಮೇ 1 ರಂದು ಉತ್ಸವ ಬಂಡಿಯ ಬೊಂಬೆಗಳಿಗೆ ಚಿನ್ನಾಭರಣ ಮುಹೂರ್ತ, ಮೇ 8 ರಂದು ಧ್ವಜಾರೋಹಣ, ಮೇ 11 ಹಾಗೂ 12 ಜಾತ್ರೆ ಹಾಗೂ 12 ರಂದು ಸಂಜೆ ಮುಂಡಿತ್ತಾಯ ನೇಮ ಜರಗಲಿದೆ.
   ಕ್ಷೇತ್ರ ಉತ್ಸವದ ಪ್ರತಿಯೊಂದು ಸಮಾರಂಭಗಳಲ್ಲೂ ಜಮಾಅತ್ ಸದಸ್ಯರು ಹಾಗೂ ಬ್ರಹ್ಮ ಸಭೆ ಸಿಂಹಾಸನ ಕಟ್ಟೆಯ ಎಡಬಲಗಳಲ್ಲಾಗಿ ಕೂರುವುದು ವಾಡಿಕೆಯಾಗಿದೆ. ದಿನನಿಶ್ಚಯದಂದು ಕ್ಷೇತ್ರದ ಮುಕ್ತೇಸರರಾದ ಸುಕುಮಾರ ಶೆಟ್ಟಿ ಯಾನೆ ಮಂಜು ಭಂಡಾರಿ, ತಿಮ್ಮ ಭಂಡಾರಿ, ದುಗ್ಗ ಭಂಡಾರಿ, ಮುಂಡ ಶೆಟ್ಟಿ ನೇತೃತ್ವ ನೀಡಿದರು.
  ಈ ಸಂದರ್ಭ ಡಾ. ಜಯಪಾಲ ಶೆಟ್ಟಿ, ಸಂಜೀವ ಶೆಟ್ಟಿ ಹಾಗೂ ತೀಯ ಸಮಾಜದ ಮುಖಂಡರು, ಗಾಣಿಗ ಸಮಾಜದ ಮುಖಂಡರು, ಬೋವೀಸ್ ಭಗವತೀ ಕ್ಷೇತ್ರದ ಮುಖಂಡರು ಸಹಿತ ಹಲವರು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries