ಇಂದಿನ ಹರತಾಳ ಯಶಸ್ಸಿಗೆ ದಲಿತ ಸಂಯುಕ್ತ ಹೋರಾಟ ಸಮಿತಿ ಕರೆ
ಬದಿಯಡ್ಕ : ಸುಪ್ರಿಂಕೋಟರ್್ನಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಸಡಿಲಿಕೆ, ಉತ್ತರ ಪ್ರದೇಶದಲ್ಲಿ ನಡೆದ ಸಮೂಹ ಹತ್ಯೆ, ಕೊಲೆಗೀಡಾದವರ ಕುಟುಂಬಕ್ಕೆ ನಷ್ಟಪರಿಹಾರ ನೀಡಬೇಕು ಮುಂತಾದ ಬೇಡಿಕೆಯನ್ನು ಮುಂದೊಡ್ಡಿ ದಲಿತ ಸಂಘಟನೆಗಳು ಕರೆನೀಡಿದ ಹರತಾಳವನ್ನು ಯಶಸ್ವಿಗೊಳಿಸಲು ಇತ್ತೇಚೆಗೆ ಬದಿಯಡ್ಕದಲ್ಲಿ ಸೇರಿದ ದಲಿತ ಸಂಯುಕ್ತ ಹೋರಾಟ ಸಮಿತಿ ಕರೆ ನೀಡಿದೆ.
ಬದಿಯಡ್ಕದಲ್ಲಿ ಈ ಬಗ್ಗೆ ದಲಿತ ಸಂಘಟನೆಗಳ ಸಭೆ ಜರಗಿತು. ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ, ಕಾಸರಗೋಡು ಜಿಲ್ಲಾ ಮೊಗೇರ ಸಂಘ, ಎಡಿಯಂಯಸ್ ಕಾಸರಗೋಡು, ಕೆ.ಡಿ.ಎಫ್, ಬಿ.ಯಸ್.ಪಿ ಕಾಸರಗೋಡು, ಅಂಬೇಡ್ಕರ್ ವಿಚಾರ ವೇದಿಕೆ ಸಂಯುಕ್ತವಾಗಿ ಸಭೆ ನಡೆಸಿತು.
ಸಭೆಯ ಅಧ್ಯಕ್ಷತೆಯನ್ನು ಆನಂದ ಕೆ ಮವ್ವಾರು ವಹಿಸಿದ್ದರು. ದಲಿತ್ ಕಾಂಗ್ರೇಸ್ ನೇತಾರ ಐತ್ತಪ್ಪ ಚೆನ್ನೆಗುಳಿ, ಚಂದ್ರಶೇಖರ್ ಕುಂಬಳೆ, ಸದಸ್ಯೆ ಶಾಂತಾ ಬಾರಡ್ಕ, ವಸಂತ ಅಜಕ್ಕೋಡು, ವಿನೋದ್ ಬೇಪು, ರಾಮ ಪಟ್ಟಾಜೆ, ಕೃಷ್ಣದಾಸ್ ಧಬರ್ೆತ್ತಡ್ಕ, ಕೃಷ್ಣ ಧಬರ್ೆತ್ತಡ್ಕ, ಸುಂದರಿ ಮಾರ್ಪನಡ್ಕ, ಮಾಧವ ಅರ್ಲಡ್ಕ, ವಿಜಯ ಬಾರಡ್ಕ, ಸುಧಾಕರ ಬೆಳ್ಳಿಗೆ, ಸುರೇಶ ಅಜಕ್ಕೋಡು ಉಪಸ್ಥಿತರಿದ್ದರು.
ಇದರ ಪೂರ್ವಭಾವಿಯಾಗಿ ಎಪ್ರಿಲ್ 8ರಂದು ಅಪರಾಹ್ನ 3 ಗಂಟೆಗೆ ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.