HEALTH TIPS

No title

      ಸಂಪಾದಕರ ಮಾತು: ಕಯ್ಯಾರರ ನೆನಪುಗಳೊಂದಿಗೆ ನಾಳೆಯಿಂದ ಸಮರಸದಲ್ಲಿ ಹೊಸತು:
    ಪ್ರೀತಿಯ ಬ್ಲಾಗ್ ಓದುಗರೇ, ಕಳೆದ ಕೆಲವು ತಿಂಗಳುಗಳಿಂದ ಸಮರಸ ಸುದ್ದಿ ಗಡಿನಾಡು ಕಾಸರಗೋಡು ಮತ್ತು ಇತರೆಡೆಗಳ ಕನ್ನಡ ಮನಸ್ಸುಗಳನ್ನು ಧನಾತ್ಮಕ ಸುದ್ದಿಗಳ ಮೂಲಕ ಮುಟ್ಟುತ್ತಿರುವುದು ಸಹೃದಯತೆಯ ಸಂಕೇತವೆಂದೇ ಭಾವಿಸಬಹುದಾಗಿದೆ. ಬದಲಾಗಿರುವ ಮನೋಭಾವ, ಆಸಕ್ತಿ, ಸಮಾಜಗಳ ಮಧ್ಯೆ ಏನಾಗಬೇಕೆಂಬ ಕಲ್ಪನೆಯ ತೊಳಲಾಟದಲ್ಲಿ ಒಂದಷ್ಟು ಮಾರ್ಗದಶರ್ಿಯಾಗಬಲ್ಲ ಮಾಹಿತಿಗಳನ್ನು ಅಕ್ಷರ ರೂಪದಲ್ಲಿ ದಾಟಿಸುವ ಮಧ್ಯೆ ನಾವು ಬೆಳೆದು ಬಂದಿರುವ ಪರಂಪರೆಯ ಅವಲೋಕನ ಅಗತ್ಯವಿದೆಯೆಂದೇ ಸಮರಸದ ಆಶಯ. ಈ ನಿಟ್ಟಿನಲ್ಲಿ ಮನಸ್ಸನ್ನು ಅರಳಿಸಬಲ್ಲ ಕಲೆ, ಸಾಹಿತ್ಯ, ಕ್ರೀಡೆಗಳ ಬಗ್ಗೆ ಆಲೋಚಿಸಲು, ಅನುಭವಿಸಲು ಸಮರಸ ಕಳಕಳಿ ವ್ಯಕ್ತಪಡಿಸುತ್ತಿದ್ದು, ಇದೀಗ ಅಂತಹದೊಂದು ಪ್ರಯತ್ನ ಸಾಗಿದೆ.
   ಗಡಿನಾಡು ಕಾಸರಗೋಡಿನ ಸಾಹಿತ್ಯ, ಸಂಸ್ಕೃತಿಗಳ ಪರಂಪರೆ, ಕೊಡುಗೆ ಕನ್ನಡ ಸಾರಸ್ವತ ಲೋಕದ ಭೀಮ ಹೆಜ್ಜೆ. ಗಡಿನಾಡಿನ ಈ ಮಣ್ಣಿನ ಸತ್ವ-ತತ್ವಗಳನ್ನು ನಾಲ್ದೆಸೆಗೆ ಪಸರಿಸಲು ಕಾರಣೀಭೂತರಾದ ಸಾಲುಸಾಲು ಸಾಧಕರಲ್ಲಿ ಶತಾಯುಷಿಯಾಗಿ ನಮ್ಮನ್ನಗಲಿದ ಕಯ್ಯಾರ ಕಿಂಞಿಣ್ಣ ರೈಗಳ ಬಗೆಗಿನ; ಅವರ ಸಾಹಿತ್ಯ ಸೇವೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹೊರತಂದಿರುವ ಕವಿ, ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಸಂಪಾದಿಸಿರುವ "ಕಯ್ಯಾರ ಗದ್ಯ ಸೌರಭ" ಕೃತಿಯ ಪುಸ್ತಕ ರೂಪದ ಪುಟಗಳನ್ನು ನಿಯಮಿತವಾಗಿ ನಾಳೆಯಿಂದ ಸಮರಸದಲ್ಲಿ ಓದುಗರಿಗೆ ಲಭ್ಯಗೊಳಿಸುವಲ್ಲಿ ಕಾಯರ್ೋನ್ಮುಖವಾಗುತ್ತಿದೆ. ಪ್ರತಿಯೊಬ್ಬ ಸಾಹಿತ್ಯ ಪ್ರೇಮಿಗಳ ಸಹಕಾರ, ಪ್ರೇರಣೆ ಇರಲಿ ಎಂಬ ಬೇಡಿಕೆಯೊಂದಷ್ಟೆ ನಮ್ಮದು.
                                            ಸಂಪಾದಕಿ
                                         ಸಮರಸ ಸುದ್ದಿ: ಕಾಸರಗೋಡು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries