HEALTH TIPS

No title

                        ಪೆರಡಾಲ ದೇವಸ್ಥಾನದ ಸಭಾಭವನದ ಮೇಲಂತಸ್ತು ಲೋಕಾರ್ಪಣೆ
    ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ಸಭಾಭವನದ ಮೇಲಂತಸ್ತನ್ನು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು  ಭಾನುವಾರ ಬೆಳಗ್ಗೆ ದೀಪ ಪ್ರಜ್ವಲನೆಗೈಯುವ ಮೂಲಕ ಉದ್ಘಾಟಿಸಿದರು.
    ಕಾರ್ಯಕ್ರಮದಂಗವಾಗಿ ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ, ಶತರುದ್ರಾಭಿಷೇಕ ನಡೆಯಿತು. ವೇದಮೂತರ್ಿ ಹರಿನಾರಾಯಣ ಮಯ್ಯ ಸತ್ಯನಾರಾಯಣ ಪೂಜೆಯನ್ನು ನಡೆಸಿಕೊಟ್ಟರು. ಬೆಳಗ್ಗೆ ಎಡನೀರು ಶ್ರೀಗಳವರಿಗೆ ಕ್ಷೇತ್ರದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಚಂದ್ರಹಾಸ ರೈ ಪೆರಡಾಲಗುತ್ತು ಹಾಗೂ ನೇಮಿರಾಜ ರೈ ಪೆರಡಾಲ ಶ್ರೀಗಳವರಿಗೆ ಹಾರಾರ್ಪಣೆಗೈದರು. ಸಭಾಭವನದ ಮೇಲಂತಸ್ತು ಉದ್ಘಾಟನೆಯ ಬಳಿಕ ಶ್ರೀಗಳ ಪಾದಪೂಜೆ, ಭಿಕ್ಷಾ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಅನ್ನಸಂತರ್ಪಣೆ ಜರಗಿತು.
ಅಪರಾಹ್ನ ನಡೆದ ಸಭಾಕಾರ್ಯಕ್ರಮದಲ್ಲಿ ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಐ.ವಿ.ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡಿದರು. ಅತಿಥಿಗಳಾಗಿ ಉದ್ಯಮಿ ಬಿ. ವಸಂತ ಪೈ ಬದಿಯಡ್ಕ ಮಾತನಾಡಿದರು. ಕಾಸರಗೋಡು ಡಿವೈಎಸ್ಪಿ ಹರಿಶ್ಚಂದ್ರ ನಾಕ್, ಡಾ. ಸೂರ್ಯ ಎನ್. ಶಾಸ್ತ್ರಿ ಬದಿಯಡ್ಕ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಮಾಜಿ ಮೊಕ್ತೇಸರ ಸಿ. ಸಂಜೀವ ರೈ, ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಚೇತನಾ ಎಂ.  ಶುಭಾಶಂಸನೆಗೈದರು. ಆಡಳಿತ ಮೊಕ್ತೇಸರ ಎಂ.ವೆಂಕಟಕೃಷ್ಣ ಶ್ರೀಗಳಿಗೆ ಹಾರಾರ್ಪಣೆಯನ್ನು ಮಾಡಿ ಸ್ವಾಗತಿಸಿದರು. ತಾಂತ್ರಿಕ ಸಲಹೆಗಾರರಾದ ಅಬಿಯಂತರ ಕೆ.ಎನ್.ಭಟ್ ಅವರನ್ನು ಗೌರವಿಸಲಾಯಿತು. ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಉದಯಶಂಕರ ಭಟ್ ಪಟ್ಟಾಜೆ ಸ್ವಾಗತಿಸಿ, ಜಯದೇವ ಖಂಡಿಗೆ ವಂದಿಸಿದರು. 
ಸಭಾಕಾರ್ಯಕ್ರಮದ ಬಳಿಕ ವಿದುಷಿ ವಾಣಿಪ್ರಸಾದ್ ಕಬೆಕ್ಕೋಡು ಇವರ ಶಿಷ್ಯೆ ಕು. ಶ್ರೀವರದಾ ಪಟ್ಟಾಜೆ ಇವರಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಹಾಗೂ ಸಂಜೆ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ಪಾಪಣ್ಣ ವಿಜಯ-ಗುಣಸುಂದರಿ ಪ್ರದರ್ಶನಗೊಂಡಿತು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries