HEALTH TIPS

No title

                ಮಲೆತ್ತಡ್ಕದಲ್ಲಿ ರಂಜಿಸಿದ ಕದಂಬ ಕೌಶಿಕೆ
   ಪೆರ್ಲ: ಸ್ವರ್ಗ ಮಲೆತ್ತಡ್ಕದ ಶ್ರೀಜಟಾಧಾರಿ ಮೂಲಸ್ಥಾನದಲ್ಲಿ ನಡೆಯುತ್ತಿರುವ ಅಡ್ಯತಕಂಡದ ಶ್ರೀನಾಗಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಜಟಾಧಾರಿ ಮಹಿಮೆ ಉತ್ಸವದ ಅಂಗವಾಗಿ ಸೋಮವಾರ ರಾತ್ರಿ ತೆಂಕುತಿಟ್ಟಿನ ಅಗ್ರಮಾನ್ಯ ಹಾಗೂ ಉದಯೋನ್ಮುಖ ಕಲಾವಿದರ ಕೂಡುವಿಕೆಯಲ್ಲಿ "ಕದಂಬ ಕೌಶಿಕೆ" ಯಕ್ಷಗಾನ ಬಯಲಾಟ ಸೇರಿದ ನೂರಾರು ಜನರ ಪ್ರಶಂಸೆಗೆ ಕಾರಣವಾಯಿತು.
   ಗಡಿನಾಡು ಕಾಸರಗೋಡಿನ ಗಡಿ ಗ್ರಾಮವಾದ ಪಡ್ರೆ ಸಾಮಾಜಿಕವಾಗಿ  ವಿವಿಧ ಶಾಖೆಗಳಲ್ಲಿ ಅತ್ಯಧಿಕ ಸಾಧನಾಶೀಲರಾದ ಸಜ್ಜನರ ಪುಣ್ಯ ನೆಲ. ಸಾಹಿತ್ಯ, ಕಲೆ, ವಿಜ್ಞಾನ, ತಂತ್ರಜ್ಞಾನ, ಉದ್ಯಮ, ಕೃಷಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧಕರನ್ನು ನೀಡಿದ ಪಡ್ರೆ ಮಣ್ಣಿನ ಫಲವಂತಿಕೆ ಅಪಾರವಾದುದು. ಜೊತೆಗೆ ಕಲಾ ಪ್ರೇಕ್ಷಕರಾಗಿ ಕಾಸರಗೋಡಿನ ಹೆಮ್ಮೆಯ ಗಂಡುಕಲೆಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದು, ಅದು ಸೋಮವಾರ ರಾತ್ರಿ ಮತ್ತೊಮ್ಮೆ ಸಾಬೀತಾಯಿತು.
   ಯಕ್ಷಗಾನ ಬಯಲಾಟದ ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸಾದ್ ಬಲಿಪ, ಚೆಂಡೆಯಲ್ಲಿ  ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮದ್ದಳೆಯಲ್ಲಿ ಶ್ರೀಧರ ಪಡ್ರೆ,  ಚಕ್ರತಾಳದಲ್ಲಿ ಅವಿನಾಶ್ ಶಾಸ್ತ್ರಿ ಸಹಕರಿಸಿದರು. ಮುಮ್ಮೇಳದಲ್ಲಿ ದೇವೇಂದ್ರನಾಗಿ ಯಕ್ಷಗುರು ಸಬ್ಬಣಕೋಡಿ ರಾಮ್ ಭಟ್, ಅಗ್ನಿಯಾಗಿ ದತ್ತೇಶ್ ಮಾವಿನಕಟ್ಟೆ, ವಾಯುವಾಗಿ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ, ವರುಣನಾಗಿ ಚಿತ್ತರಂಜನ್ ಕಡಂದೇಲು, ಶ್ರೀ ದೇವಿ ಕೌಶಿಕೆಯಾಗಿ ಪಾತಾಳ ಅಂಬಾ ಪ್ರಸಾದ್, ಶುಂಭನಾಗಿ ಮನೀಷ್ ಪಾಟಾಳಿ,ಎಡನೀರು., ಚಂಡನಾಗಿ ವೆಂಕಟೇಶ ಆಚಾರ್ಯ ಕಲ್ಲುಗುಂಡಿ, ಮುಂಡನಾಗಿ ಶಿವಾನಂದ ಶೆಟ್ಟಿ ಪೆರ್ಲ, ಸುಗ್ರೀವನಾಗಿ ಪೆರುವೋಡಿ ಸುಬ್ರಹ್ಮಣ್ಯ ಭಟ್, ಧೂಮ್ರಾಕ್ಷನಾಗಿ  ಮಧುರಾಜ್ ಎಡನೀರು, ರಕ್ತಬೀಜನಾಗಿ  ಸುಬ್ರಾಯ ಹೊಳ್ಳ ಕಾಸರಗೋಡು, ರಕ್ತೇಶ್ವರಿಯಾಗಿ ಶಿವರಾಜ್ ಬಜಕೂಡ್ಲು, ಕಾಳಿಯಾಗಿ  ದತ್ತೇಶ್, ಪಾತ್ರಿಯಾಗಿ  ಪೆರುವೋಡಿ ಸುಬ್ರಹ್ಮಣ್ಯ ಭಟ್ ಪಾತ್ರಗಳಿಗೆ ಜೀವತುಂಬಿ ಪ್ರೇಕ್ಷಕರ ಮನಗೆದ್ದರು. ಬಯಲಾಟ ಪ್ರದರ್ಶನವನ್ನು ಕೊಡೆಂಕಿಲ ವಾಸುದೇವ ಭಟ್, ಬರೆಕೆರೆ ಭಕ್ತಿಪೂರ್ವಕ ಪ್ರಾಯೋಜಿಸಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries