ದೇಶದಲ್ಲಿನ್ನು ವೇದಕಾಲದ ಶಿಕ್ಷಣ ವ್ಯವಸ್ಥೆ ಜಾರಿಯ ಬಗ್ಗೆ ಚಿಂತನೆ-ಸಚಿವ ಜಾವಡೇಕರ್
ಉಜ್ಜಯಿನಿ: ದೇಶದ ಶಿಕ್ಷಣ ವ್ಯವಸ್ಥೆಯನ್ನು ಬದಲು ಮಾಡುವ ಸುಳಿವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ನೀಡಿದ್ದಾರೆ. ಆಧುನಿಕ ಶಿಕ್ಷಣ ಪದ್ಧತಿಯ ಕೆಲ ಅಂಶಗಳನ್ನು ತೆಗೆದು ಹಾಕಿ, ವೇದಗಳ ಕಾಲದ ಶಿಕ್ಷಣದ ಅಂಶಗಳನ್ನು ಸೇರ್ಪಡೆ ಮಾಡಬೇಕಾದ ಅಗತ್ಯವಿದೆ ಎಂದಿದ್ದಾರೆ. ಸದ್ಯದ ಶಿಕ್ಷಣ ಪದ್ಧತಿ ಅಪರಾಧ ಪ್ರಕರಣಗಳನ್ನು ತಗ್ಗಿಸುವಲ್ಲಿ ವಿಫಲವಾಗಿದೆ ಎಂದೂ ಹೇಳಿದ್ದಾರೆ.
ಉಜ್ಜೆನಿಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿರಾಟ್ ಗುರುಕುಲ ಸಮ್ಮೇಳನದಲ್ಲಿ ಅವರು ಮಾತ ನಾಡಿದರು.
ಹೊಸ ಶಿಕ್ಷಣ ನೀತಿ ಜಾರಿಗೆ ತರುವ ಬಗ್ಗೆ ಸಲಹೆಗಳನ್ನು ಆಹ್ವಾನಿಸಲಾಗಿದೆ. 1 ತಿಂಗಳಲ್ಲಿ ಅದರ ಕರಡು ಸಿದ್ಧವಾಗಲಿದೆ. 3 ತಿಂಗಳ ಒಳಗಾಗಿ ಶಿಕ್ಷಣ ನೀತಿ ಸಿದ್ಧಗೊಳ್ಳಲಿದೆ ಎಂದಿದ್ದಾರೆ. ಇದರ ಜತೆಗೆ 11, 12ನೇ ತರಗತಿಗೆ "ಭಾರತ್ ಬೋಧ್' ಎಂಬ ಪಠ್ಯವನ್ನು ಪರಿಚಯಿಸುವ ಚಿಂತನೆ ನಡೆಸಿದ್ದೇವೆ. ಪ್ರಾಚೀನ ಭಾರತವು ಖಗೋಳವಿಜ್ಞಾನ, ವೈಮಾನಿಕ ಶಾಸ್ತ್ರ ಇತ್ಯಾದಿಗಳಿಗೆ ನೀಡಿದ ಕೊಡುಗೆ ಬಗ್ಗೆ ಈ ಪಠ್ಯದಲ್ಲಿ ಇರಲಿದೆ ಎಂದು ಸಚಿವರು ಸುಳಿವು ನೀಡಿದರು.