ಶ್ರೀಧೂಮಾವತಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ
ಕುಂಬಳೆ: ಆರಿಕ್ಕಾಡಿ ಚಾವಡಿ ಬಳಿಯ ಶ್ರೀ ಧೂಮಾವತಿ ತರವಾಡು ಭಂಡಾರ ಮನೆಯ ಶ್ರೀಧೂಮಾವತಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಲಶೋತ್ಸವ, ತರವಾಡು ಗೃಹಪ್ರವೇಶ ಹಾಗೂ ನೇಮೋತ್ಸವ ಭಾನುವಾರ ಆರಂಭಗೊಂಡಿದ್ದು, ಮಂಗಳವಾರದ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
ಭಾನುವಾರ ಸಂಜೆ 4ಕ್ಕೆ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ ಹೊರಟು ತರವಾಡು ಭಂಡಾರ ಮನೆಗೆ ಆಗಮಿಸಿತು. ಬಳಿಕ ಸಂಜೆ 5.30ಕ್ಕೆ ತಂತ್ರಿವರ್ಯ ಚಕ್ರಪಾಣಿ ದೇವಪೂಜಿತ್ತಾಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಉಗ್ರಾಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೊಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬ ಶುದ್ದಿ, ಬಿಂಬಾಧಿವಾಸ ವಿಧಿಗಳು ನೆರವೇರಿದವು. ರಾತ್ರಿ ಅನ್ನದಾನಗಳು ನಡೆದವು.
ಸೋಮವಾರ ಬೆಳಿಗ್ಗೆ 6ಕ್ಕೆ ಗಣಪತಿಹೋಮ, ಕಲಶಪೂಜೆ, ತರವಾಡು ಗೃಹಪ್ರವೇಶ, ಬೆಳಿಗ್ಗೆ 10.30ರ ಮಿಥುನ ಲಗ್ನದಲ್ಲಿ ಶ್ರೀದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, 11.30ಕ್ಕೆ ಪಾನಕ ಪೂಜೆ, ಮಧ್ಯಾಹ್ನ ಮಹಾಪೂಜೆ, ನಿತ್ಯನೈಮಿತ್ತಿಕ ನಿರ್ಣಯ, ಪ್ರಸಾದ ವಿತರಣೆ, ಅನ್ನದಾನಗಳು ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1.30 ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತ ಸಾಹಿಯ ಸಂಭ್ರಮ ನಡೆಯಿತು. ಸಂಜೆ ಧಾಮರ್ಿಕ ಸಭೆ ನಡೆಯಿತು. ಸಂಜೆ 5.30ಕ್ಕೆ ರಾಹುಗುಳಿಗನಿಗೆ ಬಡಿಸುವುದು, 6 ರಿಂದ ಶ್ರೀಧೂಮಾವತಿ ದೈವದ ಭಂಡಾರ ಇಳಿಯುವುದು, 7ಕ್ಕೆ ತೊಡಂಙಲ್, ರಾತ್ರಿ 7.30 ಕ್ಕೆ ಪರಿವಾರ ದೈವಗಳ ಭಂಡಾರ ಇಳಿದು ಬಳಿಕ ಕಲ್ಲಾಲಗದ ಗುಳಿಗನ ಕೋಲ, ಅನ್ನದಾನ ನಡೆಯಿತು. ರಾತ್ರಿ 10 ರಿಂದ ಕೊರಗತನಿಯ ದೈವಕೋಲ, ಕುಪ್ಪೆ ಪಂಜುಲರ್ಿ, ಕಲ್ಲುಟರ್ಿ ದೈವಗಳ ಕೋಲ ನಡೆಯಿತು.