HEALTH TIPS

No title

                ಮಾತೃಮೂಲ ಪದ್ಧತಿಗೆ ಹೊಕ್ಕುಳ ಬಳ್ಳಿ ಸಂಬಂಧ ಮಾದರಿ= ಗೋಪಾಲಕೃಷ್ಣ ಕುಲಾಲ್
    ಕಾಸರಗೋಡು : ತುಳುನಾಡಿನಲ್ಲಿ ಭೂತಾಳ ಪಾಂಡ್ಯನಿಂದಾಗಿ ಪ್ರಚಲಿತಕ್ಕೆ ಬಂದ ಅಳಿಯಕಟ್ಟು ಪದ್ಧತಿಯ ಹದಿನಾರು ಕಟ್ಟು ಹದಿನಾರು ಕಟ್ಟಾಳೆಗಳು  ಇಲ್ಲಿನ  ದೈವರಾಧನ ಸಂಸ್ಕೃತಿಯನ್ನು ಸದಾ ಜಾಗೃತವಾಗಿರಿಸಿದೆ.ನಮ್ಮ ತರವಾಡುಗಳು ರಕ್ತ ಸಂಬಂಧದ  ಮಾತೃ ಮೂಲ ಪದ್ಧತಿಯು ಹೊಕ್ಕುಳ ಬಳ್ಳಿಯ ಸಂಬಂಧಕ್ಕೆ ಮಾದರಿಯಾಗಿದೆ ಎಂದು ಉಪ್ಲೇರಿ ಮಂತ್ರಮೂತರ್ಿ ಗುಳಿಗ ಸನ್ನಿಧಿಯ ಪ್ರಧಾನ ಕಮರ್ಿ,ಧಾಮರ್ಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ಅಭಿಪ್ರಾಯ ಪಟ್ಟರು.
  ಅವರು ಬುಧವಾರ ಸಂಜೆ  ಕಾಟುಕುಕ್ಕೆಯಲ್ಲಿ ಜರಗಿದ ಪಡ್ಡಂಬೈಲು ಗುತ್ತಿನ ಧೂಮಾವತಿ ಹಾಗೂ ಪರಿವಾರ ದೈವಗಳ ಆಯುಧ ಪ್ರತಿಷ್ಠೆ ಹಾಗೂ  ಧರ್ಮನೇಮೋತ್ಸವ ಕಾರ್ಯಕ್ರಮದ ಅಂಗವಾಗಿ ಜರಗಿದ ಧಾಮರ್ಿಕ ಸಭೆಯಲ್ಲಿ ``ತುಳುನಾಡಿನ ಅಳಿಯ ಕಟ್ಟು ಸಂಸ್ಕೃತಿ"ಎಂಬ  ವಿಷಯದ ಬಗ್ಗೆ ವಿಶೇಷೋಪನ್ಯಾಸಗೈದು ಮಾತನಾಡಿದರು.
  ಹೊಸ ತಲೆಮಾರುಗಳಲ್ಲಿ ಭಾವನಾತ್ಮಕ ಸಂಬಂಧಗಳಲ್ಲಿ ಒಲವಿಲ್ಲದಿರುವುದು ವ್ಯಾಪಕ ಅಶಾಂತಿಗೆ ಕಾರಣವಾಗಲಿದೆ. ಮನೋಸ್ಥೈರ್ಯ, ಒಗ್ಗಟ್ಟಿನ ಸಮತಾ ಮನೋಭಾವ ಏಳಿಗೆಗೆ ಕಾರಣವಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಅವರು ತಿಳಿಸಿದರು. ಪ್ರಾಚೀನರು ಕಂಡುಕೊಂಡು ಆಚರಣೆಗಳ ಹಿಂದೆ ಸಮಗ್ರ ಜೀವಕೋಟಿಗಳ ಉತ್ಕರ್ಷ ಮಾತ್ರವಿದ್ದು, ಇಂದೀಗ ಜಾಗತಿಕವಾಗಿ ಪ್ರಪಂಚ ಹತ್ತಿರವಾಗಿದ್ದರೂ ಮನಸ್ಸು, ಹೃದಯ ವೈಶಾಲ್ಯತೆಗಳು ಕುಸಿದಿರುವುದು ಹಿನ್ನಡೆಗೆ ಕಾರಣವಾಗಲಿದೆ ಎಂದು ತಿಳಿಸಿದ ಅವರು, ಪರಂಪರೆಯನ್ನು ಮುನ್ನಡೆಸುವ ಮನಸ್ಸು ಎಲ್ಲರಲ್ಲಿರಲಿ ಎಂದು ಹಾರೈಸಿದರು.
   ಎಣ್ಮಕಜೆ ಗ್ರಾ. ಪಂ. ಸದಸ್ಯೆ  ಮಲ್ಲಿಕಾ ಜೆ. ರೈ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದರು. ಹಿರಿಯ ಸಾಮಾಜಿಕ ಮುಂದಾಳು ಸಂಜೀವ ರೈ  ಕೆಂಗಣಾಜೆ, ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ, ಪಡ್ಡಂಬೈಲು ಗುತ್ತಿನ ಹಿರಿಯವರಾದ ಶೇಷಪ್ಪ ರೈ ಸಭೆಯಲ್ಲಿ  ಉಪಸ್ಥಿತರಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries