ನೀಚರ್ಾಲ್ ಅಂಚೆಕಚೇರಿಯ ಅವ್ಯವಸ್ಥೆ-ನೆರೆಯ ಅಂಗಡಿಯಲ್ಲಿ ತೂಕ ನೋಡುವ ವ್ಯವಸ್ಥೆ
ಬದಿಯಡ್ಕ: ಒಂದೆಡೆ ಕೇಂದ್ರ ಸರಕಾರವು ಸಂವಹನ ಮಾಧ್ಯಮಗಳೂ ಸಹಿತ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರವು ಇಂದು ದಾಖಲೆ ನಿಮರ್ಿಸುತ್ತಿದೆ. ಇಲಾಖೆಗಳ ಕರ್ತವ್ಯ ಕ್ಷಮತೆಯಿಂದ ಆಡಳಿತ ಯಂತ್ರ ವೇಗ ಪಡೆದಿದೆ ಎಂದು ಪದೇಪದೇ ಹೇಳಿಕೊಳ್ಳುತ್ತಿದ್ದರೂ ಅದಿನ್ನೂ ನಗರ ಪ್ರದೇಶದ ಹೊರತು ಗ್ರಾಮೀಣ ಪ್ರದೇಶಕ್ಕೆ ಕಾಲಿಟ್ಟಂತೆ ಕಾಣುತ್ತಿಲ್ಲ. ಬಹುತೇಕ ಗ್ರಾಮೀಣ ಪ್ರದೇಶಗಳ ಜನರು ಇದೀಗಲೂ ಅಂತರಂಗದಲ್ಲಿ ಇಟ್ಟಿರುವ ಭರವಸೆಯಾಗಿ ಬೆಳೆದಿರುವ ಅಂಚೆಕಚೇರಿಗಳು ಪ್ರಾಥಮಿಕ ಮೂಲ ಸೌಕರ್ಯಗಳಿಂದ ವಂಚಿತವಾಗಿ ಸಮಸ್ಯೆಯ ಸುಳಿಯಲ್ಲಿ ತಿಣುಕಾಡುತ್ತಿರುವುದನ್ನು ಕಂಡೂ ಕಾಣದಂತೆ ಅಧಿಕೃತರು ಮರೆಮಾಚುತ್ತಿರುವುದು ಜನಸಾಮಾನ್ಯರ ಮೇಲೆ ಅವರಿಗಿರುವ ತಾತ್ಸಾರದ ಪ್ರತೀಕವಾಗಿಯೂ ಪರಿಗಣಿಸಬಹುದಾಗಿದೆ.
ಬದಿಯಡ್ಕ ಸಮೀಪದ ನೀಚರ್ಾಲು ಅಂಚೆಕಚೇರಿ ಇಂತಹದೇ ಮೂಲ ಸೌಕೈದಿಂದ ವಂಚಿತವಾಗಿದ್ದು ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿಯ ಅಂಚೆಕಚೇರಿಯಲ್ಲಿ ಅಂಚೆಗಳ ಲಕೋಟೆಗಳನ್ನು ತೂಕ ಮಾಡಲು ತಕ್ಕಡಿ ಅಥವಾ ಯಾವುದೇ ವ್ಯವಸ್ಥೆಗಳಿಲ್ಲದಿರುವುದರಿಂದ ಅಂಚೆ ಕಚೇರಿಯ ಸಮೀಪದ ಖಾಸಗೀ ವ್ಯಕ್ತಿಗಳ ಅಂಗಡಿಗಳ ಭಾರ ಮಾಪಕ ವ್ಯವಸ್ಥೆಯನ್ನು ಬಳಸಬೇಕಾದ ದುಸ್ಥಿತಿ ಒದಗಿದೆ. ಅದೂ ಗ್ರಾಹಕರೇ ಭಾರ ಮಾಪನಗೊಳಿಸಿ ಸ್ವತಃ ತರಬೇಕಾದ ಸ್ಥಿತಿ ಇದೆ.
ಶಿಕ್ಷಕರಾದ ರಾಜು ಕಿದೂರು ಎಂಬವರು ಇತ್ತೀಚೆಗೆ ರಿಜಿಸ್ಟರ್ ಪೋಸ್ಟ್ ಮಾಡಲು ನೀಚರ್ಾಲ್ ಅಂಚೆಕಚೇರಿಗೆ ತೆರಳಿದ್ದರು. "ಇಲ್ಲಿ ತಕ್ಕಡಿ ಇಲ್ಲ, ಅಂಗಡಿಗೆ ಹೋಗಿ ತೂಕ ನೋಡಿ ಬನ್ನಿ"ಎಂದು ಅಲ್ಲಿಯ ಅಧಿಕೃತರು ಅವರಿಗೆ ತಿಳಿಸಿದ್ದರು. ಬಳಕೆದಾರ ಅಂಗಡಿಗೆ ಹೋಗಿ ತೂಕ ನೋಡಿ ಬರಬೇಕಾದ ದುರ್ಗತಿ ಕೇಂದ್ರ ಸರಕಾರದ ಅಧೀನದಲ್ಲಿರುವ ಅಂಚೆ ಕಛೇರಿಗೆ ಬಂದಿರುವುದು ಸರಕಾರ ಜನಸಾಮಾನ್ಯರ ಬಗೆಗಿರಿಸಿರುವ ದೃಷ್ಟಿಕೋನದ ಸಂಕೇತವಾಗಿದ್ದು, ಬಳಕೆದಾರನ ಹಕ್ಕುಗಳನ್ನು ಬಳಸಲು ಇದು ಸರಿಯಾದ ಸಮಯವೆಂದು ತಿಳಿದು
ಕುಂಬಳೆ ಪ್ರಧಾನ ಅಂಚೆ ಕಛೇರಿಗೆ ರಾಜು ಕಿದೂರು ಅವರು ಕೂಡಲೇ ಕರೆ ಮಾಡಿ ವಿಷಯವನ್ನು ಗಮನಕ್ಕೆ ತಂದಿದ್ದು, ಬಳಿಕ ಕಾಸರಗೋಡು ಮುಖ್ಯ ಅಂಚೆ ಕಛೇರಿಗೆ ಕರೆದು ನೀಚರ್ಾಲು ಅಂಚೆ ಕಛೇರಿಗೆ 15 ದಿನಗಳೊಳಗೆ ಭಾರ ಮಾಪನ ವ್ಯವಸ್ಥೆಗೊಳಿಸಲು ಮನವಿ ಮಾಡಿದ್ದು, ತಪ್ಪಿದರೆ ಗ್ರಾಹಕ ನ್ಯಾಯಾಲಯದ ಮೂಲಕ ಹೋರಾಡುವ ಬಗ್ಗೆ ತಿಳಿಸಿದ್ದಾರೆ.
ಏನಂದ್ರು:
ಸರಕಾರಿ ಕಚೇರಿಗಳಲ್ಲಿ ಸಾಮಾನ್ಯ ಜನರು ಮಾತನಾಡದಿದ್ದರೆ ಸಣ್ಣ-ಪುಟ್ಟ ಸಮಸ್ಯೆಗಳಿಗೆ ಉತ್ತರವಿರಲಾರದು.ಪ್ರಜಾಪ್ರಭುತ್ವ ನಮಗೆ ನೀಡಿರುವ ಹಕ್ಕುಗಳನ್ನು ಬಳಸಬೇಕಾದ ಅನಿವಾರ್ಯತೆಯಿಂದ ನಾವು ಮಾತನಾಡಬೇಕಾಗಿದೆ.
ರಾಜು ಕಿದೂರು
ಶಿಕ್ಷಕ, ಭಾರ ಮೌಲ್ಯಮಾಪನದ ತಕ್ಕಡಿಯ ಬಗ್ಗೆ ಧ್ವನಿಯೆತ್ತಿದ ಗ್ರಾಹಕ.
ಏನಂತಾರೆ:
ತಕ್ಕಡಿ ಸಹಿತ ಮೂಲ ಸೌಕರ್ಯ ವಂಚಿತ ಅಂಚೆಕಚೇರಿಗೆ ಸೌಕರ್ಯ ಒದಗಿಸಲು ಮನವಿ ನೀಡಲಾಗಿದ್ದು, ಇಲಾಖೆಯ ಮೇಲಧಿಕಾರಿಗಳು ಈಗಾಗಲೇ ಅನುಮತಿ ನೀಡಿದ್ದಾರೆ. ಶೀಘ್ರ ತಕ್ಕಡಿಯನ್ನು ಒದಗಿಸಿಕೊಡಲಾಗುವುದು.
ಶಿವದಾಸನ್
ಜಿಲ್ಲಾ ಪ್ರಧಾನ ಅಂಚೆ ಅಧೀಕ್ಷಕ. ಕಾಸರಗೋಡು.