ಆರೋಗ್ಯ, ಸೌಹಾರ್ದತೆಯ ಮ್ಯಾರಥಾನ್
ಕಾಸರಗೋಡು: 'ಆರೋಗ್ಯ ಹಾಗೂ ಸೌಹಾರ್ದತೆ' ಸಂದೇಶದೊಂದಿಗೆ ಗುಡ್ ಮಾನರ್ಿಂಗ್ ಕಾಸರಗೋಡು ಆಶ್ರಯದಲ್ಲಿ ತೃತೀಯ ಕಾಸರಗೋಡು ಮ್ಯಾರಥಾನ್ ಭಾನುವಾರ ನಡೆಯಿತು.
ತಾಳಿಪಡ್ಪು ಮೈದಾನದಿಂದ ವಿದ್ಯಾನಗರದಲ್ಲಿರುವ ಕಾಸರಗೋಡು ನಗರಸಭಾ ಕ್ರೀಡಾಂಗಣಕ್ಕೆ ಮ್ಯಾರಥಾನ್ ಓಟ ನಡೆಯಿತು. ಬದಲಾದ ಜೀವನ ಶೈಲಿಗಳಿಂದಾಗಿ ಸೃಷ್ಟಿ ಯಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ವ್ಯಾಯಾಮದಿಂದ ಸಾಧ್ಯವಿದೆ. ಜಾತಿ-ಮತ ಬೇಧವಿಲ್ಲದೆ ಕಾಸರಗೋಡಿನ ಜಾತ್ಯತೀತ ಸೌಹಾರ್ದ ಒಕ್ಕೂಟಗಳನ್ನು ಹೆಚ್ಚಿಸಲಾಗುವುದು ಎಂದು ಘೋಷಿಸುವುದರೊಂದಿಗೆ ಮ್ಯಾರಥಾನ್ ನಡೆಯಿತು. ಮಕ್ಕಳ ಸಹಿತ ನೂರಾರು ಮಂದಿ ಓಟದಲ್ಲಿ ಭಾಗವಹಿಸಿದ್ದ್ಥರು.
ಐದೂವರೆ ವಯಸ್ಸಿನ ಮುಹಮ್ಮದ್ ಶಿಫಾ ಮುಹಬತ್ ಹಾಗೂ ಕಾಸರಗೋಡು ಡಿವೈಎಸ್ಪಿ ಎಂ.ವಿ. ಸುಕುಮಾರನ್ ಓಟ ಪೂರ್ಣಗೊಳಿಸಿ ಮ್ಯಾರಥಾನ್ನಲ್ಲಿ ಮಿಂಚಿದರು. ಭಾನುವಾರ ಬೆಳಗ್ಗೆ 6.30ಕ್ಕೆ ತಾಳಿಪಡ್ಪು ಮೈದಾನದಿಂದ ಆರಂಭಗೊಂಡ ಮ್ಯಾರಥಾನ್ಗೆ ಜಿಲ್ಲಾಧಿಕಾರಿ ಕೆ. ಜೀವನ್ಬಾಬು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ಸೈಮನ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ. ಶ್ರೀಕಾಂತ್, ಕಾಸರಗೋಡು ಡಿವೈಎಸ್ಪಿ ಎಂ. ವಿ. ಸುಕುಮಾರನ್, ಕಾಸರಗೋಡು ಪ್ರೆಸ್ಕ್ಲಬ್ ಅಧ್ಯಕ್ಷ ಟಿ.ಎ. ಶಾಫಿ, ಪ್ರೊ. ವಿ. ಗೋಪಿನಾಥನ್ ಮಾತನಾಡಿದರು. ಮುಹಮ್ಮದ್ ಹಾಶಿಂ ಸ್ವಾಗತಿಸಿ, ವಂದಿಸಿದರು.