HEALTH TIPS

No title

                ಅಭಿವೃದ್ದಿ ಪ್ರಕ್ರಿಯೆಯ ಹಿಂದಿದೆ ಸಂಕಷ್ಟ-ಮುಖ್ಯಮಂತ್ರಿ ಪಿಣರಾಯಿ ವಿಜಯನ್
   ಮುಳ್ಳೇರಿಯ: ಅಭಿವೃದ್ದಿ ಪ್ರಕ್ರಿಯೆಗಳಿಗೆ ಮನಸ್ಸನ್ನು ತೆರೆದುಕೊಳ್ಳದ ಹೊರತು ಅಭಿವೃದ್ದಿಯತ್ತ ಮುನ್ನಡೆಯಲಾಗದು. ಯಾವುದೇ ನೂತನ ಪ್ರಕ್ರಿಯೆಗಳ ಸಾಫಲ್ಯದ ಹಿಂದೆ ನೋವು-ಸಂಕಷ್ಟಗಳಿರುವುದು ಸಹಜ. ಆದರೆ ಆ ಬಳಿಕ ಅದು ನೆಮ್ಮದಿ ನೀಡುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾರಡ್ಕ ಬ್ಲಾಕ್ ಪಂಚಾಯತು ಕಾಯರ್ಾಲಯಕ್ಕೆ ಕರ್ಮಂತೊಡಿಯಲ್ಲಿ ನೂತನವಾಗಿ ನಿಮರ್ಿಸಲಾಗಿರುವ ಕಟ್ಟಡವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
  ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರ ಸಮಗ್ರ ಅಭಿವೃದ್ದಿಯನ್ನು ಸುಲಲಿತಗೊಳಿಸಿ ಆಡಳಿತ ವ್ಯವಸ್ಥೆಗೆ ಗುಣಮಟ್ಟವನ್ನು ತರುವಲ್ಲಿ ಸರಕಾರ ವ್ಯಾಪಕ ಕಾರ್ಯಯೋಜನೆ ಹೊಂದಿದ್ದು, ವಾಷರ್ಿಕ ಯೋಜನೆಗಳನ್ನು ಈ ವರ್ಷದಿಂದ ಏಪ್ರಿಲ್ ಮೊದಲವಾರದಿಂದಲೇ ಆರಂಭಿಸಲಾಗುತ್ತದೆ. ಡಿಸೆಂಬರ್ ವೇಳೆಗೆ ಶೇ. 70ರ ಅನುದಾನ ಬಳಕೆಯಾಗಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ವಿನಿಯೋಗಿಸಿದ ಅನುದಾನಗಳ ಕ್ಷಮತೆ ಪರಿಶೀಲನೆ ಮತ್ತು ಮಿಕ್ಕುಳಿತ ಶೇ.30ರ ವಿನಿಯೋಗಕ್ಕೆ ಕಾರ್ಯಯೋಜನೆ ವಿಸ್ತರಿಸಲು ರಾಜ್ಯ ಸರಕಾರ ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ನಿದರ್ೇಶನ ನೀಡಿದೆ ಎಂದವರು ತಿಳಿಸಿದರು. ಸ್ಥಳೀಯಾಡಳಿತ ಸಹಿತ ವಿವಿಧ ಸ್ತರಗಳ ಆಡಳಿತ ವ್ಯವಸ್ಥೆಯ ವೇಗತೆಯನ್ನು ಬಲಪಡಿಸಿ ಗ್ರಾಮೀಣ ಪ್ರದೇಶಗಳ ವಿಕಾಸಕ್ಕೆ, ಕುಡಿಯುವ ನೀರು, ಗೃಹ ನಿಮರ್ಾಣಗಳಂತಹ ಮೂಲಭೂತ ಸೌಕರ್ಯಗಳ ಉನ್ನತಿಗೆ ಸರಕಾರ ಬದ್ದ ಎಂದು ಅವರು ಈ ಸಂದರ್ಭ ಹೇಳಿದರು.
   ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿಗೆ ಸಂಬಂಧಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಗಡಿ ಪ್ರದೇಶ ತಲಪಾಡಿಯಿಂದ ಈಚೆಗಿನ ಹೆದ್ದಾರಿ ಪಕ್ಕದ ನಿರಾಶ್ರಿತರಾಗುವವರಿಗೆ ಗರಿಷ್ಠ ಪರಿಹಾರ ಧನ ನೀಡುವಲ್ಲಿ ರಾಜ್ಯ ಸರಕಾರ ಪ್ರಯತ್ನಿಸಲಿದೆ. ಇತರ ರಾಜ್ಯಗಳಿಗಿಂತ ಅಧಿಕ ಮೊತ್ತದ ಪರಿಹಾರ ಧನದ ಬಗ್ಗೆ ಈಗಾಗಲೇ ಕೇಂದ್ರ ಸರಕಾರ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದು ಅವರು ತಿಳಿಸಿದರು.
   ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ತೀವ್ರ ಹಿನ್ನಡೆಯ ಅಭಿವೃದ್ದಿಯಲ್ಲಿದೆ. ಜನರ ಮನೋಭಾವ ಬದಲಾಗದ ಹೊರತು ಹೊಸ ಅಭಿವೃದ್ದಿ ಚಟುವಟಿಕೆಗಳನ್ನು ಜಾರಿಗೊಳಿಸಲು ತೊಂದರೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಗಲಿಬಿಲಿಗೊಳ್ಳದೆ, ಯಾವುದೇ ಲಾಲಸೆಗೊಳಗಾಗದೆ ಅಭಿವೃದ್ದಿ ಪ್ರಕ್ರಿಯೆಯಲ್ಲಿ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
  ಅಭಿವೃದ್ದಿ ವಿಷಯಗಳಲ್ಲಿ ರಾಜಕೀಯ ನೇತಾರರರು ಪಕ್ಷ ರಾಜಕೀಯ ಪರಿಗಣಿಸಬಾರದು. ಪಕ್ಷಾತೀತರಾಗಿ ಅಭಿವೃದ್ದಿ ಪ್ರಕ್ರಿಯೆಗಳಿಗೆ ಕೈಜೋಡಿಸಿದಾಗಲಷ್ಟೆ ಅಭಿವೃದ್ದಿಯ ಮುನ್ನಡೆ ಸಾಧ್ಯ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಅಭಿವೃದ್ದಿ ಜನತೆಗೋಸ್ಕರ ಇರುವುದೆಂಬದನ್ನು ತಿಳಿಯಬೇಕು. ಹೀಗಾದಲ್ಲಿ ಮಾತ್ರ ಅಭಿವೃದ್ದಿ ಚಟುವಟಿಕೆಗಳು ಕ್ಲಪ್ತ ಸಮಯಕ್ಕೆ, ಭ್ರಷ್ಟಾಚಾರ ರಹಿತವಾಗಿ ಜಾರಿಗೊಳ್ಳುವುದೆಂದು ಅವರು ತಿಳಿಸಿದರು. 
    ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಂಸದ ಪಿ.ಕರುಣಾಕರನ್ ರವರು ಬ್ಲಾ.ಪಂ ನ 2018-19ನೇ ಸಾಲಿನ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ವನಿತಾ ಕ್ಯಾಂಟೀನ್ ನಿಮರ್ಾಣದ ಶಂಕುಸ್ಥಾಪನೆಯನ್ನು ನಿರ್ವಹಿಸಿದರು. ರಾಜ್ಯ ಕೇರಳೋತ್ಸವ ದ ಬಹುಮಾನಿತರನ್ನು ಸಭೆಯಲ್ಲಿ ಶಾಸಕ  ಎಂ.ರಾಜಗೋಪಾಲ್ ಗೌರವಿಸಿದರು.
  ಜಿಲ್ಲಾಧಿಕಾರಿ ಕೆ.ಜೀವನ್ ಬಾಬು,ಸಹಾಯಕ ಅಭಿವೃದ್ದಿ ಅಧಿಕಾರಿ ವಿ.ಎಸ್.ಸಂತೋಷ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಾರಡ್ಕ ಗ್ರಾ.ಪಂ. ಅಧ್ಯಕ್ಷೆ ಸ್ವಪ್ನ ಜೆ, ಬೇಡ್ಕ ಗ್ರಾ.ಪಂ. ಅಧ್ಯಕ್ಷ ನ್ಯಾಯವಾದಿ ಸಿ.ರಾಮಚಂದ್ರನ್, ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಎ.ಮುಸ್ತಫ ಹಾಜಿ, ಮುಳಿಯಾರ್ ಗ್ರಾ.ಪಂ. ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ, ಕುತ್ತಿಕೋಲ್ ಗ್ರಾ.ಪಂ. ಅಧ್ಯಕ್ಷೆ ಲಿಸಿ ವಿ.ಜೆ, ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಲತಾ ಎಂ, ಕುಂಬ್ಡಾಜೆ ಗ್ರಾ.ಪಂ.ಅಧ್ಯಕ್ಷೆ ಫಾತಿಮತ್ ಝುಹ್ರಾ ಸಹಿತ ವಿವಿಧ ಗ್ರಾ.ಪಂ. ಉಪಾಧ್ಯಕ್ಷರು, ಬ್ಲಾಕ್ ಪಂಚಾಯತು ಸದಸ್ಯರು, ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.
    ಕಾರಡ್ಕ ಬ್ಲಾ.ಪಂ.ಅಧ್ಯಕ್ಷೆ ಓಮನಾ ರಾಮಚಂದ್ರನ್ ಸ್ವಾಗತಿಸಿ, ಬ್ಲಾ.ಪಂ. ಕಾರ್ಯದಶರ್ಿ ಬಾಲಕೃಷ್ಣ ಬಿ. ವಂದಿಸಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries