HEALTH TIPS

No title

                ಭೌದ್ದಿಕ,ಮಾನಸಿಕ ವಿಕಾಸಕ್ಕೆ ರಂಗಸಂಸ್ಕೃತಿ ಶಿಬಿರ ಪೂರಕ-ನರಹರಿ ಮಾಸ್ತರ್ ಕಳತ್ತೂರು
      ಬದಿಯಡ್ಕ: ಮಕ್ಕಳಿಗೆ ಬೇಕಾದುದನ್ನು ಒದಗಿಸಿಕೊಡುವ ಜವಾಬ್ದಾರಿ ಅಧ್ಯಾಪಕರಿಗಿದೆ. ಶಾಲೆಯೆಂದರೆ ದೇವಾಲಯವಿದ್ದಂತೆ. ಮಕ್ಕಳ ಬೆಳವಣಿಗೆಗೆ ಬೇಕಾದ ವೇದಿಕೆಯನ್ನು ನಿಮರ್ಿಸಿ ಅವರಲ್ಲಿರುವ ಕೀಳರಿಮೆ, ಹಿಂಜರಿಕೆ, ಹೆದರಿಕೆಯನ್ನು ಹೋಗಲಾಡಿಸಿ ಬೌದ್ಧಿಕ, ಮಾನಸಿಕ ಹಾಗೂ ಸಾಮಾಜಿಕ ವಿಕಾಸ ಹೊಂದುವಂತೆ ಮಾಡುವುದಕ್ಕೆ ರಂಗಸಂಸ್ಕೃತಿಯಂತಹ ಶಿಬಿರಗಳು ಸೂಕ್ತವಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಕಳತ್ತೂರು ಅಭಿಪ್ರಾಯಪಟ್ಟರು.
ಅವರು ಶನಿವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ `ರಂಗಚಿನ್ನಾರಿ' ಕಾಸರಗೋಡು ಆಯೋಜಿಸಿದ ಎರಡು ದಿನಗಳ ರಂಗಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
   ಎಲ್ಲರಿಗೂ ಎಲ್ಲವೂ ಸಿಗಬೇಕೆಂದೇನಿಲ್ಲ. ಆದರೆ ಪ್ರಯತ್ನಿಸುವುದು ತಪ್ಪಲ್ಲ. ಈ ಶಾಲೆಯ ಮಕ್ಕಳಿಗೆ ಇಂತಹ ವಿಫುಲವಾದ ಅವಕಾಶಗಳನ್ನು ಸದಾ ನೀಡುತ್ತಿರುವ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರ ಶ್ರಮ ಶ್ಲಾಘನೀಯವಾಗಿದೆ. ಅಂತೆಯೇ ರಂಗಚಿನ್ನಾರಿಯು ಹತ್ತು ಹಲವು ಕನ್ನಡಪರವಾದ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತಿರುವುದು ಸಂತೋಷದಾಯಕವಾಗಿದೆ. ಇದರಿಂದಾಗಿ ಎಷ್ಟೋ ಮೂಲೆಯಲ್ಲಿರುವ ಮಕ್ಕಳಿಗೆ ವೇದಿಕೆ ಸಿಗುವಂತಾಗಿದೆ ಎಂದರು.
ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ತಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ ಇನ್ನು ಮುಂದೆಯೂ ಇಂತಹ ಹಲವಾರು ಮಕ್ಕಳ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ಸೃಜನಶೀಲತೆಯನ್ನು ಬೆಳೆಸುವಲ್ಲಿ ನಿಮ್ಮೆಲ್ಲರ ಸಹಕಾರ ಬಯಸುತ್ತೇವೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಕಾಶ್ ನಾಯಕ್ ಮಂಗಳೂರು ಮಕ್ಕಳಿಗೆ ವಿವಿಧ ರೀತಿಯ ಮುಖವಾಡಗಳ ತಯಾರಿಯನ್ನು ಸರಳವಾಗಿ ತಯಾರಿಸುವ ಕೌಶಲ್ಯವನ್ನು ಸ್ವಯಂ ತಾವೇ ಮಾಡುತ್ತಾ ಹುರಿದುಂಬಿಸಿದರು. ಅಂತಿಮವಾಗಿ ಮಕ್ಕಳು ತಯಾರಿಸಿದ ಮುಖವಾಡಗಳನ್ನು ಪ್ರದರ್ಶನಕ್ಕಿಡಲಾಯಿತು. ರಂಗಚಿನ್ನಾರಿಯ ನಿದರ್ೇಶಕ ಕಾಸರಗೋಡು ಚಿನ್ನಾ, ಗಾಯಕ ಕಿಶೋರ್ ಪೆರ್ಲ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಉಪಸ್ಥಿತರಿದ್ದರು. ಮಕ್ಕಳೇ ಈ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಎರಡು ದಿನಗಳ ಶಿಬಿರದಲ್ಲಿ ಮಕ್ಕಳೊಂದಿಗೆ ಅಧ್ಯಾಪಕರಾದ ಮಹೇಶ್ ಕೆ., ಸೂರ್ಯನಾರಾಯಣ ವಳಮಲೆ, ರಶ್ಮಿ ಪೆಮರ್ುಖ, ರಾಜೇಶ್ವರಿ ಪಿ., ಸರೋಜ ವಳಕ್ಕುಂಜ ಸಹಕರಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries