HEALTH TIPS

No title

                    ಬೇಸಿಗೆ ಮಳೆ ಸದ್ಬಳಕೆಗೆ ಇಂಗು ಗುಂಡಿ ರಚನೆ
     ಕಾಸರಗೋಡು: ತೀವ್ರ ಬರಗಾಲವನ್ನು  ಸಮರ್ಥವಾಗಿ ಎದುರಿಸುವುದಕ್ಕಾಗಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ಇಂಗು ಗುಂಡಿಗಳನ್ನು  ಸಿದ್ಧಪಡಿಸಲಾಗುತ್ತಿದೆ. ಅನಿರೀಕ್ಷಿತವಾಗಿ ಬಂದ ಬೇಸಿಗೆ ಮಳೆಯ ಸದುಪಯೋಗವನ್ನು  ಪಡೆಯುವ ನಿಟ್ಟಿನಲ್ಲಿ  ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಈ ನಿಟ್ಟಿನಲ್ಲಿ  ಸಜ್ಜಾಗಿವೆ.
   ಈ ಬಾರಿ ಜಲ ಸಂರಕ್ಷಣಾ ಚುಟುವಟಿಕೆಗಳನ್ನು  ಈಗಾಗಲೇ ಆರಂಭಿಸಿರುವ ಎಲ್ಲಾ  ಗ್ರಾಮ ಪಂಚಾಯತ್ಗಳು ಬಾವಿ, ಕೆರೆಗಳ ಪುನರುಜ್ಜೀವನ, ಮಳೆನೀರು ಕೊಯ್ಲು  ಇತ್ಯಾದಿಗಳನ್ನು  ಕಟ್ಟುನಿಟ್ಟಾಗಿ ಆರಂಭಿಸಿವೆ. ಸಾಮಾನ್ಯವಾಗಿ ಮೇ 15ರಿಂದ ಆರಂ`ಗೊಳ್ಳಬೇಕಾದ ಜಲ ಸಂರಕ್ಷಣಾ ಚಟುವಟಿಕೆಗಳು ಎಪ್ರಿಲ್ 2ರಿಂದ ಆರಂಭಗೊಂಡಿರುವುದಾಗಿ ಬಡತನ ಸರಳೀಕರಣ ವಿಭಾಗದ ಜಿಲ್ಲಾ  ಯೋಜನಾ ನಿದರ್ೇಶಕ ವಿ.ಕೆ.ದಿಲೀಪ್ ಹೇಳಿದ್ದಾರೆ.
    ಉತ್ತಮ ಮಳೆಯಾಗುತ್ತಿದ್ದರೂ, ಕಾಸರಗೋಡು ಜಿಲ್ಲೆಯು ಕಠಿಣ ಬರಗಾಲ ಎದುರಿಸುತ್ತಿದೆ. ಜಿಲ್ಲೆಯಲ್ಲಿ  12 ಹೊಳೆ ಅಥವಾ ನದಿಗಳು ಹರಿಯುತ್ತಿವೆ. ಎರಡು ಸಾವಿರದಷ್ಟು  ಕೆರಗಳು, ನೂರಕ್ಕೂ ಅಧಿಕ ಸುರಂಗಗಳು ಜಿಲ್ಲೆಯಲ್ಲಿವೆ. ಆದರೆ ನಿಖರವಾದ ಜಲ ಸಂರಕ್ಷಣಾ ಕಾಯರ್ಾಚರಣೆಗಳು ಇಲ್ಲದಿರುವುದರಿಂದ ಮಳೆನೀರು ಹರಿದು ಸಮುದ್ರ ಸೇರುತ್ತಿದೆ.
ಮುಂದಿನ ಇಪ್ಪತ್ತು  ವರ್ಷಗಳ ರಾಜ್ಯದ ಯೋಜನೆಯಾಗಿ ಜಿಲ್ಲೆಯಲ್ಲಿ  ಜಲ ಸಂರಕ್ಷಣಾ ಚಟುವಟಿಕೆಗಳನ್ನು  ನಿದರ್ೇಶಿಸಲಾಗಿದೆ. ಜಲ ಜೀವನ ಯೋಜನೆಯ ಕಾರ್ಯಯೋಜನೆ, ಮಳೆ ಕೊಯ್ಲು  ಮೊದಲಾದ ಚಟುವಟಿಕೆಗಳನ್ನು  ಏಪ್ರಿಲ್ ತಿಂಗಳಲ್ಲೇ ಜಾರಿಗೊಳಿಸಿದರೆ ಜಿಲ್ಲೆಯು ತೀವ್ರ ಬರಗಾಲದ ಪರಿಸ್ಥಿತಿಯಿಂದ ಹೊರಬರಲಿದೆ ಎಂದು ಅಭಿಪ್ರಾಯಪಡಲಾಗಿದೆ.
   ಈ ಬಾರಿ ಉತ್ತಮ ಬೇಸಿಗೆ ಮಳೆ ಲಭಿಸುತ್ತಿರುವುದರಿಂದ ಮಲೆನಾಡಿನಲ್ಲಿ  ನೀರಿನ ಮಟ್ಟ  ಏರಿಕೆಯಾಗಿದೆ. ಆದರೆ ಕಾಸರಗೋಡು, ಮಂಜೇಶ್ವರ, ಕಾರಡ್ಕ ಬ್ಲಾಕ್ ಪಂಚಾಯತ್ಗಳ ವ್ಯಾಪ್ತಿಯಲ್ಲಿ  ನೀರಿನ ಮಟ್ಟ  ದಿನೇ ದಿನೇ ಕುಸಿಯುತ್ತಿದೆ. ಪುತ್ತಿಗೆ ಗ್ರಾಮ ಪಂಚಾಯತ್ನ ಪ್ರದೇಶಗಳಲ್ಲಿ  16.31 ಮೀಟರ್ನಷ್ಟಿದ್ದ  ನೀರು ಇದೀಗ 15.95 ಮೀಟರ್ಗೆ ಇಳಿದಿದೆ. ಚೆಂಗಳ ಪಂಚಾಯತ್ನಲ್ಲಿ  20.74 ಮೀಟರ್ನಷ್ಟಿದ್ದ  ನೀರು 18.19 ಮೀಟರ್ಗಿಳಿದಿದೆ. ಬಂದಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ  25.37 ಮೀಟರ್ನಷ್ಟಿದ್ದ  ನೀರು 24.24 ಮೀಟರ್ಗಿಳಿದಿದೆ. ಪನತ್ತಡಿಯಲ್ಲಿ  8.89 ಮೀಟರ್ನಷ್ಟಿದ್ದ  ನೀರು ಈಗ 7.65 ಮೀಟರ್ಗೆ ಕುಸಿದಿದೆ. ಈ ಬಗ್ಗೆ  ಇನ್ನಷ್ಟು  ಸಮೀಕ್ಷೆಗಳು ನಡೆಯುತ್ತಿವೆ.
ವಿವಿ` ಕಾರ್ಯಯೋಜನೆ ಅನುಷ್ಠಾನ : ಕಾಸರಗೋಡು ಜಿಲ್ಲೆಯ 38 ಗ್ರಾಮ ಪಂಚಾಯತ್ಗಳಲ್ಲಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆಗಳನ್ನು  ಕಾರ್ಯದಕ್ಷಗೊಳಿಸುವುದು, ಇಂಗು ಗುಂಡಿಗಳನ್ನು  ನಿಮರ್ಿಸುವುದು ಮುಂತಾದ ಯೋಜನೆಗಳು ಆರಂ`ಗೊಂಡಿರುವುದು ಉತ್ತಮ ಸೂಚನೆಯಾಗಿದೆ. ಜಿಲ್ಲೆಯ ಬಹುತೇಕ ಪಂಚಾಯತ್ಗಳಲ್ಲಿ  ಇಂಗು ಗುಂಡಿಗಳನ್ನು  ನಿಮರ್ಿಸಿ ಮಳೆ ನೀರು ಕಟ್ಟಿನಿಲ್ಲುವಂತೆ ಮಾಡಲು ಪ್ರಾಥಮಿಕ ಹಂತದ ಕ್ರಮಗಳನ್ನು  ಕೈಗೊಳ್ಳಲಾಗಿದೆ. ಈ ಮೂಲಕ ಅತೀ ಹೆಚ್ಚು  ಬರಗಾಲ ಇರುವ ಪಂಚಾಯತ್ಗಳ ಇಳಿಜಾರು ಪ್ರದೇಶಗಳನ್ನು  ಆಯ್ಕೆ ಮಾಡಿ ಇಂಗು ಗುಂಡಿಗಳನ್ನು  ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries