HEALTH TIPS

No title

          ಶಲ್ಯ ಸಾರಥ್ಯ-ಸಮಾಜೋತ್ಸವದಲ್ಲಿ ಪಾಲ್ಗೊಳ್ಳದಂತೆ ಒತ್ತಡ
   ಬದಿಯಡ್ಕ: ವಿಹಿಂಪ ಬದಿಯಡ್ಕ ಪ್ರಖಂಡ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಅಪರಾಹ್ನ ಬದಿಯಡ್ಕ ಬೋಳುಕಟ್ಟೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವದ ಅಧ್ಯಕ್ಷತೆ ವಹಿಸಲಿರುವ, ಬದಿಯಡ್ಕ ಗ್ರಾ.ಪಂ. ಅಧ್ಯಕ್ಷರೂ, ಕಾಂಗ್ರೆಸ್ಸ್ ಮುಖಂಡರೂ ಆಗಿರುವ ಕೆ.ಎನ್ ಕೃಷ್ಣ ಭಟ್ ವಿರುದ್ದ ಮುಸ್ಲಿಂಲೀಗ್ ಮತ್ತು ಕಾಂಗ್ರೆಸ್ಸ್ ಪಕ್ಷ ಕೊನೆಯ ಕ್ಷಣಗಳು ಬಾಕಿ ಉಳಿದಿರುವಂತೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಕೃಷ್ಣ ಭಟ್ ರವರನ್ನು ಪದಚ್ಯುತಗೊಳಿಸುವ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಬೆದರಿಕೆ  ನೀಡಿದೆ.
   ಕೆ.ಎನ್. ಕೃಷ್ಣ ಭಟ್ ಹಾಗೂ ಅವರ ತಂದೆ ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಪಾರಂಪರಿಕವಾಗಿ ಕಾಂಗ್ರೆಸ್ಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡವರಾಗಿದ್ದು, ಕೆ.ಎನ್ ಕೃಷ್ಣ ಭಟ್ ಮತ್ತು ಅವರ ಪತ್ನಿ ಕಾಂಗ್ರೆಸ್ಸ್ ನಿಂದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪಧರ್ಿಸಿ ಕಳೆದ ಸಾಲಿನಲ್ಲಿ ಸದಸ್ಯರಾಗಿದ್ದರು. ಪ್ರಸ್ತುತ ಸಾಲಿನಲ್ಲಿ ಕೆ.ಎನ್ ಕೃಷ್ಣ ಭಟ್ ಕಾಂಗ್ರೆಸ್ಸ್ ನಿಂದ ಮತ್ತೆ ಸ್ಪಧರ್ಿಸಿ ಗೆಲುವು ಪಡೆದು ಮುಸ್ಲಿಂಲೀಗ್ ಸಖ್ಯದೊಂದಿಗೆ ಬದಿಯಡ್ಕ ಗ್ರಾ.ಪಂ. ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
   ಈ ಮಧ್ಯೆ ಇದೀಗ ವಿಹಿಂಪ ಶುಕ್ರವಾರ ಬದಿಯಡ್ಕದಲ್ಲಿ ಹಮ್ಮಿಕೊಂಡ ಬೃಹತ್ ಹಿಂದೂ ಸಮಾಜೋತ್ಸವಕ್ಕೆ ಕೆ.ಎನ್ ಕೃಷ್ಣ ಭಟ್ ರವರನ್ನು ಅಧ್ಯಕ್ಷರನ್ನಾಗಿ ಕೇಳಿಕೊಂಡಾಗ ಒಪ್ಪಿಗೆ ಸೂಚಿಸಿದ್ದು, ಕಳೆದ ಒಂದೂವರೆ ತಿಂಗಳುಗಳ ಹಿಂದೆಯೇ ಕೃಷ್ಣ ಭಟ್ ರವರ ಅಧ್ಯಕ್ಷತೆಯ ಆಯ್ಕೆ ನಿಶ್ಚಯವಾಗಿದ್ದರೂ ಈವರೆಗೆ ಯಾವುದೇ ತಕರಾರು ಎತ್ತದ ಲೀಗ್ ಹಾಗೂ ಕಾಂಗ್ರೆಸ್ಸ್ ಸಮಾಜೋತ್ಸವಕ್ಕೆ ಗಂಟೆಗಳು ಬಾಕಿ ಉಳಿದಿರುವಂತೆ ತಗಾದೆ ಎತ್ತಿರುವುದು ತೀವ್ರ ಚಚರ್ೆಗೆ ಗ್ರಾಸವಾಗಿದೆ.
   ಬದಿಯಡ್ಕ ಗ್ರಾಮ ಪಂಚಾಯತು, ಯುಡಿಎಫ್ ಚುಕ್ಕಾಣಿಯಲ್ಲಿ ಕಳೆದ ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಕೆ.ಎನ್ ಕೃಷ್ಣ ಭಟ್ ಯುಡಿಎಫ್ನ ಪ್ರಧಾನ ಶಕ್ತಿಯಾಗಿ ಗುರುತಿಸಿಕೊಂಡಿದ್ದರು. ವೈಯುಕ್ತಿಕ ವರ್ಚಸ್ಸು ಮತ್ತು ಪಾರಂಪರಿಕವಾಗಿ ಕಾಂಗ್ರೆಸ್ಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ- ಮುಖಂಡರಾಗಿ ಪ್ರಭಾವಿ ವ್ಯಕ್ತಿಯಾಗಿರುವರು. ಆದರೆ ವಿಹಿಂಪ ಶುಕ್ರವಾರ ಹಮ್ಮಿಕೊಂಡಿರುವ ಹಿಂದೂ ಸಮಾಜೋತ್ಸವದ ಅಧ್ಯಕ್ಷರಾಗಿ ಆಯ್ಕೆಮಾಡಿರುವುದು ಯುಡಿಎಫ್ನ ಪ್ರಧಾನ ಅಂಗಪಕ್ಷವಾದ ಮುಸ್ಲಿಂಲೀಗ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ ಒಂದೂವರೆ ತಿಂಗಳ ಹಿಂದೆಯೇ ಸಮಾಜೋತ್ಸವದ ಅಧ್ಯಕ್ಷರನ್ನಾಗಿ ಭಟ್ ರವರನ್ನು ಆಯ್ಕೆ ಮಾಡಿ ಘೋಷಿಸಿದ್ದರೂ ಸಮಾಜೋತ್ಸವಕ್ಕೆ ಗಂಟೆಗಳು ಬಾಕಿಯಿರುತ್ತ ಅವರನ್ನು ತೀಮರ್ಾನದಿಂದ ಹೊರಬರುವಂತೆ ಎಚ್ಚರಿಸಿರುವುದು ಮತ್ತು ಬೆದರಿಕೆಯೊಡ್ಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
   ಏನಂತಾರೆ ಕೆ.ಎನ್.ಕೃಷ್ಣ ಭಟ್ ರವರು:
   ಪಕ್ಷ ಯಾವುದಿದ್ದರೂ ಹಿಂದೂ ಸಮಾಜ ನನ್ನ ಮೊದಲ ಆದ್ಯತೆಯಾಗಿದೆ. ಜೊತೆಗೆ ಒಂದೂವರೆ ತಿಂಗಳ ಹಿಂದೆಯೇ ನನ್ನನ್ನು ಸಮಾಜೋತ್ಸವದ ಅಧ್ಯಕ್ಷನನ್ನಾಗಿ ಆಯ್ಕೆಗೊಳಿಸಿದ್ದರೂ ಈವರೆಗೆ ಲೀಗ್ ಆಗಲಿ ಕಾಂಗ್ರೆಸ್ಸ್ ಪಕ್ಷದ ಹಿರಿಯ ಮುಖಂಡರಾಗಲಿ ಏನೊಂದೂ ಸೂಚನೆ ನೀಡದೆ ಕೊನೇ ಕ್ಷಣದಲ್ಲಿ ಎಚ್ಚರಿಕೆ ನೀಡಿರುವುದು ಸರಿಯಲ್ಲ. ಏನಿದ್ದರೂ ಕೊಟ್ಟ ಮಾತಿನಂತೆ ಸಮಾಜೋತ್ಸವದ ಅಧ್ಯಕ್ಷನಾಗಿ ಸ್ಥಾನ ಅಲಂಕರಿಸುವುದು ಶತಸಿದ್ದ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸ್ ಪಕ್ಷ ಕೈಗೊಳ್ಳುವ ತೀಮರ್ಾನಕ್ಕೆ ಬದ್ದನಾಗಿರುವೆ. ಗ್ರಾ.ಪಂ. ಆಡಳಿತಕ್ಕೆ ಲೀಗ್ ಬೆಂಬಲ ಹಿಂಪಡೆದರೆ ಆ ಬಗ್ಗೆ ತಲೆಕೆಡಿಸೆನು. ಅಧಿಕಾರ ಎಂದೂ ಶಾಶ್ವತ ಅಲ್ಲ ಎಂದು ನಂಬಿರುವ ನನಗೆ ಅಧ್ಯಕ್ಷನಾಗಿ ಮುಂದುವರಿಯಲೇ ಬೇಕೆಂಬ ಹಠ ಇಲ್ಲ.
                     ಕೆ.ಎನ್ ಕೃಷ್ಣ ಭಟ್
                ಅಧ್ಯಕ್ಷರು ಬದಿಯಡ್ಕ ಗ್ರಾ.ಪಂ.
                       ಬದಿಯಡ್ಕ ಬೃಹತ್ ಹಿಂದೂ ಸಮಾಜೋತ್ಸವದ ಅಧ್ಯಕ್ಷರು.
           

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries