HEALTH TIPS

No title

                         ಡಾ. ಹರಿಕೃಷ್ಣ ಭರಣ್ಯ ಅವರಿಗೆ ಮುಳಿಯ ಪ್ರಶಸ್ತಿ
    ಕುಂಬಳೆ: ನಾಡೋಜ ಮುಳಿಯ ತಿಮ್ಮಪ್ಪಯ್ಯ ಅವರ ಸ್ಮರಣಾರ್ಥ ನೀಡುವ 'ಮುಳಿಯ ಪ್ರಶಸ್ತಿ'ಗೆ ಖ್ಯಾತ ಸಾಹಿತಿ, ವಿದ್ವಾಂಸ ಡಾ. ಹರಿಕೃಷ್ಣ ಭರಣ್ಯ ಅವರು ಭಾಜನರಾಗಿದ್ದಾರೆ.
   ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಮಿತಿ 1999ರಲ್ಲಿ ದತ್ತಿ ನಿಧಿ ಸ್ಥಾಪಿಸಿ ಪ್ರತಿ ವರ್ಷ ಹಿರಿಯ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಭರಣ್ಯದಲ್ಲಿ ಜನಿಸಿದ ಡಾ. ಹರಿಕೃಷ್ಣ ಭರಣ್ಯ ಅವರು ತಮಿಳುನಾಡಿನ ಮದುರೈ ಕಾಮರಾಜ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾದವರು. ಪ್ರಸ್ತುತ ಕುಂಬಳೆ ಸಮೀಪದ ನಾಯ್ಕಾಪು ಪರಿಸರದಲ್ಲಿ ವಾಸಿಸುತ್ತಿರುವ ಡಾ. ಭರಣ್ಯ ಕನ್ನಡ, ಹವಿಗನ್ನಡ, ತುಳು, ತಮಿಳು, ಮಲಯಾಳ ಹೀಗೆ ಬಹುಭಾಷೆಗಳ ಪಾಂಡಿತ್ಯವನ್ನು ಹೊಂದಿದ್ದು, ವಿಮಶರ್ೆ, ಸಂಶೋಧನೆ ಸಹಿತ ಸೃಜನಶೀಲ ಸಾಹಿತ್ಯ ಪ್ರಕಾರಗಳಿಗೆ ನೀಡಿರುವ ಕೊಡುಗೆ ಮನ್ನಿಸಿ ಮುಳಿಯ ಪ್ರಶಸ್ತಿ ಒಲಿದುಬಂದಿದೆ.
    ಡಾ.ಭರಣ್ಯರು ವಿಮಶರ್ೆ- ಸಂಶೋಧನೆಗೆ ಸಂಬಂಧಿಸಿ ಪ್ರವೇಶ, ಸಂಶೋಧನಾ ವಿಧಾನ, ಹೊಸಗನ್ನಡ ಸಾಹಿತ್ಯದ ಉಗಮ ವಿಕಾಸ, ಕಾವೇರಿಕಾನ ಕೃಷ್ಣ ಭಟ್ಟರ ಬದುಕು ಬರಹ, ಈ ನೆಲದ ಕಂಪು, ತುಳುವ ಮಂದಾರ, ತುಳು ನುಡಿ ಸಂಸ್ಕೃತಿ, ತಮಿಳು ನೆಲ, ತಗಳಿ ಶಿವಶಂಕರ ಪಿಳ್ಳೈ, ಕನ್ನಡ ನಾಟಕದ ಉಗಮ ಮತ್ತು ವಿಕಾಸ, ಮನ ಮಾನಸ, ಉಪ ಸಂಸ್ಕೃತಿ, ಕಾದಂಬರಿ ಎಂಬ ಕಾಲಕೋಶ, ಭರಣಿ, ಓದಿದ್ದ ಬರೆದದ್ದು, ಸಮಾಜಕ್ಕಾಗಿ ಬದುಕಿದ ವೈದ್ಯೆ, ಸಾಹಿತಿ-ಸಬಿತಾ ಮರಕಿಣಿ, ಮಧುರ ಸೇತು ಹಾಗೂ ಕವನ-ಮುಕ್ತಕಗಳಾದ ಕುತುಬ್ ಮಿನಾರ್, ಗೆಣಸಲೆ, ಸಾವಿರದ ಒಂದು ಗೆಣಸಲೆ, ನಾಟಕಗಳು, ಬದ್ಧ, ಹೀಂಗೊಂದು ಮದುವೆ, ಪಾಲು ಪಂಚಾಯಿತಿಕೆ, ಗೋಕರ್ಣ ಮಂಡಲೇ ಪರಶುರಾಮ ಕ್ಷೇತ್ರೇ, ಕಾದಂಬರಿಗಳಾದ ಮೂಡು ಮಜಲು, ದೊಡ್ಡ ಜಾಲು, ಪ್ರತಿ ಸ್ವರ್ಗ, ಪ್ರತಿ ಸೃಷ್ಟಿ, ಅನುಭವ ಕಥನಗಳಾದ ಮದುರೆಯ ನೆನಪುಗಳು, ನೆನಪೀಗ ಮಧುರ, ಲಲಿತ ಪ್ರಬಂಧಗಳಾದ ರಸಾಯನ, ಎಂಬಂತೆ ಮತ್ತು ಇತರ, ತುಳು ಕೃತಿಗಳಾದ ಬಚ್ಚಿರೆ ಬಜ್ಜೆಯಿ, ನಾಲನೇ ಬುಲೆ, ಸಂಪಾದಿತ ಕೃತಿಗಳಾದ ಮಧುರ, ಕದಂಬ, ನುಡಿ ಸಂಸ್ಕೃತಿ, ಕಾನದ ಸಾನಿಧ್ಯಗಳು ಎಂಬ ಕೃತಿಗಳನ್ನು ನಾಡಿಗೆ ಸಮಪರ್ಿಸಿದ್ದಾರೆ. ಪ್ರಸ್ತಿತ ಹವಿಗನ್ನಡ ನಾಟಕ ಸಂಪುಟ ಇದೀಗ ಮುದ್ರಣದ ಹಂತದಲ್ಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries