HEALTH TIPS

No title

             "ಬಡ್ಸ್ ಶಾಲಾ ಮಕ್ಕಳೊಂದಿಗೆ ಒಂದು ದಿನ" ವಿಶಿಷ್ಟ ರೀತಿಯಲ್ಲಿ ವಿಷು ಆಚರಣೆ"
    ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು,  ಸಾಂತ್ವನ ಬಡ್ಸ್ ಸ್ಪೆಷಲ್ ಸ್ಕೂಲ್ ಕನ್ನಟಿಕಾನ ಮತ್ತು ಸಹೃದಯೀ ಸಂಗಮ ಕಣ್ಣೂರು ನೇತೃತ್ವದಲ್ಲಿ ವಿಷು ಹಬ್ಬ ಆಚರಣೆಯ ಸಲುವಾಗಿ "ಬಡ್ಸ್ ಶಾಲಾ ಮಕ್ಕಳೊಂದಿಗೆ ಒಂದು ದಿನ" ವಿಶೇಷ ಕಾರ್ಯಕ್ರಮವು  ಪಂಚಾಯತು ಸಭಾ ಭವನದಲ್ಲಿ  ಗುರುವಾರ ನಡೆಯಿತು.
    ರುಡ್ಸೆಟ್ ಸಂಸ್ಥೆಯವರಿಂದ ಎಲ್.ಇ.ಡಿ ಬಲ್ಬ್ ತಯಾರಿಕೆ ಪ್ರಾತ್ಯಕ್ಷಿಕೆ,  ಎಲ್.ಇ.ಡಿ ಬಲ್ಬ್ ತರಬೇತಿ ಚಚರ್ಾಕೂಟ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತು ಅಧ್ಯಕ್ಷ ರೂಪವಾಣಿ ಆರ್ ಭಟ್ ಅವರು ವಹಿಸಿ ವಿಶಿಷ್ಟ ಚೇತನ ಮಕ್ಕಳ ವಿಶೇಷ ಸಾಮಥ್ರ್ಯಗಳನ್ನು ಸಮಾಜದ ಮುಖ್ಯ ಧಾರೆಯಲ್ಲಿ ತಂದು ಗುರುತಿಸುವಂತೆ  ಮಾಡುವ ಈ ರೀತಿಯ ಕಾರ್ಯಕ್ರಮಗಳು ಪುಟಾಣಿಗಳಿಗೂ ಹೆತ್ತವರಿಗೂ  ಮಾದರಿಯಾಗಿರುತ್ತದೆ ಎಂದರು. 
  ಡಾ. ಮೋಹನ್ ಕುಮಾರ್ ವೈ ಎಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿದರು.ಮಲಯಾಳಂ ಚಲನಚಿತ್ರ  ಸ್ಕ್ರಿಪ್ಟ್ ರೈಟರ್  ಸುರಾಜ್ ಮಾವಿಲ ವಿಷು ಆಚರಣೆಯನ್ನು ಉದ್ಘಾಟಿಸಿ  ಪುಟಾಣಿಗಳಿಗೆ ವಿಶು ಕೈನೀಟ್ಟಂ ನೀಡಿದರು. ಸಹೃದಯಿ ಸಂಘಟನೆ ಮಕ್ಕಳಿಗೆ ಹೊಸ ವಸ್ತ್ರ, ಕಲಿಕಾ ಉಪಕರಣ, ಹೊದಿಕೆ ವಿತರಿಸಿದರು. ಆಸಕ್ತರಿಗೆ ಮೂರು ಸಾವಿರದಷ್ಟು ತರಕಾರಿ ಗಿಡ ವಿತರಿಸಲಾಯಿತು.ಬಡ್ಸ್ ಶಾಲಾ ಅಧ್ಯಾಪಕಿ ಜ್ಯೋತಿ ಸ್ವಾಗತಿಸಿ, ಸುಜಾತ ವಂದಿಸಿದರು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries