ಕನ್ನಡ ಯುವ ಬಳಗ ರಂಗಕ್ಕೆ-ಬಾವಿಗೆ ಕರಿಆಯಿಲ್ ಹಾಕಿದ ದುಷ್ಕಮರ್ಿಗಳ ಕೃತ್ಯಕ್ಕೆ ಖಂಡನೆ-ಪ್ರತಿಭಟನೆೆ
ಕಾಸರಗೋಡು: ಭೂಮಿಯಲ್ಲಿ ಮನುಷ್ಯ ಅತೀ ಬುದ್ಧಿವಂತ ಜೀವಿ. ಅವನ ಬುದ್ಧಿವಂತಿಕೆಯೇ ಇತ್ತೀಚೆಗೆ ಪ್ರಕೃತಿಗೆ ಮಾರಕವಾಗುತ್ತಿದೆ. ಕೆಲವು ಕಿಡಿಗೇಡಿಗಳ ದುಷ್ಕ್ರತ್ಯದಿಂದ ಪ್ರಕೃತಿಯ ನೈಜ ಸಂಪನ್ಮೂಲ ಇನ್ನಷ್ಟು ಹಾಳಾಗುತ್ತಿದೆ. ಮೈಲಾಟಿಯ ಮಂಜುನಾಥ ಅವರ ಮನೆಯ ಕುಡಿಯುವ ನೀರಿಗೆ ರಾತ್ರೋ ರಾತ್ರಿ ಬಂದ ಕಿಡಿಗೇಡಿಗಳು ಕರಿ ಆಯಿಲ್ ಹಾಕುವ ಮೂಲಕ ಅವರ ಮಾನಸಿಕ ವೈಕಲ್ಯವನ್ನು ತಿಳಿಯಪಡಿಸಿದ್ದಾರೆ. ಇಂತಹವರು ಸಮಾಜಕ್ಕೆ ಮಾರಕ. ಕನ್ನಡ ಯುವಬಳಗವು ಇಂತಹ ದುಷ್ಕೃತ್ಯಗಳನ್ನು ಖಂಡಿಸುತ್ತದೆ ಮತ್ತು ಅದರ ವಿರುದ್ಧ ಕ್ರಿಯಾತ್ಮಕ ಹೋರಾಟವನ್ನು ನಡೆಸುತ್ತದೆ. ವಿದ್ಯಾವಂತ ಸಮಾಜಕ್ಕೆ ಅವಮಾನಕರವಾದ ಇಂತಹ ಘಟನೆಗಳು ಮರುಕಳಿಸಬಾರದು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಸಂಬಂಧಪಟ್ಟ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ದೂರು ಸಲ್ಲಿಸಿ ಈ ಕೃತ್ಯ ಮರುಕಳಿಸದಂತೆ ಅವರನ್ನು ಒತ್ತಾಯಿಸಲಾಗುವುದು ಎಂದು ಕನ್ನಡ ಯುವಬಳಗ ಕಾಸರಗೋಡು ಇದರ ಅಧ್ಯಕ್ಷ ರಕ್ಷಿತ್ ಪಿ. ಎಸ್. ಹೇಳಿದರು.
ಮೈಲಾಟಿಯ ಮಂಜುನಾಥ ಅವರ ಮನೆಯ ಬಾವಿಗೆ ದುಷ್ಕಮರ್ಿಗಳು ಕರಿ ಓಯಿಲ್ ಹಾಕಿದ್ದನ್ನು ಪ್ರತಿಭಟಿಸಿ ಮಂಗಳವಾರ ಕನ್ನಡ ಯುವಬಳಗದ ಪದಾಧಿಕಾರಿಗಳು ಮೈಲಾಟಿಯ ಮನೆಯಲ್ಲಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ವಾಡರ್ು ಸದಸ್ಯ ಸಂತೋಷ್ ಉದುಮ ಅವರಿಗೆ ಯುವಬಳಗದ ಅಧ್ಯಕ್ಷರು ಕರೆ ಮಾಡಿ ವಿಷಯದ ಗಂಭೀರತೆಯನ್ನು ತಿಳಿಸಿದರು. ಜಿಲ್ಲಾಧಿಕಾರಿ ಜೀವನ್ ಬಾಬು ಅವರಿಗೆ ಮತ್ತು ಉದುಮ ಶಾಸಕ ಕೆ. ಕುಞಿರಾಮನ್, ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕ್ಕುನ್ನು ಅವರಿಗೆ ಈ ಬಗ್ಗೆ ದೂರು ನೀಡಲು ತೀಮರ್ಾನಿಸಲಾಯಿತು. ಈ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ಮೂಡಿಸುವ ಪ್ರಾರಂಭಿಕ ಹಂತ ನೆರವೇರಿಸಲು ಸಭೆ ತೀಮರ್ಾನಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಲಾವಿದ, ನಾಟ್ಯಗುರು ದಿವಾಣ ಶಿವಶಂಕರ ಭಟ್ ಅವರು, ಪ್ರಕೃತಿಯನ್ನು ನಾಶ ಮಾಡುದಕ್ಕಿಂತ ಹೀನ ಕೃತ್ಯ ಇನ್ನೊಂದಿಲ್ಲ. ಯಾರಿಗೆ ನಾವು ಕೇಡನ್ನು ಬಯಸುತ್ತೇವೋ, ಅದು ನಮಗೂ ಉಂಟಾಗುತ್ತದೆ. ಸಾತ್ವಿಕತೇಯೇ ಜೀವನಕ್ಕೆ ಆಧಾರ. ನಾವೂ ಬದುಕಬೇಕು, ಉಳಿದವರನ್ನು ಬದುಕಲು ಬಿಡಬೇಕು. ಎಲ್ಲರಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ನಮಗಿಲ್ಲ. ಬಾವಿಗೆ ಕರಿ ಆಯಿಲ್ ಹಾಕಿದ ಇಂತಹ ಕೃತ್ಯ ಖಂಡನೀಯ ಎಂದರು.
ಚಂದ್ರಶೇಖರ ಮೈಲಾಟಿ, ಪ್ರಶಾಂತ ಹೊಳ್ಳ ಎನ್., ರಾಜೇಶ್ ಎಸ್. ಪಿ., ಸೌಮ್ಯಾ ಪ್ರಸಾದ್, ಪ್ರದೀಪ್ ಕುಮಾರ್ ಬಿ. ಎಸ್. , ಕೀರ್ತನ್ ಕುಮಾರ್ ಸಿ. ಎಚ್., ಸುಜಿತ್ ಉಪ್ಪಳ ಮಾತನಾಡಿದರು. ಶಿವಪ್ರಸಾದ್ ಮೈಲಾಟಿ ಸ್ವಾಗತಿಸಿ, ಸ್ವಾತಿ ಸರಳಿ ವಂದಿಸಿದರು. ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.