ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹ, ಬೆಂಬಲ ಅಗತ್ಯ-ಡಾ.ಯು.ಮಹೇಶ್ವರಿ
ಬದಿಯಡ್ಕ: ಎಲ್ಲಾ ಮಕ್ಕಳಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದರೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಿ ಬೆಳೆಸುವ ಪ್ರಕ್ರಿಯೆಗಳಿಗೆ ಒತ್ತುನೀಡಬೇಕು ಎಂದು ಕಣ್ಣೂರು ವಿವಿಯ ಕನ್ನಡ ಅಧ್ಯಯನ ವಿಭಾಗದ ನಿದರ್ೇಶಕಿ ಡಾ.ಯು.ಮಹೇಶ್ವರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಉಡುಪಮೂಲೆಯ ಭೂಮಿಕಾ ಪ್ರತಿಷ್ಠಾನ ಎಡನೀರು ಮಠದ ಪರಿಸರದಲ್ಲಿ ಹಮ್ಮಿಕೊಂಡ ಐದು ದಿನಗಳ ವಿಶೇಷ ಉಚಿತ ಬೇಸಿಗೆ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಆತ್ಮ ವಿಶ್ವಾಸ, ಪ್ರತಿಭಾ ಪ್ರದರ್ಶನಗೈಯುವ ಧೈರ್ಯಗಳಿಗೆ ಬಲತುಂಬಿದಾಗ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ತಿಳಿಸಿದ ಅವರು, ಭೂಮಿಕಾ ಪ್ರತಿಷ್ಠಾನದ ಬಹುಮುಖಿ ಕಾರ್ಯಚಟುವಟಿಕೆಗಳು ಇತರೆಡೆಗಳಿಗೆ ಮಾದರಿ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕವಿ, ಅಂತರ್ಜಲ ಸಂಶೋಧಕ ಮಧುರಕಾನನ ಗಣಪತಿ ಭಟ್ ಮಾತನಾಡಿ, ರಜಾ ಕಾಲದಲ್ಲಿ ಟಿವಿ ,ಮೊಬೈಲ್ಗಳಲ್ಲಿ ಕಾಲ ಹರಣ ಮಾಡುವ ಮಕ್ಕಳು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಸಮಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹಿತನುಡಿದರು.
ಶಿಬಿರದ ಮೊದಲ ದಿನದ ಗಾಯನ ವಿಷಯಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿರುವ ಸ್ನೇಹ ಪ್ರಕಾಶ್ ಹಾಗೂ ಗೀತಾ ಸಾರಡ್ಕ ಉಪಸ್ಥಿತರಿದ್ದರು. ಭೂಮಿಕಾ ಪ್ರತಿಷ್ಠಾನದ ಬ್ರಹ್ಮಶ್ರೀ ರಾಘವೇಂದ್ರ ಭಟ್ ಸ್ವಾಗತಿಸಿ, ವಿದುಷಿಃ ಅನುಪಮಾ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಐದು ದಿನಗಳ ಕಾಲ ನಡೆಯುವ ಈ ಶಿಬಿರದ ಸಮಾರೋಪ ಸಮಾರಂಭ ಏಪ್ರಿಲ್ 21 ರಂದು ಅಪರಾಹ್ನ 2.30 ಕ್ಕೆ ನಡೆಯಲಿದೆ.