ಕೊಡಿಮಾರು ಶ್ರೀ ವನಶಾಸ್ತಾವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ
ಉಪ್ಪಳ: ಕೊಡಿಮಾರು ಶ್ರೀ ವನಶಾಸ್ತಾವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವಿವಿಧ ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಂಪನ್ನಗೊಂಡಿತು.
ಕಾರ್ಯಕ್ರಮದಂಗವಾಗಿ ಬಾಳಿಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ, ಆ ಬಳಿಕ ವೈವಿಧ್ಯಮಯ ಕಾರ್ಯಕ್ರಮ ಜರಗಿತು. ತಂತ್ರಿವರ್ಯ ರಾಮ ಪ್ರಸಾದ್ ನಲ್ಲೂರಾಯ ಅವರ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಉತ್ಸವದ ಅಂಗವಾಗಿ ಅನ್ನಸಂತರ್ಪಣೆ, ಸದಾಶಿವ ಶೆಟ್ಟಿ ಕನ್ಯಾನ ಅವರ ಅಧ್ಯಕ್ಷತೆಯಲ್ಲಿ ಧಾಮರ್ಿಕ ಸಭೆ ಜರಗಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ತಂತ್ರಿವರ್ಯರನ್ನು ಗೌರವಿಸಲಾಯಿತು.
ಯಕ್ಷಗಾನ ಬಯಲಾಟ, ಶ್ರೀ ನಾಗದೇವರು, ಶ್ರೀ ರಕ್ತೇಶ್ವರಿ, ಗುಳಿಗ ದೈವಗಳ ಪ್ರತಿಷ್ಠೆ, ನಾಗದರ್ಶನ ಶನಿಪೂಜೆ, ರಂಗಪೂಜೆ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ವಿದ್ಯಾಲಕ್ಷ್ಮಿ ಕುಂಬಳೆ ಅವರ ಶಿಷ್ಯೆಯರಿಂದ ನೃತ್ಯ ವೈಭವ ಜರಗಿತು.