HEALTH TIPS

No title

            ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಹಿರಿಮೆಯ ಕೇಂದ್ರಗಳು : ಶಾಂತ ಟೀಚರ್
    ಬದಿಯಡ್ಕ: ಸಾರ್ವಜನಿಕ ಶಿಕ್ಷಣ ಯಜ್ಞದ ಮೂಲಕ ಇಂದು ನಮ್ಮ ವಿದ್ಯಾಭ್ಯಾಸದ ಗುಣಮಟ್ಟ ಉತ್ತುಂಗಕ್ಕೇರಿದೆ. ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಪ್ರತಿಭೆಗಳು ಸಾರ್ವಜನಿಕ ವಿದ್ಯಾಲಯದ ಅನನ್ಯವಾದ ಕೊಡುಗೆಗಳಾಗಿವೆ. ತಾವು ಕಲಿಸಿದ ವಿದ್ಯಾಥರ್ಿಗಳು ವಿಶಿಷ್ಟವಾದ ಶ್ರೇಷ್ಠ ಸಾಧನೆಗಳೊಂದಿಗೆ ಮುನ್ನಡೆದಾಗ ಪ್ರತೀ ಶಿಕ್ಷಕರಿಗೆ ಹೆಚ್ಚಿನ ಅಭಿಮಾನವಾಗುತ್ತದೆ. ವೈವಿಧ್ಯಮಯವಾದ ಕಾರ್ಯಕ್ರಮದ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಸರಕಾರಿ ವಿದ್ಯಾಲಯಗಳು ಹಿರಿಮೆಯ ಕೇಂದ್ರಗಳಾಗುತ್ತಿರುವುದು ಸರಕಾರಿ ಶಾಲೆಗಳಿಗಿರುವ ಸಮಾಜದ ಅಂಗೀಕಾರಕ್ಕಿರುವ ಸ್ಪಷ್ಟ ನಿದರ್ಶನವೆಂದು ಚೆಂಗಳ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಹಾಗು ಈ ಶೈಕ್ಷಣಿಕ ವರ್ಷದಲ್ಲಿ ಸೇವೆಯಿಂದ ನಿವೃತ್ತರಾದ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ ಶಾಂತ ಟೀಚರ್ ಹೇಳಿದರು.
    ಎಡನೀರು ಸರಕಾರಿ ಶಾಲೆಯ ಹಿರಿಮೆ - 2018 ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
    ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುನೀರ್ ಕುಂಜಾರು ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಪ್ರಸ್ತುತ ಮುಖ್ಯ ಶಿಕ್ಷಕ ಯತೀಶ್ ಕುಮಾರ್ ರೈ ಅವರು ಶಾಂತ ಟೀಚರ್ ಅವರಿಗೆ ಸ್ಮರಣಿಕೆ ನೀಡಿ, ಶಾಲಾ ಪರವಾಗಿ ಶಾಲು ಹೊದಿಸಿ ಶುಭಕೋರಿದರು. ಹಿರಿಯ ಶಿಕ್ಷಕ ಸಂತೋಷ್ ಮಾಸ್ತರ್, ಪ್ರಭಾಕರ ಮಾಸ್ತರ್ ಶುಭ ಹಾರೈಸಿದರು. ಶಾಲಾ ನೌಕರ ಸಂಘದ ಕಾರ್ಯದಶರ್ಿ ಜಗದೀಶ್ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ರಫೀಕ್ ಮಾಸ್ತರ್ ವಂದಿಸಿದರು. ಆಶಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ವಿವಿಧ ಕಲಿಕಾ ಚಟುವಟಿಕೆಗಳನ್ನೊಳಗೊಂಡ ಕಾರ್ಯಕ್ರಮ ಜರಗಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries