HEALTH TIPS

No title

                         ಮಲೆತ್ತಡ್ಕ ಮೂಲಸ್ಥಾನ ಪರಿಸರ ಈಗ ಪವರ್ ಫುಲ್ಲ್!!*
   ಪೆರ್ಲ: ಪಡ್ರೆ ಸ್ವರ್ಗ ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನದ ನಾಗಾಲಯ, ಶ್ರೀ ದೈವದ ಗುಡಿ, ಪ್ರಧಾನ ಗೋಪುರ ಮತ್ತಿತರ ಕ್ಷೇತ್ರೀಯ ನವನಿಮರ್ಾಣ ಕಾರ್ಯಗಳು ಪೂರ್ಣಗೊಂಡಿದ್ದು  ಏ. 18 ರಿಂದ  24ರ ವರೆಗೆ ಕ್ಷೇತ್ರ ತಂತ್ರಿ ವರ್ಯರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವವು ನಡೆಯಲಿದ್ದು ಏಪ್ರಿಲ್ 19 ಗುರುವಾರದಂದು ಅಡ್ಯೆತ ಕಂಡ ನಾಗಾಲಯದಲ್ಲಿ ನಾಗ ಪ್ರತಿಷ್ಟೆ, ಎಪ್ರಿಲ್ 22 ಆದಿತ್ಯವಾರದಂದು ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಜಟಾಧಾರಿ ಪ್ರತಿಷ್ಟೆ ಮತ್ತು ಎಪ್ರಿಲ್ 23 ಸೋಮವಾರದಂದು ಶ್ರೀ ಜಟಾಧಾರಿ ಮೂಲಸ್ಥಾನ ದಲ್ಲಿ ಶ್ರೀ ಜಟಾಧಾರಿ ಮಹಿಮೆಯನ್ನು ವಿವಿಧ ವೈದಿಕ ,ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಗಮಿಸುವ ಭಕ್ತಾದಿಗಳ ಅನುಕೂಲತೆಗಾಗಿ ಹಾಗೂ ಕಾಯರ್ಾಲಯ ಪ್ರಚಾರ ಮಾಧ್ಯಮ ನಿರ್ವಹಣೆಗಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಕೋರಿಕೆಯಂತೆ  ತಾತ್ಕಾಲಿಕ ಬಿ ಎಸ್ ಎನ್ ಎಲ್ ಟವರ್ ಸ್ಥಾಪಿಸಲಾಗಿದ್ದು, ಸೋಮವಾರ ತಾತ್ಕಾಲಿಕ ಟವರ್ ನಲ್ಲಿ 2ಜಿ ಸಂಪರ್ಕ ಸಾದ್ಯವಾಗಿದ್ದು ಇಂದು 3ಜಿ ಸಂಪರ್ಕ ಏರ್ಪಡಿಸಲಾಗುವುದೆಂದು ಅಧಿಕಾರಿಗಳು ತಿಳಿಸಿರುತ್ತಾರೆ.
    ಸ್ವರ್ಗ ಶಾಲಾ ವ್ಯವಸ್ಥಾಪಕರಾದ ಹೃಷಿಕೇಶ್ ವಿ ಎಸ್ ಅವರ  ಸಂಪೂರ್ಣ ಸಹಕಾರ, ಸಹಭಾಗಿತ್ವದಲ್ಲಿ ನಡೆದ ತಾತ್ಕಾಲಿಕ ವ್ಯವಸ್ಥೆ ಇದಾಗಿದ್ದು  ಬಿ ಎಸ್ ಎನ್ ಎಲ್ ಕಾಸರಗೋಡು ಉಪವಿಭಾಗದ ಅಭಿಯಂತರ ಶ್ರೀಜಿತ್ ಹಾಗೂ ಉಪ್ಪಳ ವಿಭಾಗದ ಜೂನಿಯರ್  ಟೆಲಿಕಾಂ ಅಧಿಕಾರಿ ಮಧುಸೂದನ್ ಭಟ್ ಅವರ ನಿರಂತರ ಪ್ರಯತ್ನದ ಫಲವಾಗಿ  ಬಿ ಎಸ್ ಎನ್ ಎಲ್  ಸಿಬಂಧಿಗಳ ಕೈ ಜೋಡಣೆಯೊಂದಿಗೆ ಕೇವಲ ಕೆಲವೇ ದಿನಗಳಲ್ಲಿ ಈ ತಾತ್ಕಾಲಿಕ ವ್ಯವಸ್ಥೆಯು ಯಶಸ್ಸನ್ನು ಕಂಡು ಭಕ್ತಾದಿಗಳು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ  ಪದಾಧಿಕಾರಿಗಳು ಸದಸ್ಯರು ಹಾಗೂ ಸ್ಥಳೀಯರು ಅಭಿನಂದಿಸಿರುತ್ತಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries