HEALTH TIPS

No title

             ವಿಭಜನೆಯ ಬಳಿಕದ ಬಾಕಿಸ್ಥಾನವನ್ನು ಪಾಕಿಸ್ಥಾನ ಮಾಡುವ ಹುನ್ನಾರ ಸದ್ದಿಲ್ಲದೆ ನಡೆದಿದೆ-ಡಾ.ಕಲ್ಲಡ್ಕ       
   ಬದಿಯಡ್ಕ: ಸಾವಿರ ಸಾವಿರ ವರ್ಷಗಳಿಂದ ದೇಶವನ್ನು ಬೆಳಗಿದ ಸಮಾಜ ಹಿಂದೂ ಸಮಾಜ, ದೇಶದ ಆಸ್ಮಿತೆ ಸಂಸ್ಕೃತಿಯ ಪ್ರತೀಕವಾದ ಹಿಂದೂ ಧರ್ಮ ಮತ್ತು ಹಿಂದೂ ಸಮಾಜವನ್ನು ಬೇರ್ಪಡಿಸಲು ಅಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಪ್ರಾಂತೀಯ ಸಂಘ ಪ್ರಮುಖ್ ಕಲ್ಲಡ್ಕ ಪ್ರಭಾಕರ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
    ವಿಶ್ವಹಿಂದೂ ಪರಿಷತ್ತು, ಭಜರಂಗದಳ ಬದಿಯಡ್ಕ ಪ್ರಖಂಡ ಸಮಿತಿ   ಬದಿಯಡ್ಕದ ಬೋಳುಕಟ್ಟೆ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡ "ವಿರಾಟ್ ಹಿಂದೂ ಸಮಾಜೋತ್ಸವ"ವನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
   ಭರತ ಭೂಮಿಯ ನೆಲ, ಜಲ ಎಲ್ಲವೂ ಪವಿತ್ರವಾದುದು. ಅದರ ಸಂರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಬೇಕೆಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂಲೀಗ್ ಪಕ್ಷಗಳ ರಾಜಕೀಯ ಕುತಂತ್ರದ ಪರಿಣಾಮ 70 ವರ್ಷಗಳ ಹಿಂದೆ ದೇಶ ಇಬ್ಭಾಗವಾಯಿತು. ಉಳಿದಿರುವ "ಬಾಕಿಸ್ಥಾನ"ವನ್ನು "ಪಾಕಿಸ್ಥಾನ" ಮಾಡುವ ಹುನ್ನಾರ ಕಳೆದ ಏಳು ದಶಕಗಳಿಂದ ಸದ್ದಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿದರು. ಇಡೀ ವಿಶ್ವಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡುವ ರಾಷ್ಟ್ರ ಪಾಕಿಸ್ಥಾನ. ಅಧಿಕಾರ ಪಿಪಾಸುಗಳಾದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳಿಂದ ದೇಶ ಏಳು ದಶಕಗಳಿಂದ ಹಿಂದುಳಿಯುವಂತಾಯಿತು ಎಂದು ಅವರು ಹೇಳಿದರು. ಹತ್ಯೆ ಆರೋಪಿಯಾಗಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ವರಿಂದ ಕೇರಳದ ಅಭಿವೃದ್ಧಿ ಸಹಿತ ನ್ಯಾಯಯುತ ಆಡಳಿತ ಸಾಧ್ಯವಿಲ್ಲ. ಪ್ರಸ್ತುತ ಧರ್ಮ ಮತ್ತು ಜಾತಿಯನ್ನು ಒಡೆದು ರಾಜಕೀಯ ಮಾಡುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮನೆ ಮನಗಳಲ್ಲಿ ಹಿಂದೂ ಸಂಸ್ಕೃತಿ ಹರಿಯಬೇಕಿದ್ದು, ಲವ್ ಜೆಹಾದ್ ಪಿಡುಗಿನ ಬಗ್ಗೆ ಮಾತೆಯರು ಜಾಗೃತರಾಗಬೇಕಿದೆ ಎಂದು ವಿನಂತಿಸಿದರು. ಭಾರತೀಯತೆ ಮತ್ತು ಈ ನಾಡಿನ ಸಂಸ್ಕೃತಿ ಮಾತೃ ಸ್ವರೂಪಿಯಾಗಿದೆ. ಇಲ್ಲಿರುವ ಸಹಸ್ರ ಸಹಸ್ರ ಮಾತೆಯರು ಸಂಸ್ಕೃತಿ ಮತ್ತು ಭಾರತೀಯತೆಯ ರಕ್ಷಕರು ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಬದಿಯಡ್ಕ ಗ್ರಾ.ಪಂ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಹಿಂದೂ ಸಮಾಜ ಜಾಗತಿಕ ಒಳಿತನ್ನು ಬಯಸುತ್ತದೆ, ಸವರ್ೇ ಜನಾಃ ಸುಖಿನೋ ಭವಂತು ಎಂಬ ಉಕ್ತಿಯಂತೆ ವಿಶಾಲ ಮನೋಭಾವ ಹೊಂದಿರುವವರು ಹಿಂದೂಗಳು ಮತ್ತು ಹಿಂದೂ ಸಮಾಜವಾಗಿದೆ ಎಂದರು.
   ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯೇತರವಾಗಿ ಬೆಳೆದ ಹಿಂದೂ ಸಂಸ್ಕೃತಿಗೆ ಇಂದು ರಾಜಕೀಯ ಬಣ್ಣ ಬಳಿಯುತ್ತಿರುವುದು ಖೇದಕರ ಎಂದು ತಿಳಿಸಿದರು. ಪ್ರಾಚೀನ ಶ್ರೀಮಂತ ಪರಂಪರೆಯ ಹಿಂದೂ ಸಂಸ್ಕೃತಿ ಸಂರಕ್ಷಣೆಗೆ ಜಾತಿ, ಪಂಗಣ ಜೊತೆಗೆ ರಾಜಕೀಯವನ್ನು ಬದಿಗೊತ್ತಿ ಒಂದಾಗಬೇಕು. ಬದಿಯಡ್ಕದಂತಹ ಗ್ರಾಮೀಣ ಒಳ ಪ್ರದೇಶಗಳಲ್ಲಿ ಧರ್ಮದ ನೆಲೆಗಟ್ಟಿನಡಿ ಬೃಹತ್ ಸಂಖ್ಯೆಯಲ್ಲಿ ಸೇರಿಕೊಂಡು ಆಚರಿಸಲಾಗುವ ಸಮಾಜೋತ್ಸವ ನಾಡಿನ ಏಕತೆಯ ದ್ಯೋತಕದ ಹಬ್ಬ ಎಂದು ಅವರು ತಿಳಿಸಿದರು.
   ಪ್ರಖರ ವಾಗ್ಮಿ ಸಾದ್ವಿ ಬಾಲಿಕಾ ಸರಸ್ವತಿ ದಿಕ್ಸೂಚಿ ಭಾಷಣ ಮಾಡಿದರು.  ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ, ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಸ್ವಾಮೀಜಿ, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ವಾಮೀಜಿ ದಿವ್ಯ ಉಪಸ್ಥಿತರಿದ್ದು ಮಾತನಾಡಿದರು. ವಿಶ್ವಹಿಂದೂ ಪರಿಷತ್ತು ಕನರ್ಾಟಕ ದಕ್ಷಿಣ ಪ್ರಾಂತ ಕಾಯರ್ಾಧ್ಯಕ್ಷ ಎಂ.ಬಿ.ಪುರಾಣಿಕ್, ಹಿಂದೂ ಐಕ್ಯವೇದಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಪಿ.ಹರಿದಾಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಶ್ವಹಿಂದೂ ಪರಿಷತ್ತು ಮಂಗಳೂರು ವಿಭಾಗ ಸಂಘಟನಾ ಕಾರ್ಯದಶರ್ಿ ಶರಣ್ ಪಂಪ್ವೆಲ್, ವಿಶ್ವಹಿಂದೂ ಪರಿಷತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಪಿ.ಅಂಗಾರ ಶ್ರೀಪಾದ, ಪ್ರಧಾನ ಕಾರ್ಯದಶರ್ಿ ಶಂಕರ ಭಟ್ ಉಳುವಾನ, ಮಾತೃಶಕ್ತಿ ಹಿಂದೂ ಪರಿಷತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ಮೀರಾ ಆಳ್ವ, ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಸುರೇಶ್ ಶೆಟ್ಟಿ ಪರಂಕಿಲ, ಗೋರಕ್ಷಾ ಪ್ರಮುಖ್ ಅರಿಬೈಲು ಗೋಪಾಲ ಶೆಟ್ಟಿ, ಜಿಲ್ಲಾ ಜೊತೆ ಕಾರ್ಯದಶರ್ಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ವಿಹಿಂಪ ಮುಖಂಡ ಬಸವರಾಜ್ ಬಳ್ಳಾರಿ, ಪ್ರವೀಣ್ ಕುತ್ತಾರ್, ಮುರಳೀಕೃಷ್ಣ ಹಸಂತ್ತಡ್ಕ, ಸುನಿಲ್ ಕುಮಾರ್ ಉಪಸ್ಥಿತರಿದ್ದರು.  ಮಧುಕರ ರೈ ಕೊರೆಕ್ಕಾನ, ಬಿ.ನಿತ್ಯಾನಂದ ಶೆಣೈ ಉಪಸ್ಥಿತರಿದ್ದರು.
   ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷ ಲಕ್ಷ್ಮಣ ಪ್ರಭು ಕರಿಂಬಿಲ ಸ್ವಾಗತಿಸಿ, ಪ್ರಧಾನ ಕಾರ್ಯದಶರ್ಿ ಹರಿಪ್ರಸಾದ್ ಪುತ್ರಕಳ ವಂದಿಸಿದರು. ಕು. ಮಾನಸಾ ಮುಣ್ಚಿಕ್ಕಾನ ಪ್ರಾರ್ಥನಾಗೀತೆ ವಂದೇ ಮಾತರಂ ಹಾಡುವುದರೊಂದಿಗೆ ಸಮಾರಂಭ ಆರಂಭಗೊಂಡಿತ್ತು.
     


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries