HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಸಮಾಜೋತ್ಸವದ ಬೆನ್ನಲ್ಲಿ ಬುಗಿಲೆದ್ದ ಆಕ್ರೋಶ-ಮಲೆಯಾಳ ಮಾಧ್ಯಮಗಳಿಂದ ಸುಳ್ಳು ಪ್ರಚಾರ
   ಬದಿಯಡ್ಕ: ಶುಕ್ರವಾರ ಬದಿಯಡ್ಕ ಬೋಳುಕಟ್ಟೆ ಮೈದಾನದಲ್ಲಿ ವಿಹಿಂಪ, ಭಜರಂಗದಳ ಹಮ್ಮಿಕೊಂಡಿದ್ದ ಬದಿಯಡ್ಕ ಪ್ರಖಂಡ ಹಿಂದೂ ಸಮಾಜೋತ್ಸವದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ಸ್ ಹಿರಿಯ ಮುಖಂಡ, ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ರವರ ನಡೆಯ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚಚರ್ೆಗೆ ಗ್ರಾಸವಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳ ರಾಜ್ಯ ನಯಕರು ಅಭಿಪ್ರಾಯ ಹೊರಬಿಡುವ ಮೂಲಕ ರಾಜಕೀಯ ಬೇಳೆ ಬೇಯಿಸಲು ಅಖಾಡ ಸಿದ್ದಪಡಿಸುತ್ತಿದ್ದಾರೆ.
   ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಸಿಪಿಎಂ ಪಕ್ಷದ ರಾಜ್ಯ ಪ್ರಧಾನ ಕಾರ್ಯದಶರ್ಿ ಕೋಡಿಯೇರಿ ಬಾಲಕೃಷ್ಣನ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್, ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿಯ ಅಧ್ಯಕ್ಷ ಎಂಎಂ ಹಸನ್ ಮೊದಲಾದವರ ಸಹಿತ ಸಾವಿರಾರು ಮಂದಿಗಳು ಫೇಸ್ಬುಕ್ ಚಚರ್ೆಯ ಮೂಲಕ ಸಮರ ವಾತಾವರಣ ನಿಮರ್ಿಸಿದ್ದು, ಶನಿವಾರ ಸಂಜೆಯ ವೇಳೆಗೆ ಲಕ್ಷಾಂತರ ಮಂದಿ ವೀಕ್ಷಿಸಿ ಕಮೆಂಟ್ ಮಾಡಿರುವರು.
   ಕೆ ಎನ್ ಕೃಷ್ಣ ಭಟ್ ಸಮಾಜೋತ್ಸವದ ಅಧ್ಯಕ್ಷತೆ ವಹಿಸಿದ್ದ ಬಗ್ಗೆ ಮುಸ್ಲಿಂಲೀಗ್ ಮುಖಂಡರು ಇದೀಗ ಮೌನ ವಹಿಸಿದ್ದರೂ, ಅದರ ಕಾರ್ಯಕರ್ತರು ಅವಾಚ್ಯ ಶಬ್ದಗಳ ಸಹಿತ ಹಿಂದೂ ಸಮಾಜವನ್ನು ಅವಹೇಳನಗೈದ ಮೆಸೇಜ್ ಗಳು ಹರಿದಾಡಿವೆ. ಸಿಪಿಎಂ ಮುಖಂಡರ ಸಹಿತ ಅನೇಕರು ಕಾಂಗ್ರೆಸ್ಸ್ ಮತ್ತು ರಾ.ಸ್ವಯಂಸೇವಕ ಸಂಘ ಒಂದೇ ನಾಣ್ಯದ ಎರಡು ಮುಖಗಳೆಂಬ ರೀತಿಯ ಹೇಳಿಕೆ ಸಹಿತ ಕಾಂಗ್ರೆಸ್ಸ್ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸುವ ಮೆಸೇಜ್ ಗಳನ್ನು ರವಾನಿಸಿದ್ದಾರೆ. ಈ ಮಧ್ಯೆ ಚಚರ್ೆಯ ಕೇಂದ್ರಬಿಂದು ಕೆ ಎನ್ ಕೃಷ್ಣ ಭಟ್ ರವರು ಇನ್ನು ಮುಂದೆ ಯಾವುದೇ ಹಿಂದೂ ಕಾರ್ಯಕ್ರಮಗಲಲ್ಲಿ ಭಾಗವಹಿಸುವುದಿಲ್ಲ. ಆದದ್ದು ಪ್ರಮದ ಎಂಬ ಸುಳ್ಳು ಸುದ್ದಿಗಳನ್ನು ಮಲೆಯಾಳ ಸೋಶಿಯಲ್ ಮೀಡಿಯಾಗಳು ಭಾನುವಾರ ಹರಿಯಬಿಟ್ಟಿದೆ. ಈ ಬಗ್ಗೆ  ಮಾತನಾಡಿರುವ ಕೆ.ಎನ್ ಕೃಷ್ಣ ಭಟ್ ರವರು ಅಂತಹ ಹೇಳಿಕೆ ಸತ್ಯಕ್ಕೆ ದೂರ ಎಮದು ತಿಳಿಸಿದ್ದಾರೆ.
    ಕೋಟ್ಸ್:
  ಮಲೆಯಾಳಂ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿ ಪ್ರಕಟವಾಗಿರುವ ನನ್ನ ಅಭಿಪ್ರಾಯ ಸುಳ್ಳು ಆಗಿದ್ದು, ನಾನು ಈ ಹಿಂದಿನ ಅಭಿಪ್ರಯವನ್ನೇ ಮತ್ತೆ ಪುನರುಚ್ಚರುಇಸುತ್ತಿದ್ದು, ಹಿಂದೂ ಧರ್ಮ ತನ್ನ ಮೊದಲ ಅದ್ಯತೆಯಾಗಿದ್ದು, ವಿಹಿಂಪ ಸಂಯೋಜಿಸಿದ ಸಮಾಜೋತ್ಸವದಲ್ಲಿ ಪಾಲ್ಗೊಮಡ ಬಗ್ಗೆ ಹೆಮ್ಮೆ ಇದೆಯೇ ಹೊರತು ವಿಶಾದವಿಲ್ಲ. ಜೊತೆಗೆ ರಾಜಕೀಯಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ.
               ಕೆ.ಎನ್.ಕೃಷ್ಣ ಭಟ್
              ಹಿಂದೂ ಸಮಾಜೋತ್ಸವದ ಅಧ್ಯಕ್ಷತೆ ವಹಿಸಿದ ಹಿರಿಯ ಕಾಂಗ್ರೆಸ್ಸ್ ಮುಖಂಡ ಹಾಗೂ ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries