ದೇವರನ್ನು ನಿತ್ಯ ಪ್ರಾಥರ್ಿಸಿದರೆ ದು:ಖ ದುಮ್ಮಾನ ದೂರ : ಕೊಂಡೆವೂರು ಶ್ರೀ
ಕುಂಬಳೆ: ವೈದಿಕ ವಿಧಿವಿಧಾನದ ಮೂಲಕ ದೇವಾಲಯಗಳಲ್ಲಿ ಅದಮ್ಯ ಚೈತನ್ಯವನ್ನು ತುಂಬುವುದರಿಂದ ಸಾನ್ನಿಧ್ಯ ವೃದ್ಧಿಯಾಗಿ ಸರ್ವರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಕಾಣಲು ಸಾಧ್ಯವಾಗುತ್ತದೆ. ಭಕ್ತಿಯ ಮೂಲಕ ದೇವರನ್ನು ಹೃದಯದಲ್ಲೇ ಪ್ರತಿಷ್ಠಾಪಿಸಿಕೊಂಡು ನಿತ್ಯ ಪ್ರಾಥರ್ಿಸಿದರೆ ದು:ಖ ದುಮ್ಮಾನ ದೂರವಾಗುತ್ತದೆ. ಭಕ್ತಿಯಿಲ್ಲದ ಬದುಕು ಪರಿಮಳವಿಲ್ಲದ ಹೂವಿನಂತಾಗುತ್ತದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಹೇಳಿದರು.
ಆರಿಕ್ಕಾಡಿ ಗುಂಡಿಗದ್ದೆ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ನೂತನ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಸಂಜೆ ಆಯೋಜಿಸಿದ ಧಾಮರ್ಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಮೀಜೀಯವರು ಆಶೀರ್ವಚನ ನೀಡಿದರು.
ನಿರಂತರ ಭಕ್ತಿಯಿಂದ ಬದುಕಿನಲ್ಲಿ ಬೆಳಕನ್ನು ಕಾಣಲು ಸಾಧ್ಯವಾಗುತ್ತದೆ. ಅಲಂಕಾರದಿಂದ ದೇವರ ವಿಗ್ರಹ ಹೇಗೆ ಸುಂದರವಾಗಿ ಕಾಣುವುದೋ ಅದೇ ರೀತಿ ಭಕ್ತಿಯಿಂದ ಬದುಕು ಸುಂದರವಾಗಿರುತ್ತದೆ. ದೇವಸ್ಥಾನ ಕನ್ನಡಿ ಇದ್ದಹಾಗೆ. ದೇವಸ್ಥಾನವನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳಬೇಕೆಂದು ಸ್ವಾಮೀಜಿ ಅವರು ಹೇಳಿದರು.
ಧಾಮರ್ಿಕ ಸಭೆಯಲ್ಲಿ ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿ ಯೋಗೀಶ ಕಡಮಣ್ಣಾಯ ಆರಿಕ್ಕಾಡಿ ಅವರು ದೀಪ ಬೆಳಗಿಸಿದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಉಪಸ್ಥಿತರಿದ್ದರು. ಹಿಂದೂ ಐಕ್ಯವೇದಿಯ ಜಿಲ್ಲಾ ಸಂಘಟನಾ ಕಾರ್ಯದಶರ್ಿ ರಾಜನ್ ಮುಳಿಯಾರು ಧಾಮರ್ಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಆರಿಬೈಲು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಉಪಸ್ಥಿತರಿದ್ದರು.
ಪ್ರಮುಖರಾದ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಕೆ.ಎಸ್.ಗೋಪಾಲಕೃಷ್ಣ ಆರಿಕ್ಕಾಡಿ, ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಉಳಿಯತ್ತಡ್ಕ, ವೇದಮೂತರ್ಿ ವೇಣುಗೋಪಾಲ ಕಲ್ಲೂರಾಯ ಮಧೂರು, ವಾಮನ ಆಚಾರ್ಯ ಬೋವಿಕ್ಕಾನ, ರಾಘವಯ್ಯ ನೆಲ್ಲಿಕುಂಜೆ, ಕಮಲಾಕ್ಷ ವಿದ್ಯಾನಗರ, ಪುರುಷೋತ್ತಮ ಮೈಸೂರು, ಲಕ್ಷ್ಮೀ ಪಾರೆಕಟ್ಟೆ, ಶಂಕರನ್ ಕೊಚ್ಚಿನ್ ಉಪಸ್ಥಿತರಿದ್ದರು. ರಾಜೇಂದ್ರ ಮಂಗಳೂರು ಸ್ವಾಗತಿಸಿ, ಕೆ.ಚಂದ್ರಹಾಸ ಮಧೂರು ವಂದಿಸಿದರು. ತಾರಾನಾಥ ಮಧೂರು ಕಾರ್ಯಕ್ರಮ ನಿರೂಪಿಸಿದರು.
ಎ.20 ರಂದು ಬೆಳಗ್ಗೆ ಗಣಪತಿ ಹವನ, ಕುಬೇರ ಪೂಜೆ, ಕಲಶಾಧಿವಾಸ, ಅಧಿವಾಸ ಹೋಮ, ಅಂಕುರ ಪೂಜೆ, ತತ್ವಹೋಮ, ತತ್ವ ಕಲಶ, ಮಂಟಪ ಸಂಸ್ಕಾರದ ಬಳಿಕ ಶ್ರೀ ದುಗರ್ಾದೇವಿ ಮತ್ತು ಉಪದೇವತೆಗಳ ನವೀಕೃತ ನೂತನ ಗರ್ಭಗೃಹದಲ್ಲಿ ಭಕ್ತರ ಸಮ್ಮುಖದಲ್ಲಿ ನೂತನ ಬಿಂಬ ಪ್ರತಿಷ್ಠೆ ಮಾಡಲಾಯಿತು.ಬಳಿಕ 108 ಕಲಶಾಭಿಷೇಕ, ಶ್ರೀ ವೆಂಕಟ್ರಮಣ ದೇವರ ಮುಡಿಪು ಪೂಜೆ, ನಿತ್ಯ ನಿಯಮಾವಳಿಯ ನಿಶ್ಚಯ, ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಅಪರಾಹ್ನ ವಿವಿಧ ಭಜನಾ ತಂಡಗಳಿಂದ ಭಜನೆ, ಸಂಜೆ ಶ್ರೀನಿವಾಸ ಪೂಜೆ, ರಾತ್ರಿ ನವರಾತ್ರಿ ಪೂಜೆ, ದೇವಿಯ ದಿವ್ಯ ದರ್ಶನ, ದೊಂದಿ ಸೇವೆಯ ಬಳಿಕ ಪ್ರಸಾದ ವಿತರಣೆ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು, ರಾಮದಾಸನಗರ ಇವರಿಂದ ಶ್ರೀ ದೇವಿ ಮಹಿಷ ಮದರ್ಿನಿ ಯಕ್ಷಗಾನ ಬಯಲಾಟ ನಡೆಯಿತು. ಸಂಜೆ ಜರಗಿದ ಧಾಮರ್ಿಕ ಸಭೆಯಲ್ಲಿ ಧಾಮರ್ಿಕ, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಿದರು.
ಇಂದಿನ ಕಾರ್ಯಕ್ರಮ :
ಎ.21ರಂದು ಬೆಳಗ್ಗೆ 7 ಕ್ಕೆ ಗಣಪತಿ ಹೋಮ, 8 ರಿಂದ ಭಜನೆ, 10 ರಿಂದ ಚಂಡಿಕಾ ಹೋಮ ಆರಂಭ, ಮಧ್ಯಾಹ್ನ 12ಕ್ಕೆ ಚಂಡಿಕಾ ಹೋಮದ ಪೂಣರ್ಾಹುತಿ, ಅನ್ನಸಂತರ್ಪಣೆ, ಸಂಜೆ 4 ರಿಂದ ಗುಳಿಗ ದೈವದ ಕೋಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.