ಎ.29ರಂದು ಉಪರಾಷ್ಟ್ರಪತಿ ಕಾಸರಗೋಡು ಪೆರಿಯಕ್ಕೆ
ಕೇಂದ್ರೀಯ ವಿವಿಯ ಎಂಟು ಅಕಾಡೆಮಿಕ್ ಬ್ಲಾಕ್ ಲೋಕಾರ್ಪಣೆ
ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಆವರಣದೊಳಗೆ ನೂತನವಾಗಿ ನಿಮರ್ಿಸಲಾದ ಎಂಟು ಅಕಾಡೆಮಿಕ್ ಬ್ಲಾಕ್ಗಳನ್ನು ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಎ.29ರಂದು ಬೆಳಗ್ಗೆ 11ಗಂಟೆಗೆ ರಾಷ್ಟ್ರಕ್ಕೆ ಸಮಪರ್ಿಸಲಿದ್ದಾರೆ.
2015ರ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಈ ಎಂಟು ಬ್ಲಾಕ್ಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ 231 ಕೋಟಿ ರೂ. ವೆಚ್ಚದಲ್ಲಿ ಈ ಬ್ಲಾಕ್ಗಳನ್ನು ನಿಮರ್ಿಸಲಾಗಿದೆ.
ಸಮಾರಂಭದಲ್ಲಿ ಕೇರಳ ಬಂದರು ಖಾತೆ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಾಂಸದ ಪಿ.ಕರುಣಾಕರನ್, ಯು.ಜಿ.ಸಿ. ಸದಸ್ಯ ಯು.ಗೋಪಾಲ ರೆಡ್ಡಿ, ಜಿಲ್ಲೆಯ ಶಾಸಕರು ಮತ್ತಿತರರು ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸಂಘಟಕ ಸಮಿತಿಯ ಕಾರ್ಯದಶರ್ಿ ಪ್ರೊ.ಡಾ.ಕೆ.ಜಯಪ್ರಸಾದ್ ಅವರು ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದುವರೆಗೆ ವಿದ್ಯಾನಗರ, ಪಡನ್ನಕ್ಕಾಡು ಮತ್ತು ಕುಣಿಯದಲ್ಲಿರುವ ತಾತ್ಕಾಲಿಕ ಕ್ಯಾಂಪಸ್ಗಳಲ್ಲಿ ಕಾಯರ್ಾಚರಿಸುತ್ತಿದ್ದ ಎಲ್ಲಾ ಕ್ಯಾಂಪಸ್ಗಳು ಇನ್ನು ಮುಂದೆ ಪೆರಿಯದ ಹೊಸ ಅಕಾಡೆಮಿಕ್ ಬ್ಲಾಕ್ ಕಟ್ಟಡಗಳಲ್ಲಿ ಕಾಯರ್ಾಚರಿಸಲಿವೆ. 22 ಸಂಶೋಧನಾ ಇಲಾಖೆಗಳ ಸಹಿತ 23 ಅಧ್ಯಯನ ವಿಭಾಗಗಳು ಈ ವಿಶ್ವವಿದ್ಯಾನಿಲಯದಲ್ಲಿ ಈಗ ಕಾರ್ಯವೆಸಗುತ್ತಿದೆ. 17 ರಾಜ್ಯಗಳ 1400ಕ್ಕಿಂತಲೂ ಅಧಿಕ ಮಂದಿ ವಿದ್ಯಾಥರ್ಿಗಳು ಇಲ್ಲಿ ಅಧ್ಯಯನ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಇದಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಗುಣಮಟ್ಟ ಹೊಂದಿದ 121 ಮಂದಿ ಅಧ್ಯಾಪಕರು ಇಲ್ಲಿ ಕಾರ್ಯವೆಸಗುತ್ತಿದ್ದಾರೆ ಎಂದು ಅವರು ವಿವರಿಸಿದರು.
2014ನೇ ಆಗಸ್ಟ್ ತಿಂಗಳಲ್ಲಿ ಉಪಕುಲಪತಿಗಳಾಗಿ ಸ್ಥಾನ ವಹಿಸಿದ ಪ್ರೊ.ಡಾ.ಜಿ.ಗೋಪಕುಮಾರ್ ಅವರ ನೇತೃತ್ವದಲ್ಲಿ ಈ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಬೃಹತ್ ಅಭಿವೃದ್ಧಿ ಕೆಲಸಕಾರ್ಯಗಳು ನಡೆದಿವೆ. 750 ಮಂದಿ ವಿದ್ಯಾಥರ್ಿಗಳಿಗೆ ವಾಸಿಸಿ ಅಧ್ಯಯನ ನಡೆಸುವ ಹಾಸ್ಟೆಲ್ ಸೌಲಭ್ಯವನ್ನು ಈಗಾಗಲೇ ಈ ಕ್ಯಾಂಪಸ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ನೂರು ವಿದ್ಯಾಥರ್ಿಗಳ ಹಾಸ್ಟೆಲ್ ನಿಮರ್ಾಣವು ಈಗ ಕಾಮಗಾರಿ ಹಂತದಲ್ಲಿದೆ. ಜೊತೆಗೆ ಅತ್ಯುತ್ತಮ ಸೌಕರ್ಯಗಳಿರುವ ಗೆಸ್ಟ್ ಹೌಸ್ಗಳು, 72 ಕೋಟಿ ರೂ. ಗಳ ಅಡ್ಮಿನಿಸ್ಟ್ರೇಷನ್ ಬ್ಲಾಕ್, 22 ಕೋಟಿ ರೂ. ಗಳ ಸೆಂಟ್ರಲ್ ಲೈಬ್ರೆರಿಯ ನಿಮರ್ಾಣ ಯೋಜನೆಯು ಶೀಘ್ರದಲ್ಲೇ ಕಾರ್ಯಗತಗೊಳ್ಳಲಿದೆ ಎಂದು ಅವರು ನುಡಿದರು.
ಯೋಗ, ಸ್ಕೂಲ್ ಆಫ್ ಎಜ್ಯುಕೇಶನ್ ಎಂಬೀ ಇಲಾಖೆಗಳಿಗೆ ಆವಶ್ಯಕವಾದ ಕಟ್ಟಡಗಳು, ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿಗಳ ಕ್ವಾರ್ಟಸರ್್ಗಳು, ಸ್ಟಾಟ್ಯೂಟರಿ ಆಫೀಸರ್ಗಳ ಔದ್ಯೋಗಿಕ ವಸತಿಗಳು, ಕೇಂದ್ರೀಯ ವಿದ್ಯಾಲಯ ಹೀಗೆ 17 ಬ್ಲಾಕ್ಗಳ ನಿಮರ್ಾಣವು 2022ರೊಳಗೆ ಪೂತರ್ಿಯಾಗಲಿದೆ. ಇದಕ್ಕಿರುವ ಅವಿರತ ಯತ್ನದಲ್ಲಿ ಉಪಕುಲಪತಿ ಪ್ರೊ.ಡಾ.ಜಿ.ಗೋಪಕುಮಾರ್ ಮತ್ತು ರಿಜಿಸ್ಟ್ರಾರ್ ಡಾ.ಎ.ರಾಧಾಕೃಷ್ಣನ್ ನಾಯರ್ ನೇತೃತ್ವ ನೀಡುವ ಅಕಾಡೆಮಿಕ್ ತಂಡ ತಲ್ಲೀನವಾಗಿದೆ ಎಂದು ಪ್ರೊ.ಡಾ.ಕೆ.ಜಯಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರೊ.ಡಾ.ಕೆ.ಪಿ.ಸುರೇಶ್, ಡಾ.ಇಫ್ತಿಖಾರ್ ಅಹಮ್ಮದ್, ಡಾ.ಟಿ.ಕೆ.ಅನೀಶ್ಕುಮಾರ್ ಭಾಗವಹಿಸಿದ್ದರು.