HEALTH TIPS

No title

            ದೈವ ಕೋಲಗಳು ಮನರಂಜನೆಯ ಪ್ರದರ್ಶನಗಳಲ್ಲ : ಯುವ ಸಾಹಿತಿ ಹ.ಸು.ಒಡ್ಡಂಬೆಟ್ಟು
     ಬದಿಯಡ್ಕ:  ತುಳುನಾಡಿನಲ್ಲಿ ದೈವಾರಾಧನೆಗೆ ಧಾಮರ್ಿಕವಾದ ನಂಬಿಕೆಯ ನೆಲಗಟ್ಟು ಇರುವುದು. ಭಯ ಭಕ್ತಿಯಿಂದ ವರ್ಷಂಪ್ರತಿ ಇಂತಹ ಸಾವಿರಾರು ದೈವಗಳಿಗೆ ತುಳುನಾಡಿನ ಎಲ್ಲೆಡೆ ವಿಶ್ವಾಸಿಗಳು ಸೇರಿ ಕೋಲಗಳ ಸೇವೆಯನ್ನು ಮಾಡುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುವ ಸಂಪ್ರದಾಯವು ತಲಾಂತರಗಳಿಂದ ನಡೆದು ಬಂದಿದೆ ಎಂದು ಯುವ ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅಭಿಪ್ರಾಯ ವ್ಯಕ್ತಪಡಿಸಿದರು.
   ಮುಂಡಿತ್ತಡ್ಕದಲ್ಲಿ ಇತ್ತೀಚೆಗೆ ನಡೆದ   ಶ್ರೀವಿಷ್ಣುಮೂತರ್ಿ ಒತ್ತೆಕೋಲ ಮಹೋತ್ಸವ ಸಂದರ್ಭದಲ್ಲಿ ಶ್ರೀ ಮಹಾವಿಷ್ಣು ಕಲಾವೃಂದ ವಿಷ್ಣು ನಗರ ಇದರ 28ನೇ  ವಾಷರ್ಿಕೋತ್ಸವ ಮತ್ತು ಶ್ರೀ ವಿಷ್ಣು ಮಹಿಳಾ ಸಂಘದ 18ನೇ ವಾಷರ್ಿಕೋತ್ಸವದ ಅಂಗವಾಗಿ ಆಯೋಜಿಸಿದ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನ ಭಾಷಣಗೈದು ಅವರು ಮಾತನಾಡಿದರು.
   ಪಾರಂಪರಿಕ ಆಚಾರಗಳನ್ನು ಇಂದು ಮನೋರಂಜನೆಯ ಹೆಸರಿನಲ್ಲಿ ನಾಟಕ ಸಿನೆಮಾಗಳಲ್ಲಿ ಪ್ರದಶರ್ಿಸಲಾಗುತ್ತಿದೆ. ಆ ಮೂಲಕ ಅದನ್ನು ಲೇವಡಿ ಮಾಡಿ ತುಳುನಾಡಿನ ಜನರ ನಂಬಿಕೆಗೆ ಧಕ್ಕೆಯನ್ನು ತರುವ ಕೆಲಸಗಳು ನಡೆಯುತ್ತಿದೆ. ಇದು ಸರಿಯಲ್ಲ. ಈ ಬಗ್ಗೆ ಧ್ವನಿಯೆತ್ತುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಎಳವೆಯಲ್ಲಿಯೇ ಮಕ್ಕಳಿಗೆ ಜೀವನ ಮೌಲ್ಯಗಳನ್ನು ತಿಳಿಸುವ ಕೆಲಸಗಳಾಗಬೇಕು ಮತ್ತು ಅದು ಮನೆಯಿಂದಲೇ ಪ್ರಾರಂಭವಾಗಬೇಕು. ಹೆತ್ತವರು ಈ ನಿಟ್ಟಿನಲ್ಲಿ ಹೆಚ್ಚು ಮುತುವಜರ್ಿವಹಿಸಬೇಕೆಂದು ಅವರು ಹೇಳಿದರು.
   ಸಮಾರಂಭದಲ್ಲಿ ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಅರುಣಾ. ಜೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕರುಗಳಾದ ಉಮಾನಾಥ ಭಂಡಾರಿ ಮತ್ತು ಸುಧಾಮ.ಪಿ ಹಾಗೂ ಕೃಷಿಕ ನಾರಾಯಣ ಮೂಲ್ಯ  ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಸಂಘದ ಅಧ್ಯಕ್ಷೆ ಕಮಲಾ ು ಉಪಸ್ಥಿತರಿದ್ದರು. ಹರೀಶ್ ಮುಂಡಿತ್ತಡ್ಕ ಸ್ವಾಗತಿಸಿ, ವಾಸು ನಾಯ್ಕ ವಂದಿಸಿದರು.
   





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries