HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಪೆರ್ಲ ಶ್ರೀ ಅಯ್ಯಪ್ಪ ಭಜನಾ ಮಂದಿರದ ಲೋಕಾರ್ಪಣೆ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಛಾಯಾಬಿಂಬ ಪ್ರತಿಷ್ಠೆ ಇಂದು
   ಪೆರ್ಲ:  ಇಲ್ಲಿನ ನೂತನ ಶ್ರೀ ಅಯ್ಯಪ್ಪ ಭಜನಾ ಮಂದಿರದ ಲೋಕಾರ್ಪಣೆ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಛಾಯಾಬಿಂಬ ಪ್ರತಿಷ್ಠೆಯ ಅಂಗವಾಗಿ ಶನಿವಾರ ವಿವಿಧ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಚಾಲನೆಗೊಂಡವು.
   ಶನಿವಾರ ಸಂಜೆ 5ಕ್ಕೆ ತಂತ್ರಿವರ್ಯ ವೇದಮೂತರ್ಿ ಶಿವಸುಬ್ರಹ್ಮಣ್ಯ ಭಟ್ ಶುಳುವಾಲಮೂಲೆಯವರನ್ನು ಪೂರ್ಣಕುಂಭಗಳೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಕರೆತರಲಾಯಿತು. ಬಳಿಕ ಸುದರ್ಶನ ಹವನ ನಡೆಯಿತು.
   ಭಾನುವಾರ ಬೆಳಿಗ್ಗೆ 8ಕ್ಕೆ ಸಪ್ತಶುದ್ದಿ, ಗೋನಿವಾಸ, ಪುಣ್ಯಾಹ, ಗಣಪತಿ ಅಥರ್ವಶೀರ್ಷ ಹವನ, ಕಲಶ ಪ್ರತಿಷ್ಠೆ, ವೇದಪಾರಾಯಣಗಳು ನಡೆದವು. 9.30ಕ್ಕೆ ಇಡಿಯಡ್ಕ ಶ್ರೀದುಗರ್ಾಪರಮೇಶ್ವರಿ(ಉಳ್ಳಾಲ್ತಿ),ವಿಷ್ಣುಮೂತರ್ಿ ಕ್ಷೇತ್ರ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ ಆಗಮಿಸಿತು. ಬಳಿಕ  ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮಧ್ಯಾಹ್ನ 12ಕ್ಕೆ ಉಗ್ರಾಣಮುಹೂರ್ತ ನಡೆಯಿತು. 12.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅನ್ನದಾನ ನೆರವೇರಿತು. ಮಧ್ಯಾಹ್ನ 1 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಘಟನಾ ಮುಖಂಡ ಗೋಪಾಲ ಚೆಟ್ಟಿಯಾರ್ ದೀಪ ಬೆಳಗಿಸಿ ಚಾಲನೆ ನೀಡಿದರು. ಸಂಜೆ 5ಕ್ಕೆ ರಾಕ್ಷೊಘ್ನ ಹವನ, ವಾಸ್ತು ಪೂಜೆ, ವಾಸ್ತುಬಲಿಗಳು ನೆರವೇರಿದವು.
   ಇಂದಿನ ಕಾರ್ಯಕ್ರಮ: (ಸೋಮವಾರ)
  ಬೆಳಿಗ್ಗೆ 6ಕ್ಕೆ ಪ್ರತಿಷ್ಠಾಂಗ ಹವನ, ಕಲಶಪೂಜೆ ನಡೆದು 10.23ರ ಮಿಥುನ ಲಗ್ನದಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಛಾಯಾಬಿಂಬ ಪ್ರತಿಷ್ಠೆ,ನೂತನ ಭಜನಾ ಮಂದಿರದ ಲೋಕಾರ್ಪಣೆ, ಶ್ರೀಶಾಸ್ತಾ ಕಲ್ಪೋಕ್ತ ಪೂಜೆ ನಡೆಯಲಿದೆ. 11 ರಿಂದ ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಂದ ಭಜನಾ ಸಮಕೀರ್ತನೆ, 12.30 ಕ್ಕೆ ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ನಿತ್ಯ ನೈಮಿತ್ತಿಕ ನಿರ್ಣಯ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ಸಪ್ತಶತೀ ಪಾರಾಯಣ, ದುಗರ್ಾಪೂಜೆ ನಡೆಯಲಿದೆ. ಬಳಿಕ ಸಂಜೆ 5 ರಿಂದ ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾಮರ್ಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು.ಹರಿಹರಪುರ ವೇದವಿಜ್ಞಾನ ಗುರುಕುಲದ ವಿದ್ವಾನ್ ಅರುಣ್ ರಾಜ್ ಅಂಬಾರ್ ಧಾಮರ್ಿಕ ಉಪನ್ಯಾಸ ನೀಡುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು. ಮೇ.1 ರಂದು ಬೆಳಿಗ್ಗೆ 6.30 ರಿಂದ ದೀಪಪ್ರಜ್ವಲನೆ, ಗಣಪತಿ ಹವ ಹಾಗೂ ಆ ಬಳಿಕ ರಾತ್ರಿ 9.15ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆಗಳು ನಡೆಯಲಿದೆ.
  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಮಧ್ಯಾಹ್ನ 1.15 ರಿಂದ ಶ್ರೀಶಾಸ್ತಾ ಮ್ಯೂಸಿಕಲ್ಸ್ ಪೆರ್ಲ ದವರಿಂದ ಭಕ್ತಿರಸಮಂಜರಿ ನಡೆಯಿತು.3.30 ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, ಸಂಜೆ 5 ರಿಂದ ಕಾಟುಕುಕ್ಕೆ ರಾಮಚಂದ್ರ ಮಣಿಯಾಣಿಯವರಿಂದ ಶ್ರೀರಾಮದರ್ಶನ ಹರಿಕಥಾ ಸಂಕೀರ್ತನೆ, ರಾತ್ರಿ 6.30 ರಿಂದ ವಿಟ್ಲದ ಸಂತೋಷ್ ಮತ್ತು ಬಳಗದವರಿಂದ ನಾದ ಸಂಭ್ರಮ-2018 ರ ಅವತರಣಿಕೆಯಲ್ಲಿ ಕೊಳಲು ವಾದನ ನಡೆಯಿತು. ರಾತ್ರಿ 8.30 ರಿಂದ ವಿದ್ಯಾಲಕ್ಷ್ಮೀ ನಾಟ್ಯ ವಿದ್ಯಾಲಯ ಕುಂಬಳೆ ಯ ವಿದ್ಯಾಥರ್ಿಗಳಿಂದ ನೃತ್ಯ ವೈಭವ ಪ್ರಸ್ತುತಗೊಂಡಿತು.
   ಇಂದು ಮಧ್ಯಾಹ್ನ 1.30 ರಿಂದ ಯಕ್ಷಗಾನ ವೈಭವ ನಡೆಯಲಿದ್ದು, ಭಾಗವತರುಗಳಾದ ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಪ್ರಸಾದ ಬಲಿಪ, ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಅಜೇರು ಭಾಗವಹಿಸುವರು. ಚೆಂಡೆ-ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ, ಶ್ರೀಧರ ಪಡ್ರೆ, ಅವಿನಾಶ್ ಶಾಸ್ತ್ರಿ ಕೊಲ್ಲೆಂಕಾನ ಸಹಕರಿಸುವರು. ಮಾಧವ ಡಿ. ಬಂಗೇರ ಕೊಳ್ತಮಜಲು ನಿರೂಪಿಸುವರು. ರಾತ್ರಿ 7.30 ರಿಂದ ಪ್ರಸಿದ್ದ ಗಾಯಕರಿಂದ ಧ್ವನಿತರಂಗ ಗಾಯನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11 ರಿಂದ ಕುಂಬಳೆಯ ನಟನಾ ಕಲಾವಿದರು ಅಭಿನಯದ ಪನ್ಪಿನೈನ್ ಪನೋಡೆ ತುಳು ನಾಟಕ ಪ್ರದರ್ಶನ ನಡೆಯಲಿದೆ.
   ನಾಳೆ ರಾತ್ರಿ 10 ರಿಂದ ಸಸಿಹಿತ್ಲು ಶ್ರೀಭಗವತೀ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಪುಣ್ಣಮೆದ ಪೊಣ್ಣು ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries