HEALTH TIPS

No title

                 ಕಾವ್ಯಗಳು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಬೇಕು-ಆರ್.ಕೆ.ಉಳಿಯತ್ತಡ್ಕ
    ಬದಿಯಡ್ಕ :'ಭಾಷೆ ಅಳಿದರೆ ಸಂಸ್ಕೃತಿಯೇ ಅಳಿಯುತ್ತದೆ. ಭಾವವನ್ನು ಭಾಷೆಯ ಮೂಲಕ ಅಭಿವ್ಯಕ್ತಿಗೊಳಿಸುವುದೇ ಕವಿತೆ. ಕವಿತೆಗಳು ಜನಮುಖಿಯಾಗಬೇಕು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹಿರಿಯ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಹೇಳಿದರು.
    ಅವರು ಭಾನುವಾರ ಬದಿಯಡ್ಕದ ಶ್ರೀಗುರುಸದನದಲ್ಲಿ ನಡೆದ ಕೇರಳ ಸಕರ್ಾರದ ಸಾಂಸ್ಕೃತಿಕ ಇಲಾಖೆಯ ಭಾರತ್ ಭವನ್ ಪ್ರಾಯೋಜಿತ ಬಹುಭಾಷಾ ಕಾವ್ಯೋತ್ಸವ ಕಾರ್ಯಕ್ರಮವನ್ನು ಕವಿತೆಗಳು ಬರಲಿ ಎಂಬ ಕವನವನ್ನು ವಾಚಿಸಿ ಉದ್ಘಾಟಿಸಿ ಮಾತನಾಡಿದರು.
   'ಕಯ್ಯಾರ ಕಿಂಞಣ್ಣ ರೈ ಅವರ ಕಾರ್ಯಕ್ಷೇತ್ರವಾದ ಬದಿಯಡ್ಕಕ್ಕೆ ಗಾಢ ಸಾಹಿತ್ಯದ ಹಿನ್ನೆಲೆಯಿದೆ. ಈ ಜಿಲ್ಲೆಯು ಬಹಭಾಷಿಗರ ನಾಡು. ಈ ಸತ್ವಕ್ಕೆ ಶಕ್ತಿ ಕೊಟ್ಟವರು ಮಂಜೇಶ್ವರ ಗೋವಿಂದ ಪೈ ಅವರು. ಅವರ ಕಾಸರಗೋಡಿನಲ್ಲಿ ಸುಮಾರು 30ಕ್ಕೂ ಮಿಕ್ಕಿದ ವಿವಿಧ ಭಾಷೆಗಳು ಚಾಲ್ತಿಯಲ್ಲಿದೆ' ಎಂದು ಅವರು ಹೇಳಿದರು.
  ಸಭೆಯ ಅಧ್ಯಕ್ಷತೆಯನ್ನು ಹಿರಿಯ ಕವಿ ರಾಘವನ್ ಬೆಳ್ಳಿಪ್ಪಾಡಿ ವಹಿಸಿದ್ದರು. ಈ ಸಂದರ್ಭದಲ್ಲಿ ನಡೆದ ಬಹಭಾಷಾ ಕವಿಗೋಷ್ಠಿಯಲ್ಲಿ ಹರೀಶ್ ಪೆರ್ಲ, ಗಣೇಶ್ ಪೈ ಬದಿಯಡ್ಕ (ಕೊಂಕಣಿ), ಟಿ ಎ ಎನ್ ಖಂಡಿಗೆ, ರಾಜಶ್ರೀ ಟಿ ರೈ (ತುಳು), ಸುಂದರ ಬಾರಡ್ಕ, ಪದ್ಮಾವತಿ ಏದಾರು(ಕನ್ನಡ), ವಿರಾಜ್ ಅಡೂರು (ಶಿವಳ್ಳಿ ತುಳು), ಬಾಲಕೃಷ್ಣ ಬೇರಿಕೆ, ಶಮರ್ಿಳಾ ಬಜಕೂಡ್ಲು (ಮರಾಟಿ), ಬದ್ರುದ್ದೀನ್ ಕೂಳೂರು (ಬ್ಯಾರಿ), ಡಾ. ಎಸ್ ಎನ್ ಭಟ್ ಪೆರ್ಲ(ಹವ್ಯಕ ಕನ್ನಡ), ಸನ್ನಿಧಿ ಟಿ ರೈ (ಹಿಂದಿ), ರವೀಂದ್ರನ್ ಪಾಡಿ, ಶಿವಾನಿ, ಸಂತೋಷ್ ಕುಡಿಂಞವಳಪ್ಪು, ಪಿ ಕೆ ಗೋಪಿ ಮಡಿಕೈ, ಶಿಹಾಬ್ ರಹ್ಮಾನ್ ಕುಟ್ಯಾನಂ, ಉಣ್ಣಿಕೃಷ್ಣನ್ ಅಣಿಞ(ಮಲಯಾಳ) ಭಾಗವಹಿಸಿದ್ದರು. ಪುಷ್ಪಾಕರನ್ ಬೆಂಡೆಚ್ಚಾಲ್ ವಂದಿಸಿದರು.
   ಬಳಿಕ ತುಳುನಾಡು ಮತ್ತು ಭಾಷೆ-ವೈವಿದ್ಯತೆಯಲ್ಲಿ ಏಕತೆ ಕುರಿತ ಸಂವಾದ, ದೇಸೀ ಭಾಷೆಗಳ ಬೆನ್ನರಸುತ್ತಾ ಎಂಬ ವಿಚಾರ ಸಂಕಿರಣ, ಸಾಧಕರಾದ ಸಾಯಿರಾಂ ಗೋಪಾಲಕೃಷ್ಣ ಭಟ್(ಸಮಾಜ ಸೇವೆ), ಪಿ ಎಸ್ ಪುಣಿಂಚಿತ್ತಾಯ(ಚಿತ್ರ ಕಲೆ), ಪ್ರೊ. ಶ್ರೀನಾಥ್ (ಸಾಂಸ್ಕೃತಿಕ ರಂಗ), ಬಳ್ಳಪದವು ಮಾಧವ ಉಪಾಧ್ಯಾಯ(ಸಂಗೀತ), ನಿಟ್ಟೋಣಿ (ದೈವ ನರ್ತಕ), ಕೇಳು ಮಾಸ್ತರ್ ಅಗಲ್ಪಾಡಿ(ಸಾಹಿತ್ಯ), ದೇವಕಿ, ಪಿ ಎನ್ ಆರ್ ಅಮ್ಮಣ್ಣಾಯ(ಸಮಾಜ ಸೇವೆ), ಅಬ್ದುಲ್ ಲತೀಫ್ ಪೇರೂರು(ಮಾಪಿಳ್ಳೆ ಕಲಾವಿದ), ಸುಧೀರ್ ಕುಮಾರ ಶೆಟ್ಟಿ (ಸಮಾಜ ಸೇವೆ)ಯವರನ್ನು ಸನ್ಮಾನಿಸಲಾಯಿತು.
ನಂತರ ಜಾನಪದ ನೃತ್ಯ ಪ್ರದರ್ಶನ, ಕನರ್ಾಟಕ ಹಾಗೂ ಆಂದ್ರಪ್ರದೇಶದ ವಿವಿಧ ಕಲೆಗಳ ಪ್ರದರ್ಶನ, ಸಬ್ಬಣಕೋಡಿ ರಾಮ ಭಟ್ಟರ ನಿದರ್ೇಶನದಲ್ಲಿ ವೀರ ಬಬ್ರುವಾಹನ ಮಕ್ಕಳ ಯಕ್ಷಗಾನ ನಡೆಯಿತು. ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎನ್ ಕೃಷ್ಣ ಭಟ್, ಮುಖಂಡರಾದ ಮಾಹಿನ್ ಕೇಳೋಟ್ ಮತ್ತಿತರರು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries