HEALTH TIPS

No title

               ಮಕ್ಕಳ ಸೃಜನಶೀಲತೆಗೆ ಪ್ರೋತ್ಸಾಹ ಅಗತ್ಯ-ದಿನೇಶ್
                ಬೇಸಿಗೆ ಶಿಬಿರ ಜೋಕಾಲಿಗೆ ಚಾಲನೆ
   ಮಂಜೇಶ್ವರ: ಇಂದಿನ ಶಿಕ್ಷಣವು ವಿದ್ಯಾಥರ್ಿಗಳ ಸರ್ವತೋಮುಖ ಜ್ಞಾನ ಸಂಪಾದನೆಗೆ ಒತ್ತು ನೀಡುತ್ತಿದ್ದು, ವಿದ್ಯಾಥರ್ಿಗಳ ಸಾಮಥ್ರ್ಯಕ್ಕನುಗುಣವಾಗಿ ಪ್ರತಿಭೆಗೆ ಪ್ರೋತ್ಸಾಹ ನೀಡಿ ಬೆಳೆಸಲು ಅವಕಾಶಗಳಿವೆ ಎಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
  ನವನಟನಾ ಕಾಸರಗೋಡಿನ ಆಶ್ರಯದಲ್ಲಿ  ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ "ಗಿಳಿವಿಂಡು" ವಿನಲ್ಲಿ ಆಯೋಜಿಸಲಾದ ಮೂರು ದಿನಗಳ ಉಚಿತ ಬೇಸಿಗೆ ಶಿಬಿರ ಜೋಕಾಲಿ-2018 ಸಮಾರಂಭ ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
  ಮಕ್ಕಳ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ, ಬೆಳಕಿಗೆ ತರುವ ಪ್ರಯತ್ನಗಳು ವಿಶೇಷ ಶಿಬಿರಗಳ ಮೂಲಕ ಸಾಕಾರವಾದಾಗ ಮುಂದಿನ ಸಮಾಜಕ್ಕೆ ನೀಡುವ ಮಹತ್ವದ ಕೊಡುಗೆಯಾಗಿ ಪರಿಗಣಿಸಲ್ಪಡುತ್ತದೆ. ವಿವಿಧ ಕ್ಷೇತ್ರಗಳಲ್ಲಿರುವ ವಿಶಾಲ ಅವಕಾಶಗಳ ಅರಿವನ್ನು ಗ್ರಾಮೀಣ ಪ್ರದೇಶಗಳ ವಿದ್ಯಾಥರ್ಿಗಳಿಗೆ ಒದಗಿಸಿಕೊಡುವ ಪ್ರಯತ್ನಗಳನ್ನು ಸಂಘಸಂಸ್ಥೆಗಳ ಮುತುವಜರ್ಿಯಿಂದ ನಿರ್ವಹಿಸುವುದು ಜವಾಬ್ದಾರಿಯುತ ಸಮಾಜ ನಿಮರ್ಾಣದ ಭಾಗವಾಗಿದ್ದು, ಶಿಬಿರ ಯಶಸ್ವಿಗೊಳ್ಳಲಿ ಎಂದು ಅವರು ತಿಳಿಸಿದರು.
   ಸಂಘಟಕ ಡಾ.ರಾಜೇಶ್ ಆಳ್ವ ಬದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶಾಲ ತುಳುನಾಡು ಹಲವು ಸಾಧಕರ ಕರ್ಮಭೂಮಿಯಾಗಿದ್ದು, ಅಂತಹ ಸಾಧಕರ ನೆನಪುಗಳೊಂದಿಗೆ ಭವಿಷ್ಯವನ್ನು ಇನ್ನಷ್ಟು ಸುಂದರಗೊಳಿಸುವ ಹೊಣೆ ವರ್ತಮಾನದ ಅಗತ್ಯವಾಗಿದೆ ಎಂದು ತಿಳಿಸಿದರು. ಪುಟ್ಟ ಮಕ್ಕಳಲ್ಲಿ ಅಡಕವಾಗಿರುವ ಶಕ್ತಿಯನ್ನು ಬೆಳಕಿಗೆ ತಂದು ಸ್ಪಷ್ಟ ಮಾರ್ಗದರ್ಶನದೊಂದಿಗೆ ಮುನ್ನಡೆಸುವ ನಿಟ್ಟಿನಲ್ಲಿ ಶಿಬಿರಗಳು ಸಹಕಾರಿಯಾಗಿದ್ದು, ಪ್ರತಿಯೊಬ್ಬ ಸಹೃದಯನ ಪ್ರೋತ್ಸಾಹ, ಬೆಂಬಲ ಅಗತ್ಯವಿದೆ ಎಂದು  ಅವರು ತಿಳಿಸಿದರು.
  ನ್ಯಾಯವಾದಿ ಥೋಮಸ್ ಡಿಸೋಜಾ ಮುಖ್ಯಬ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಿಕ್ಷಕ, ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು, ನಾಟಕ ನಿದರ್ೇಶಕ ಉದಯ ಸಾರಂಗ್ ಉಪಸ್ಥಿತರಿದ್ದರು. ಅಶೋಕ ಕೊಡ್ಲಮೊಗರು ಸ್ವಾಗತಿಸಿ, ಹರ್ಷ ರೈ ಪುತ್ರಕಳ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.
   ಮೂರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಜಿಲ್ಲೆಯ 35ಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳು ಭಾಗವಹಿಸುತ್ತಿದ್ದು, ಅವಿನಾಶ ರೈ ನೀನಾಸಂ, ರಾಷ್ಟ್ರೀಯ ನಾಟಕ ಶಾಲೆಯ ಬಿಜು ಇರಿನವೆ, ರಂಗ ನಿದರ್ೇಶಕ ಉದಯ ಸಾರಂಗ್, ರಂಗಚಾವಡಿ ಬಂಬಿಲದ ಕೃಷ್ಣಪ್ಪ ಬಂಬಿಲ, ಚಲನಚಿತ್ರ ಕಲಾವಿದ ಮೋಹನ ಪಡ್ರೆ, ನೃತ್ಯ ನಿದರ್ೇಶಕ ಸದಾನಂದ ಆಚಾರ್ಯ, ಒರಿಗಮಿ ಕಲಾವಿದೆ ಪದ್ಮಾಟೀಚರ್ ಮುಳ್ಳೇರಿಯ,ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸಾಹಿತಿ ವಿರಾಜ್ ಅಡೂರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡುವರು. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿದರ್ೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಕಾಮೆಡಿ ಕಿಲಾಡಿ ಧೀರಜ್ ಹಾಗೂ ಸೂರಜ್ ಮಂಗಳೂರು, ಡ್ರಾಮಾ ಜೂನಿಯರ್ಸ್ ಅನೂಪ್ ರಮಣ ಶಮರ್ಾ, ನಿದರ್ೇಶಕ ಜೆ.ಪಿ.ತೂಮಿನಾಡ್, ಜಾದೂ ನೃತ್ಯ ಕಲಾವಿದೆ ತೇಜಸ್ವನಿನಿ ಕಡೆಂಕೊಡಿ, ಸಾಹಿತಿ ಹರೀಶ್ ಸುಲಾಯ ಬಡ್ಡಂಬೆಟ್ಟು, ಕಣ್ಣೂರು ವಿವಿ ಕಲೋತ್ಸವ ನಾಟಕ ಪ್ರಶಸ್ತಿ ವಿಜೇತೆ ಸುಶ್ಮಿತಾ ಆರ್, ಶರಣ್ ಕಾಟುಕುಕ್ಕೆ, ಬಾಲ ಯಕ್ಷಗಾನ ಕಲಾವಿದೆ ಸುಶ್ಮಿತಾ ಸುಧೀರ್ ರೈ ಮುಳ್ಳೇರಿಯ ಮೊದಲಾದವರು ಭಾಗವಹಿಸಿ ಸಂವಾದ ನಡೆಸುವರು. ಜೊತೆಗೆ ವಿಜಯಕುಮಾರ್ ಪಾವಳ,  ಟಿ.ಡಿ.ಸದಾಶಿವ ರಾವ್, ಬಾಲಕೃಷ್ಣ ಶೆಟ್ಟಿಗಾರ್ ಬಡಾಜೆ, ಜಯಾನಂದ ಆಚಾರ್ಯ, ಬಾಬು ಮಾಸ್ತರ್ ಮಂಜೇಶ್ವರ, ಸಂಜೀವ ಶೆಟ್ಟಿ ಮಾಡ ಶಿಬಿರದಲ್ಲಿ ಭಾಗವಹಿಸುವರು. 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries