ಆರ್ ಟಿಐ ವ್ಯಾಪ್ತಿಗೆ ಬಿಸಿಸಿಐ: ಕಾನೂನು ಆಯೋಗ ಶಿಫಾರಸು
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯನ್ನು ಮಾಹಿತಿ ಹಕ್ಕು ಕಾಯಿದೆ(ಆರ್ಟಿಐ) ವ್ಯಾಪ್ತಿಗೆ ತರಬೇಕು ಎಂದು ಕಾನೂನು ಆಯೋಗ ಬುಧವಾರ ಶಿಫಾರಸು ಮಾಡಿದೆ.
ಕ್ರಿಕೆಟ್ ಆಟವನ್ನು ನಿಯಂತ್ರಿಸುತ್ತಿರುವ ಬಿಸಿಸಿಐ ಪಾತ್ರ ಪಾರದರ್ಶಕವಾಗಿರಬೇಕಾದರರೆ ಅದು ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು. ಇಲ್ಲದಿದ್ದರೆ ಅಪಾರದರ್ಶಕತೆ ಮತ್ತು ಅಕೌಂಟೆಬಿಲಿಟಿ ಇಲ್ಲದ ವಾತಾವರಣಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕಾನೂನು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
ಕಾನೂನು ಆಯೋಗ ಇಂದು ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ವರದಿ ಸಲ್ಲಿಸಿದ್ದು, ಬಿಸಿಸಿಐ ಅನ್ನು ಸಂವಿಧಾನದ ಆಟರ್ಿಕಲ್ 12 ಅಡಿ ಸ್ಟೇಟ್ ಎಂದು ವಗರ್ೀಕರಿಸಲು ಅರ್ಹವಾಗಿದೆ ಎಂದು ಹೇಳಿದೆ.
2016ರಲ್ಲಿ ಸುಪ್ರೀಂ ಕೋಟರ್್, ಬಿಸಿಸಿಐ ಅನ್ನು ಆರ್ ಟಿಐ ಅಡಿ ತರಬೇಕೇ ಅಥವಾ ಬೇಡ ಎಂಬ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಕಾನೂನು ಆಯೋಗಕ್ಕೆ ಸೂಚಿಸಿತ್ತು.
ಒಂದು ವೇಳೆ ಕೇಂದ್ರ ಸಕರ್ಾರ ಕಾನೂನು ಆಯೋಗ ಶಿಫಾರಸನ್ನು ಒಪ್ಪಿದರೆ ಬಿಸಿಸಿಐ ಸಾರ್ವಜನಿಕ ಸಂಸ್ಥೆಯಾಗಿ, ಆರ್ ಟಿಐ ಕಾಯ್ದೆ ಅಡಿ ಬರಲಿದೆ. ಹಾದ ದೇಶ, ರಾಜ್ಯ ಹಾಗೂ ವಲಯ ತಂಡಗಳನ್ನು ಪ್ರತಿನಿಧಿಸುವ ಆಟಗಾರರ ಆಯ್ಕೆಯನ್ನು ಸುಪ್ರೀಂ ಕೋಟರ್್ ನಲ್ಲಿ ಪ್ರಶ್ನಿಸಬಹುದು. ಅಲ್ಲದೆ ಬಿಸಿಸಿಐ ನಡೆಸುವ ರಹಸ್ಯ ಸಭೆಗಳಾಗಲೀ, ರಾಜಕೀಯ ವ್ಯಕ್ತಿಗಳನ್ನು ಪದಾಕಾರಿಗಳನ್ನಾಗಿ ಆರಿಸುವುದಾಗಲೀ, ನಿದರ್ಿಷ್ಟ ವ್ಯಕ್ತಿ ಇಲ್ಲವೇ ಸಂಸ್ಥೆ ಜತೆಗಿನ ಒಪ್ಪಂದವಾಗಲೀ ಹಾಗೂ ಆಟಗಾರರ ಆಯ್ಕೆ ಇತ್ಯಾದಿ ವಿಷಯಗಳು ಸಾರ್ವಜನಿಕವಾಗಲಿವೆ.