ಕನ್ನಡ ಭವನ ಗ್ರಂಥಾಲಯದಲ್ಲಿ ಅಭಿನಂದನೆ, ಗೌರವಾರ್ಪಣೆ
ಕುಂಬಳೆ: ಬೇಕಲ ರಾಮನಾಯಕರು ಕನ್ನಡ ನಾಡು - ನುಡಿಗೆ ಅಪಾರ ಕೊಡುಗೆ ನೀಡಿದವರು. ಐತಿಹ್ಯಗಳ ಆಧಾರದಲ್ಲಿ ಕನ್ನಡ ಕಥಾ ಸಾಹಿತ್ಯವನ್ನು ಸಮೃದ್ಧಗೊಳಿಸಿದವರು. ಅವರ ಸಂಸ್ಮರಣೆಯಂತಹಾ ಮಹತ್ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಕೈಗೆತ್ತಿಕೊಳ್ಳಬೇಕು. ಕಾಸರಗೋಡಿನ ಎಲ್ಲಾ ಕನ್ನಡ ಸಂಘಟನೆಗಳು ಅದಕ್ಕೆ ಕೈಜೋಡಿಸಬೇಕು ಎಂದು ಹಿರಿಯ ಸಾಹಿತಿ, ಭಾಷಾಂತರಕಾರ, ನಿವೃತ್ತ ಮುಖ್ಯೋಪಾಧ್ಯಾಯ ಎ.ನರಸಿಂಹ ಭಟ್ ಹೇಳಿದರು.
ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ಗ್ರಂಥಾಲಯದಲ್ಲಿ ಬೇಕಲ ರಾಮನಾಯಕ ಶತಮಾನೋತ್ಸವ ಸಂಸ್ಮರಣಾ ಕಾರ್ಯಕ್ರಮದಂಗವಾಗಿ ಆಯೋಜಿಸಿದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡಕ್ಕಾಗಿ ದುಡಿದವರನ್ನು ನಾವಿಂದು ಮರೆಯುತ್ತಿದ್ದೇವೆ. ಅವರ ತ್ಯಾಗಪೂರ್ಣ ಜೀವನ ಮತ್ತು ಸಾಧನೆಗಳ ದಾಖಲೀಕರಣವಿಲ್ಲದಾಗಿದೆ. ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಕಾಸರಗೋಡಿನ ಇತಿಹಾಸವೇ ತಿರುಚಲ್ಪಡಲಿದೆ ಎಂದು ನರಸಿಂಹ ಭಟ್ ಕಳಕಳಿ ವ್ಯಕ್ತಪಡಿಸಿದರು.
ಡಿವಿಜಿ ಸಾಹಿತ್ಯ ಪುರಸ್ಕೃತ ನರಸಿಂಹ ಭಟ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ, ಅಭಿನಂದನ ಪತ್ರ ನೀಡಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಸಾಹಿತಿ, ಸಂಘಟಕಿ ಮಾಲತಿ ಕಮಲಾಕ್ಷ ಕಳನಾಡು ಅವರಿಗೆ ಕನ್ನಡ ಭವನ ಗ್ರಂಥಾಲಯದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಸಾಹಿತ್ಯ ಸೃಷ್ಟಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದ ಹಿರಿಯರನ್ನು ಸ್ಮರಿಸಿದ ಮಾಲತಿ ಅವರು ಸ್ವರಚಿತ ಕವಿತೆ ವಾಚಿಸಿ ಸರ್ವರ ಪ್ರಶಂಸೆಗೆ ಪಾತ್ರರಾದರು.
ಕನ್ನಡ ಭವನ ಗ್ರಂಥಾಲಯದ ಅಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿನಂದನ ಭಾಷಣ ಮಾಡಿದರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ, ಯಜ್ಞನಾರಾಯಣ, ಆಶಾ ಜಗದೀಶ್ ಉಪಸ್ಥಿತರಿದ್ದರು. ಕನ್ನಡ ಭವನ ಗ್ರಂಥಾಲಯದ ಸಂಸ್ಥಾಪಕ ಹಾಗೂ ನಿದರ್ೇಶಕ ಕೆ.ವಾಮನ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಕಾರ್ಯದಶರ್ಿ ಜಗದೀಶ್ ಕೂಡ್ಲು ಸ್ವಾಗತಿಸಿ, ನಿದರ್ೇಶಕಿ ಕೆ.ಪಿ.ಸಂಧ್ಯಾರಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಿಳಾ ಸಮಿತಿ ಸಂಚಾಲಕಿ ಲತಾ ಪ್ರಕಾಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ತಾರಾನಾಥ ಶೆಟ್ಟಿ ವಂದಿಸಿದರು.