HEALTH TIPS

No title

             ಸನ್ಮನಸ್ಸಿನ ಭಗವತ್ ಸೇವೆ ಒಳಿತನ್ನುಂಟುಮಾಡುತ್ತದೆ-ಚಂದ್ರಶೇಖರ ಗೋಖಲೆ
     ಕುಂಬಳೆ: ಕಲಿಯುಗದಲ್ಲಿ ಭಕ್ತರ ಇಷ್ಟಾರ್ಥಗಳನ್ನು ದಯಪಾಲಿಸುವ, ಭೂಮಿಯ ಸಂರಕ್ಷಕನಾಗಿರುವ ನಾಗನ ಆರಾಧನೆಯಿಂದ ಸಕಲ ಐಶ್ವರ್ಯಗಳು ಪ್ರಾಪ್ತಿಯಾಗುತ್ತದೆ. ಮನೆ ಮನಗಳಲ್ಲಿ ಸಮಾಧಾನ ಕಂಡುಬರುತ್ತದೆ. ಸನ್ಮನಸಿನಿಂದ ಮಾಡುವ ದೇವರ ಸೇವೆಯು ಈ ಜಗತ್ತಿನಲ್ಲಿ ಒಳಿತನ್ನು ಉಂಟುಮಾಡುತ್ತದೆ ಎಂದು ವೇದಮೂತರ್ಿ ಚಂದ್ರಶೇಖರ ಗೋಖಲೆ ಅಭಿಪ್ರಾಯ ಪಟ್ಟರು.
   ಅವರು ಧರ್ಮತ್ತಡ್ಕ ಅಶ್ವಥಕಟ್ಟೆಯ ಬಳಿ ಇತ್ತೀಚೆಗೆ ನಡೆದ ನಾಗರಕಟ್ಟೆ ಪ್ರತಿಷ್ಠಾ ದಿನಾಚರಣೆಯ ಪ್ರಯುಕ್ತ ಸರೋಜಾ ಮಾಧವನ್ ಸಭಾಭವನದಲ್ಲಿ  ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭನುಡಿಯನ್ನಾಡುತ್ತಿದ್ದರು.
  ಜನರಲ್ಲಿರುವ ಭಯ ಭಕ್ತಿ ಹಾಗೂ ಕರ್ತವ್ಯ ಪ್ರಜ್ಞೆ, ದೇವರಿಗೆ ಮುಕ್ತ ಮನಸ್ಸಿನಿಂದ ಸಲ್ಲಿಸುವ ಸೇವೆ ನಮ್ಮ ಬದುಕನ್ನು ಸರಿದಾರಿಯಲ್ಲಿ ನಡೆಸುತ್ತದೆ. ಆದುದರಿಂದ ದೇವರ ಮೇಲೆ ಭಯ  ಭಕ್ತಿ ಇರಬೇಕು. ಚಿಕ್ಕಂದಿನಲ್ಲೇ ನಾವದನ್ನು ಬೆಳೆಸಿಕೊಂಡು ಬರಬೇಕು ಎಂದು ಹೇಳಿದರು.
  ಖ್ಯಾತ ಜ್ಯೋತಿಷಿ ವಸಂತ ಪಂಡಿತ್ ಗುಂಪೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಮುರಳೀಧರ ರಾವ್ ದೀಪೋಜ್ವಲನೆಯ ಮೂಲಕ ಉದ್ಘಾಟಿಸಿದರು. ಶ್ರೀ ದುಗರ್ಾಪರಮೇಶ್ವರಿ ಎ ಯು ಪಿ ಶಾಲೆ ಸಜಂಕಿಲ ಇಲ್ಲಿನ ಮುಖ್ಯೋಪಾಧ್ಯಾಯ ಶ್ರೀಕಾಂತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಾಗ್ದೇವಿ ಹಾಗೂ ವೈಷ್ಣವಿ ಪ್ರಾರ್ಥನೆ ಹಾಡಿದರು. ಗೀತಾ ವಸಂತ್ ಸ್ವಾಗತಿಸಿ, ಗೋವಿಂದ ಭಟ್ ಗುಂಪೆ ವಂದಿಸಿದರು. ಉದಯಕುಮಾರ್  ಹಾಗೂ ಸಂಧ್ಯಾಗೀತಾ ಬಾಯಾರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
    ಚಾಲಿಸ್ ಭಜನಾ ಸಂಘ ಹನುಮಾನ್ ಕ್ಷೇತ್ರ ಬೋವಿಕ್ಕಾನ ಇವರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬೆಳಗ್ಗೆ ಗಣಪತಿ ಹೋಮ, ಮಧ್ಯಾಹ್ನ ಅಶ್ವಥ ಪೂಜೆ ಹಾಗೂ ರಾತ್ರಿ ಸತ್ಯನಾರಾಯಣ ಪೂಜೆ ನಡೆುತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಶಾಲೆಯ ಹಿರಿಯ ಕಿರಿಯ ವಿದ್ಯಾಥರ್ಿಗಳಿಂದ ನಡೆದ ಆಕರ್ಷಕ ನೃತ್ಯ ಪ್ರದರ್ಶನವು ಜನಮನ ಸೂರೆಗೊಂಡಿತು. ಆ ಬಳಿಕ ಅಕ್ಷತಾ ಶ್ರೀವತ್ಸ ಪೆರ್ಲ ಅವರಿಂದ ಭರತನಾಟ್ಯ ಕಲಾರಸಿಕರ ಮನತಣಿಸುವಲ್ಲಿ ಯಶಸ್ವಿಯಾಯಿತು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries