HEALTH TIPS

No title

             ಶ್ರೀ ಜಟಾಧಾರಿ ಮೂಲಸ್ಥಾನ, ಮಲೆತ್ತಡ್ಕ-ಸ್ವರ್ಗ- ಬ್ರಹ್ಮಕಲಶೋತ್ಸವ
     ಪೆರ್ಲ: ಸ್ವರ್ಗ ಮಲೆತ್ತಡ್ಕದ ಶ್ರೀಜಟಾಧಾರಿ ಮೂಲಸ್ಥಾನದ ನಾಗಪ್ರತಿಷ್ಠೆ, ಜಟಾಧಾರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಟಾಧಾರಿ ಮಹಿಮೆ ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗಿನಿಂದ ವಿವಿಧ ಕಾರ್ಯಕ್ರಮಗಳು ನೆರವೇರಿದವು.
   ಪ್ರಾತಃಕಾಲ ಅಡ್ಯೆತಕಂಡ ನಾಗಾಲಯದಲ್ಲಿ ಗಣಪತಿ ಹವನ, ಪ್ರತಿಷ್ಟಾಂಗ ಕಲಶ ಪೂಜೆ, ಆಶ್ಲೇಷಾ ಬಲಿ, ಮುಹೂರ್ತ ದಾನ ಕಾರ್ಯಕ್ರಮಗಳು ನೆರವೇರಿತು. ಬಳಿಕ  11.05 ರ ಮಿಥುನ ಲಗ್ನ ಸುಮುಹೂರ್ತದಲ್ಲಿ ನಾಗ ಪ್ರತಿಷ್ಠೆಯನ್ನು ವೈಧಿಕರು ತಾಂತ್ರಿಕ ವಿಧಿವಿಧಾನಗಳೊಮದಿಗೆ ನೆರವೇರಿಸಿದರು. ಬಳಿಕ ತಾಂಬೂಲ, ಮಂತ್ರಾಕ್ಷತೆ, ಮಧ್ಯಾಹ್ನ 1 ರಿಂದ ಮೂಲಸ್ಥಾನದಲ್ಲಿ  ಭೋಜನ ಪ್ರಸಾದ ನಡೆಯಿತು.
   ಅಪರಾಹ್ನ 3.30 ಕ್ಕೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿದಾಗ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಬಳಿಕ ಸಂಜೆ 4ಕ್ಕೆ  ಶ್ರೀಮದ್ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳವರಿಗೆ  ಪೂರ್ಣಕುಂಭ ಸ್ವಾಗತ ಕಾರ್ಯಕ್ರಮ ನಡೆಯಿತು. ಶ್ರೀಗಳು ಶ್ರೀಕ್ಷೇತ್ರದ ಕೆಲಸ ಕಾರ್ಯಗಳನ್ನು ವೀಕ್ಷಿಸಿ ಶ್ಲಾಘನೆ ವ್ಯಕ್ತಪಡಿಸಿ ವಿಶೇಷ ಪ್ರಾರ್ಥನೆಗೈದು ಶುಭಹಾರೈಸಿದರು. ಈ ಸಂದರ್ಭ ಗೌರವಾಧ್ಯಕ್ಷ ವಾಸುದೇವ ಭಟ್ ತಡೆಗಲ್ಲು, ಕ್ಷೇತ್ರಾಧಿಕಾರಿ ಮಾಧವ ಭಟ್ ಬೆಲ್ಲ, ಕಾಯರ್ಾಧ್ಯಕ್ಷ ಬಿ.ಕೆ.ಶ್ರೀರಾಮ ಬೆಲ್ಲ, ಕಾರ್ಯದಶರ್ಿ ಶ್ರೀಹರಿ ಭಟ್ ಸಜಂಗದ್ದೆ, ಜೊತೆ ಕಾರ್ಯದಶರ್ಿ ಹೃಷಿಕೇಶ ವಿ.ಎಸ್.ಸ್ವರ್ಗ, ಕೆ.ವೈ.ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಎಸ್.ಎನ್. ವೆಂಕಟವಿದ್ಯಾಸಾಗರ ಸಹಿತ ವಿವಿಧ ವಿಭಾಗಗಳ ಸಂಚಾಲಕರು, ಪದಾಧಿಕಾರಿಗಳು, ನೂರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಬಳಿಕ ಧಾಮರ್ಿಕ ಸಭಾ ಕಾರ್ಯಕ್ರಮ ನಡೆಯಿತು.
   ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ  ವಿವೇಕಾನಂದ ಶಿಶುಮಂದಿರ  ಪೆರ್ಲದ ಮಕ್ಕಳಿಂದ ಹಾಡು-ನೃತ್ಯಗಳ ವೈವಿಧ್ಯತೆ, 7 ರಿಂದ ರಸಮಂಜರಿ, 7.30  ರಿಂದ ಮನೋರಂಜನೆ, 8.15 ರಿಂದ ನೃತ್ಯ, 8.30 ರಿಂದ ಅಕ್ಷರಾ ಟ್ರ್ಯಾಕ್ ಮ್ಯೂಸಿಕಲ್ ವಲ್ಡರ್್ ಪುತ್ತೂರು ಅಪರ್ಿಸುವ ಕೃಷ್ಣಾ ಶ್ರೀನಿವಾಸ್, ಚಿತ್ರ ನಟಿ ಕವಿತಾ ದಿನಕರ್ ಮತ್ತು ಗೋಪಾಲಕೃಷ್ಣ ಪುತ್ತೂರು ಬಳಗದಿಂದ ಭಕ್ತಿ-ಭಾವ-ಗಾನ ಸಂಗಮ ಕಾರ್ಯಕ್ರಮ ನಡೆಯಿತು.
  ಶುಕ್ರವಾರದ ಕಾರ್ಯಕ್ರಮ:
  ಬೆಳಿಗ್ಗೆ 9.30ಕ್ಕೆ ಪೆರ್ಲ ನಾಲಂದ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ವಿಘ್ನೇಶ್ವರ ವಮರ್ುಡಿಯವರಿಂದ ದೀಪ ಪ್ರಜ್ವಲನೆ, 9.45ರಿಂದ ಭಜನೆ, 11.45 ರಿಂದ ಕುಣಿತ ಭಜನೆ, ಮಧ್ಯಾಹ್ನ 1 ರಿಂದ ಪ್ರಸಾದ ಭೋಜನ, 2.15 ರಿಂದ ಭಜನೆ, ಸಂಜೆ 4ಕ್ಕೆ ಪೆರ್ಲ ಸತ್ಯನಾರಾಯಣ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ, ಸ್ವೀಕಾರ ನಡೆಯಲಿದೆ. ಸಂಜೆ 6 ರಿಂದ ನೃತ್ಯ ಕಾರ್ಯಕ್ರಮ, 7.30 ರಿಂದ ನೆನಪು ನಿನಾದ ಗೀತ-ಗಾನ-ತಾಳ ವೈವಿಧ್ಯ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries