HEALTH TIPS

No title

             ಕುಟ್ಟಿಕುಮೇರಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
   ಉಪ್ಪಳ: ಪೈವಳಿಕೆ ಸಮೀಪದ ಲಾಲ್ಬಾಗ್ ಕುಟ್ಟಿಕುಮೇರಿ ಶ್ರೀರಕ್ತೇಶ್ವರಿ, ಗುಳಿಗ, ನಾಗ ಸಾನ್ನಿಧ್ಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ.26 ಹಾಗೂ 27 ರಂದು ತಂತ್ರಿವರ್ಯ ಬ್ರಹ್ಮಶ್ರೀ ಕುಂಟುಕೊಳಂಜಿ ವಾಸುದೇವ ನಲ್ಲೂರಾಯರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
  ಕಾರ್ಯಕ್ರಮದ ಅಂಗವಾಗಿ ಏ.26 ರಂದು ಸಂಜೆ 3ಕ್ಕೆ ಲಾಲ್ಬಾಗ್ನಿಂದ ಹೊರೆಕಾಣಿಕೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಆಗಮನ, 4ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಸಂಜೆ 5 ರಿಂದ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಸ್ಥಳ ಶುದ್ದಿ, ರಾಕ್ಷೊಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಶುದ್ದಿ, ಬಿಂಬಾಧಿವಾಸ ಕಾರ್ಯಕ್ರಮಗಳು ನಡೆಯಲಿದೆ.
   ಏ.27 ರಂದು ಬೆಳಿಗ್ಗೆ 6.30ಕ್ಕೆ ಗಣಹೋಮ, ಅಧಿವಾಸ ಹೋಮ, 7.30ಕ್ಕೆ ಕಲಶಪೂರಣೆ, 9.22ರ ಮಿಥುನ ಲಗ್ನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಕಲ ವೈಧಿಕ, ತಾಂತ್ರಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ. ಬಳಿಕ 11ಕ್ಕೆ ಕಲಶಾಭಿಷೇಕ, ಆಶ್ಲೇಷಬಲಿ, ಅಪರಾಹ್ನ 12ಕ್ಕೆ ತಂಬಿಲ ಸೇವೆ,ಪ್ರಸಾದ ವಿತರಣೆ, 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
   ಸಮಾರಂಭದ ಅಂಗವಾಗಿ ಏ.26 ರಂದು ಸಂಜೆ 7ಕ್ಕೆ ಅಂಬಾರು ಸದಾಶಿವ ದೇವಸ್ಥಾನದ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾಮರ್ಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಭಾರತ ಕಬ್ಬಡಿ ತಂಡದ ಮಾಜಿ ಉಪನಾಯಕ ಭಾಸ್ಕರ ರೈ ಮಂಜಲ್ತೋಡಿ, ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ, ಕೇರಳ ವಿದ್ಯುತ್ ಪ್ರಸರಣ ಇಲಾಖೆಯ ಸಹಾಯಕ ಅಧಿಕಾರಿ ಸುಬ್ರಹ್ಮಣ್ಯ ಭಟ್, ಚಿಪ್ಪಾರ್ ವಿಷ್ಣುಮೂತರ್ಿ ದೇವಸ್ಥಾನದ ಅಧ್ಯಕ್ಷ ಐತ್ತಪ್ಪ ಶೆಟ್ಟಿಗಾರ್, ಕೊಮ್ಮಂಗಳ ಕೊರತಿ ಗುಳಿಗ ಕೊರಗುತನಿಯ ದೈವಕ್ಷೇತ್ರದ ಅಧ್ಯಕ್ಷ ರಘು ಶೆಟ್ಟಿ ಕೊಮ್ಮಂಗಳ, ಮೀನಾಕ್ಷಿ ಸಿ.ಕೆ.ಚಿಪ್ಪಾರ್, ಚಂದ್ರಹಾಸ ಶೆಟ್ಟಿ ಕಲ್ಲೆಕಾರ್, ಪೈವಳಿಕೆ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ.ರಾಜಾರಾಮ ಭಟ್ ದೇವಕಾನ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದಶರ್ಿ ಕೇಶವ ಬಾಯಿಕಟ್ಟೆ, ಕೃಷ್ಣ ಗುರುಸ್ವಾಮಿ ಕುರುಡಪದವು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸೀತಾರಾಮ ನಾಯ್ಕ್, ಬಾಬು ರೈ, ಅಶೋಕ ಎಂ.ಸಿ.ಲಾಲ್ಬಾಗ್, ಪರಮೇಶ್ವರ ಪೈವಳಿಕೆ ಉಪಸ್ಥಿತರಿರುವರು. ಬಳಿಕ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, ಭರತನಾಟ್ಯ ನೃತ್ಯ ಪ್ರದರ್ಶನಗಳು ನಡೆಯಲಿದೆ. ರಾತ್ರಿ 8ಕ್ಕೆ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ವಿಶಿಷ್ಟ ರೂಪಕ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries