ದೇವರ ಸ್ತೋತ್ರಗಳು ಕೂಡಾ ಕಾವ್ಯಮಯ - ವಿರಾಜ್ ಅಡೂರು
ಕುಂಬಳೆ : ಧಾಮರ್ಿಕ ಕ್ಷೇತ್ರದ ವಿವಿಧ ದೇವರ ಸ್ತೋತ್ರಗಳು, ಸಹಸ್ರನಾಮಾವಳಿಗಳು, ಭಗವದ್ಗೀತೆಯ ಶ್ಲೋಕಗಳೆಲ್ಲವೂ ಕೂಡಾ ಕವನದ ರೂಪದಲ್ಲಿದೆ. ಆದ್ದರಿಂದ ಕವನಗಳೆಂದರೆ ದೇವರಿಗೂ ಪ್ರೀತಿ. ಧಾಮರ್ಿಕ ಕೇಂದ್ರದ ಉತ್ಸವಗಳಲ್ಲಿ ಭಕ್ತಿಕವಿಗೋಷ್ಠಿ ಸಹಿತ ವಿವಿಧ ಧರ್ಮ ಸಂಬಂಧಿತ ಸಾಹಿತ್ಯ ಕಾರ್ಯಕ್ರಮಗಳು ನಡೆಯಬೇಕು ಎಂದು ಕಾಸರಗೋಡು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿರಾಜ್ ಅಡೂರು ಹೇಳಿದರು.
ಅವರು ಶುಕ್ರವಾರ ಆರಿಕ್ಕಾಡಿ ಕಾಲರ್ೆ ಶ್ರೀಕಾಳಿಕಾಂಬಾ ದೇವಸ್ಥಾನದ ವಾಷರ್ಿಕೋತ್ಸವದಲ್ಲಿ ಕಾಸರಗೋಡಿನ ವಿಶ್ವಕರ್ಮ ಸಾಹಿತ್ಯ ದರ್ಶನ ಸಂಸ್ಥೆಯ ಸಹಯೋಗದಲ್ಲಿ ನಡೆದ ಭಾಷಾ ಬಾವೈಕ್ಯತಾ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿಯ ಕಲ್ಪನಾ ಭಾವಕ್ಕೆ ನಿಲುಕದ ವಸ್ತುವಿಲ್ಲ. ಉದಯೋನ್ಮುಖ ಕವಿಗಳು ಕಥನ ಕವನ, ಶಿಶುಸಾಹಿತ್ಯ, ಚುಟುಕು ಹಾಗೂ ಹನಿಕವನಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶಿಸುವುದು ಸುಲಭ. ಕವನಗಳ ಮಂಡನೆಯಲ್ಲಿ ಸರಳ ನಿರೂಪಣೆ, ಭಾಷೆಯ ಬಿಗಿಪು, ವಿಚಾರದ ಸಮಗ್ರ ತಿಳುವಳಿಕೆ, ಕ್ರಮಾನುಗತವಾದ ಮಂಡನೆ, ಪ್ರಾಸಬದ್ಧತೆ ಅಗತ್ಯ ಎಂದು ಅವರು ಹೇಳಿದರು.
ಕವಿಗೋಷ್ಠಿಯನ್ನು ದಕ್ಷಿಣ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಸರಗೋಡು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಂದ್ರಪ್ರದೇಶದ ಗಿಡಲೂರು ಶ್ರೀಸಾಯಿ ಇಂಟರ್ ನೇಶನಲ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಕಿಶೋರ್ ಕುಮಾರ್ ಭಾಗವಹಿಸಿದ್ದರು. ಬಹುಭಾಷಾ ಕವಿಗೋಷ್ಠಿಯಲ್ಲಿ ಶ್ಯಾಮಲಾ ರವಿರಾಜ್ ಕುಂಬಳೆ(ಕನ್ನಡ, ತುಳು), ಸೋಮಶೇಖರ ಚಿತ್ರದುರ್ಗ, ಶಶಿಕಲಾ ಕುಂಬಳೆ, ನಯನಾ ಆಚಾರ್ಯ, ಸತೀಶ ಆಚಾರ್ಯ ಆನೆಕಲ್ಲು, ದೇವರಾಜ ಆಚಾರ್ಯ, ಕಾಂಚನಾ ಆಚಾರ್ಯ ಕೋಟೆಕ್ಕಾರು(ಕನ್ನಡ), ಚಿತ್ರಲತಾ ಆಚಾರ್ಯ, ಚೇತನಾ ಕುಂಬಳೆ, ಶ್ವೇತಾ ಕಜೆ(ಮಲಯಾಳ), ಸಂಧ್ಯಾ ಪಿ ಅಡಿಂಜೆ(ತುಳು), ಅಕ್ಷಿತಾ ಆಚಾರ್ಯ(ಇಂಗ್ಲೀಷ್), ಮೌನೇಶ್ ಆಚಾರ್ಯ (ಕನ್ನಡ, ತಮಿಳು), ಜಯಲಕ್ಷ್ಮಿ ಆಚಾರ್ಯ ಕೂಡ್ಲು (ಹಿಂದಿ) ಭಾಗವಹಿಸಿದ್ದರು. ಚಿತ್ರಕಲಾ ಆಚಾರ್ಯ ಸ್ವಾಗತಿಸಿ, ದೇವರಾಜ ಆಚಾರ್ಯ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.