HEALTH TIPS

No title

             ಕನ್ನಡ ಯುವ ಬಳಗದ ದಿಟ್ಟ ಹೆಜ್ಜೆ-ಸ್ತುತ್ಯರ್ಹ ಕಲಾಸೇವೆ-ಕುಂಬಳೆ ಸುಂದರ ರಾವ್
   ಮುಳ್ಳೇರಿಯ: ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಯಕ್ಷಗಾನ ಕಲಾ ಪ್ರಕಾರದ ಅಪರಿಮಿತವಾದ ಕೊಡುಗೆಯನ್ನು ಪರಿಗಣಿಸುವ ಅಗತ್ಯ ಇದೆ. ಗಡಿನಾಡು ಕಾಸರಗೋಡಿನ ಸುಧೀರ್ಘ ಪರಂಪರೆಯಲ್ಲಿ ಯಕ್ಷಗಾನದ ಅಮೂಲ್ಯ ಪರಂಪರೆ ಬೆಳೆದುಬಮದಿದ್ದು, ಯುವ ಸಮೂಹ ಇದನ್ನು ಕಾಪಿಡಲು ಮುಂಬರುವಲ್ಲಿ ಪ್ರೋತ್ಸಾಹ, ಮಾರ್ಗದರ್ಶನ ನೀಡಬೇಕು ಎಂದು  ಹಿರಿಯ ತಾಳಮದ್ದಳೆ ಅರ್ಥಧಾರಿ, ಕನರ್ಾಟಕ ಯಕ್ಷಗಾನ, ಬಯಲಾಟ ಅಕಾಡೆಮಿಯ ಪ್ರಥಮಾಧ್ಯಕ್ಷರಾಗಿದ್ದ ಕುಂಬಳೆ ಸುಂದರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಕನ್ನಡ ಯುವ ಬಳಗ ಕಾಸರಗೋಡಿನ ಆಶ್ರಯದಲ್ಲಿ ಆರಂಭಿಸಲಾದ "ಯಕ್ಷ ನುಡಿ ಸರಣಿ ಮನೆಮನೆ ಅಭಿಯಾನ" ಕಾರ್ಯಕ್ರಮಕ್ಕೆ ಶನಿವಾರ ಅಪರಾಹ್ನ ಮಲ್ಲಮೂಲೆಯ ಕೌಸ್ತುಭ ನಿಲಯದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
   ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುವ ಪ್ರಬಲ ಮಾಧ್ಯಮವಾಗಿರುವ ಯಕ್ಷಗಾನ ಮತ್ತು ತಾಳಮದ್ದಳೆಗಳು ಸುದೃಢ ಸಮಾಜ ನಿಮರ್ಾಣದಲ್ಲಿ ಪ್ರಧಾನ ಪಾತ್ರ ವಹಿಸಿವೆ. ಪುರಾಣ ಕಥಾನಕಗಳ ಒಳತಿರುಳನ್ನು ಜನಸಾಮಾನ್ಯರಿಗೆ ಪರಿಚಯಿಸಿ ಜೀವನದ ಸತ್ಪಥಕ್ಕೆ ಮಾರ್ಗದಶರ್ಿಯಾಗುವ ಯಕ್ಷಗಾನ ಪ್ರಕಾರವನ್ನು ಮುನ್ನಡೆಸುವಲ್ಲಿ ಯುವ ಮನಸ್ಸು ಒಂದಾಗಿ ಮುಂದೆಬಂದಿರುವುದು ಭವಿಷ್ಯದ ಉಜ್ವಲತೆಗೆ ಸಾಕ್ಷಿಯಾಗಲಿ ಎಂದು ಅವರು ಈ ಸಂದರ್ಭ ಹಾರೈಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡಿನ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆ ಸಾಗಿಬರುವಲ್ಲಿ ಕೈದೀವಿಗೆಗಳಾದ ಕಲಾ ಪ್ರಕಾರಗಳ ಕೊಡುಗೆಗಳನ್ನು ಎಂದೂ ಮರೆಯಬಾರದು ಎಂದು ತಿಳಿಸಿದರು. ಕಾಸರಗೋಡಿನ ಕನ್ನಡ, ಮಲೆಯಾಳ ಸಹಿತ ಹಲವು ಭಾಷೆಗಳು ಪರಸ್ಪರ ಸಹೋದರ ಭಾಷೆಗಳಾಗಿದ್ದು, ಸಾಂಸ್ಕೃತಿಕ ಕೊಂಡುಕೊಳ್ಳುವಿಕೆ ನಡೆಯಬೇಕು ಎಂದು ತಿಳಿಸಿದರು.
   ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರನ್ನು ದೃಷ್ಟಿಯಲ್ಲಿರಿಸಿ ಗಡಿನಾಡಿಗೆ ಕನ್ನಡ ಅಕಾಡೆಮಿ ಮಂಜೂಋಉಗೊಳಿಸುವ ಬಗ್ಗೆ ಪ್ರಸ್ತುತ ವರ್ಷ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕರು ಈ ಸಂದರ್ಭ ತಿಳಿಸಿದರು.
   ಹಿರಿಯ ಯಕ್ಷಗಾನ ಕಲಾವಿದ ಬೆಳ್ಳಿಗೆ ನಾರಾಯಣ ಮಣಿಯಾಣಿ ದಿಕ್ಸೂಚಿ ಭಾಷಣಗೈದು ಸರಣಿ ತಾಳಮದ್ದಳೆಯ ಯೋಜನೆಯ ಬಗ್ಗೆ ತಿಳಿಸಿದರು. ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕುಂಬ್ಡಾಜೆ ಗ್ರಾಮ ಪಂಚಾಯತು ಸದಸ್ಯ ರವೀಂದ್ರ ರೈ ಗೋಸಾಡ, ಕೇರಳ ಪಾತರ್ಿಸುಬ್ಬ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಹಿರಿಯ ರಂಗಕಮರ್ಿ, ಸಾಹಿತಿ ನ್ಯಾಯವಾದಿ ಥೋಮಸ್ ಡಿಸೋಜ, ನಿವೃತ್ತ ಉಪನೋಂದಾವಣಾಧಿಕಾರಿ ಮೊಹಮ್ಮದಾಲಿ ಪೆರ್ಲ, ಕವಿ ಸುಂದರ ಬಾರಡ್ಕ, ಸವಾಕ್ ಜಿಲ್ಲಾ ಕಾರ್ಯದಶರ್ಿ ಸುಶ್ಮಿತಾ ಆರ್ ಕುಂಬಳೆ, ನಿವೃತ್ತ ಸೈನಿಕ ಕೃಷ್ಣ ಮಣಿಯಾಣಿ ಮಲ್ಲಮೂಲೆ ಉಪಸ್ಥಿತರಿದ್ದು ಮಾತನಾಡಿದರು.
   ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಯುವ ಬಳಗದ ಸಹಸಂಚಾಲಕ ಪ್ರಶಾಂತ್ ಹೊಳ್ಳ ಸ್ವಾಗತಿಸಿ, ಕುಂಬ್ಡಾಜೆ ಗ್ರಾ.ಪಂ. ಸದಸ್ಯೆ ನಳಿನಿ ಕೃಷ್ನನ್ ವಂದಿಸಿದರು. ಕನ್ನಡ ಯುವ ಬಳಗದ ಕಾಯ್ಕರಿ ಸಮಿತಿ ಸದಸ್ಯೆ ಸೌಮ್ಯಾಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
  ಬಳಿಕ ಕನ್ನಡ ಯುವ ಬಳಗದ ಉದಯೋನ್ಮುಖರಿಂದ ಹಿರಿಯ ಕಲಾವಿದ ದಿವಾಣ ಶಿವಶಂಕರ ಭಟ್ ನಿದರ್ೇಶನದಲ್ಲಿ ಕಣರ್ಾಜರ್ುನ ಪ್ರಸಂಗದ ತಾಳಮದ್ದಳೆ ಕೂಟ ನಡೆಯಿತು.
   
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries