ಸರ್ವರಿಗೂ ಒಳಿತು ಬಯಸುವುದು ಭಾರತೀಯತೆ-ವಿಷ್ಣು ಆಸ್ರ
ಬದಿಯಡ್ಕ : ಋಷಿ ಪರಂಪರೆಯು ಭಾರತದ ಜೀವನಾಡಿಯಾಗಿ ಪರಂಪರೆಯನ್ನು ಅರ್ಥವತ್ತಾಗಿ ನಡೆಸಿಕೊಂಡುಬಂದಿದೆ. ಸನಾತನ ಸಂಸ್ಕೃತಿಯಲ್ಲಿ ಆಗಿ ಹೋದ ಎಲ್ಲ ಬೆಳವಣಿಗೆಗೆ ಕಾರಣ ಮುನಿಗಳಾಗಿದ್ದಾರೆ. ಎಷ್ಟೋ ಜ್ಞಾನಪುರುಷರು, ಯುಗ ಪುರುಷರು, ದೇವತಾತ್ಮ ಸ್ವರೂಪಿಗಳು, ಎಲ್ಲರೂ ಕೂಡ ಮುನಿಗಳ ಅನುಗ್ರಹದಿಂದ ಬೆಳೆದವರು. ಮುನಿಗಳು ಎಂದರೆ ಜ್ಞಾನಿಗಳು. ಅಂತಹ ಮುನಿಯೂರಿನಲ್ಲಿ ನೆಲೆಸಿದ ಭಗವಂತನ ಅನುಗ್ರಹಕ್ಕೆ ನಾವು ಪ್ರಾಪ್ತರಾಗೋಣ ಎಂದು ತಂತ್ರಿವರ್ಯ ಬ್ರಹ್ಮಶ್ರೀ ವೇದಮೂತರ್ಿ ವಿಷ್ಣು ಆಸ್ರ ಉಳಿಯ ಹೇಳಿದರು.
ಅವರು ಗುರುವಾರ ಸಂಜೆ ಮುನಿಯೂರು ಬೊಳ್ಳೂರು ಶ್ರೀ ಸದಾಶಿವ ಕ್ಷೇತ್ರದ ಬ್ರಹ್ಮಕಲಶೋತ್ಸವದ ಧಾಮರ್ಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಭಗವಂತನ ಸೇವೆಯನ್ನು ಮಾಡಿ ಪಡೆದಂತಹ ಭಗವದನುಗ್ರಹವನ್ನು ಸಮಾಜಕ್ಕೆ ವಿನಿಯೋಗಿಸಿದವರು ಮುನಿಗಳು. ಅವರ ಬದುಕಿಗೆ ಪೂರಕವಾದಂತಹ ಇಂತಹ ಪ್ರದೇಶಕ್ಕೆ ಅದ್ಭುತ ಶಕ್ತಿಯಿದೆ. ಪವಿತ್ರವಾದ ಪ್ರಕೃತಿ ರಮಣೀಯವಾದ ಸ್ಥಳವಿದಾಗಿದೆ. ಮನುಷ್ಯನಿಗೆ ನೆಮ್ಮದಿ ದೊರಕಬೇಕಾದರೆ ಪ್ರಕೃತಿ ಒಲಿಯಬೇಕು. ದೇವರು ಏನನ್ನೂ ಬಯಸುವುದಿಲ್ಲ. ಎಲ್ಲವನ್ನೂ ದೇವರಿಗೆ ಅಪರ್ಿಸಿದಾಗ ದೇವರು ಎಲ್ಲವನ್ನು ನಮಗೆ ಕೊಡುತ್ತಾನೆ. ಲೋಕವೇ ಉದ್ಧರಿಸಲ್ಪಡಲಿ ಎಂದು ಬಯಸಿದ ಸಂಸ್ಕೃತಿ ಭಾರತೀಯರದ್ದಾಗಿದೆ ಎಂದು ಅವರು ತಿಳಿಸಿದರು.
ಮಲ್ಲ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ದೀಪ ಬೆಳಗಿಸಿ ಧಾಮರ್ಿಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ದೇವಸ್ಥಾನಗಳು ಗತವೈಭವವನ್ನು ಮರಳಿ ಪಡೆಯುವುದರಿಂದ ಭಾರತೀಯ ಸಂಸ್ಕೃತಿ ಪ್ರಜ್ವಲಿಸುತ್ತದೆ. ದೇವಸ್ಥಾನದ ಜೀಣರ್ೋದ್ಧಾರಗಳಿಂದ ಊರಿನಲ್ಲಿ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಗೋಪಾಲಕೃಷ್ಣ ನಡ್ವಂತಿಲ್ಲಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದಶರ್ಿ ಎಂ. ಶ್ರೀನಿವಾಸ ನಡ್ವಂತಿಲ್ಲಾಯ ಸ್ವಾಗತಿಸಿ, ರಕ್ಷಾಧಿಕಾರಿ ಬಾಲಕೃಷ್ಣ ಶೆಟ್ಟಿ ಧನ್ಯವಾದವನ್ನಿತ್ತರು. ಪ್ರಚಾರ ಸಮಿತಿ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ನಿರೂಪಣೆಗೈದರು.