ಬದಿಯಡ್ಕ ಮಂಡಲ ಕಾಂಗ್ರೆಸ್ಸ್ ಸಮಿತಿ ಅನೂಜರ್ಿತ-ಲೀಗ್ಗೆ ವಿವಾದವಿಲ್ಲ
ಬದಿಯಡ್ಕ: ಬದಿಯಡ್ಕದಲ್ಲಿ ಶುಕ್ರವಾರ ನಡೆದ ಹಿಂದೂ ಸಮಾಜೋತ್ಸವದ ಅಧ್ಯಕ್ಷ ಸ್ಥಾನ ವಹಿಸಿದ್ದ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರೂ, ಕಾಂಗ್ರಸ್ಸ್ ಮುಖಂಡರೂ ಆಗಿರುವ ಕೆ.ಎನ್ ಕೃಷ್ಣ ಭಟ್ ರವರ ಬಗ್ಗೆ ಹುಟ್ಟಿಕೊಂಡ ವಿವಾದ ತೀವ್ರ ಸ್ವರೂಪ ಪಡೆದಿದ್ದು, ಬದಿಯಡ್ಕ ಮಂಡಲ ಕಾಂಗ್ರೆಸ್ಸ್ ಸಮಿತಿಯನ್ನು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ ಅನೂಜರ್ಿತಗೊಳಿಸುವ ಆದೇಶ ಹೊರಡಿಸಿದೆ. ಜೊತೆಗೆ ಮುಂದಿನ ಆದೇಶ ಬರುವಲ್ಲಿ ವರೆಗೆ ಬದಿಯಡ್ಕ ಮಂಡಲದ ಜವಾಬ್ದಾರಿಯನ್ನು ಕಾರಡ್ಕ ವಿಭಾಗಕ್ಕೆ ಪಕ್ಷ ವಹಿಸಿದೆ.
ಈ ಬಗ್ಗೆ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ ನೋಟೀಸ್ ಪ್ರಕಟಿಸಿದೆ. ಆದರೆ ಬದಿಯಡ್ಕದಲ್ಲಿ ಮುಸ್ಲಿಂಲೀಗ್ ಸಖ್ಯದೊಂದಿಗೆ ಕೆ ಎನ್ ಕೃಷ್ಣ ಭಟ್ ಅಧ್ಯಕ್ಷರಾಗಿ ಮುಂದುವರಿಯುವಲ್ಲಿ ಮುಸ್ಲಿಂಲೀಗ್ ಯಾವುದೇ ಅಪಸ್ವರ ಎತ್ತದು ಎಂದು ಮುಸ್ಲಿಂಲೀಗ್ ಸಮರಸ ಸುದ್ದಿಗೆ ತಿಳಿಸಿದೆ.
ಏನಂತಾರೆ ಮುಸ್ಲಿಂಲೀಗ್ ಮುಖಂಡರು:
ಹಿಂದೂ ಸಮಾಜೋತ್ಸವವು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಉತ್ಸವವಾಗಿದ್ದು, ಅದರ ಅಧ್ಯಕ್ಷತೆ ವಹಿಸಿದ ಕೆ ಎನ್ ಕೃಷ್ಣ ಭಟ್ ರವರ ನಿಲುಮೆಯ ಬಗ್ಗೆ ಯಾವುದೇ ಅಸಂತೋಷ ಮುಸ್ಲಿಂ ಲೀಗ್ ಗೆ ಇಲ್ಲ. ಬದಿಯಡ್ಕ ಗ್ರಾ.ಪಂ. ನಲ್ಲಿ ಕಾಂಗ್ರೆಸ್ಸ್ ಪಕ್ಷಕ್ಕೆ ಬೆಂಬಲ ಸೂಚಿಸಿ, ಕೃಷ್ಣ ಭಟ್ ಅಧ್ಯಕ್ಷರಾಗಿ ಮುಂದುವರಿಯುವಲ್ಲಿ ಲೀಗ್ ಗೆ ಯಾವುದೇ ವಿವಾದ ಇಲ್ಲ. ಗುರುವಾರ ಕೃಷ್ಣ ಭಟ್ ರವರಿಗೆ ನೀಡಲಾಯಿತೆಂಬ ಬೆದರಿಕೆ ಲೀಗ್ ನ ಸಾಮಾನ್ಯ ಕಾರ್ಯಕರ್ತನ ಆಕ್ರೋಶ ಮಾತ್ರ ಆಗಿದೆ. ಲೀಗ್ ಆ ಬಗ್ಗೆ ವಿಶಾದಿಸುತತ್ತದೆ.
ಮಾಹಿನ್ ಕೇಳೋಟ್
ಮುಸ್ಲಿಂಲೀಗ್ ಮುಖಂಡ.