ಇಂದು ಜಿಲ್ಲೆಗೆ ಉಪರಾಷ್ಟ್ರಪತಿ
ಕಾಸರಗೋಡು: ಪೆರಿಯದಲ್ಲಿ ಕಾಯರ್ಾಚರಿಸುತ್ತಿರುವ ಕೇಂದ್ರೀಯ ವಿಶ್ವ ವಿದ್ಯಾಲಯ ಕೇರಳ (ಸಿಯುಕೆ)ಕ್ಯಾಂಪಸ್ನ ಅಕಾಡಮಿಕ್ ಸಮುಚ್ಛಯದ ಹೊಸ ಬ್ಲಾಕ್ಗಳ ಉದ್ಘಾಟನೆಯನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಇಂದು(ಏಪ್ರಿಲ್ 29ರಂದು) ನೆರವೇರಿಸಲಿದ್ದಾರೆ. ಉಪರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಬಿಗು ಭದ್ರತೆ ಕಲ್ಪಿಸಲಾಗಿದೆ. ಪ್ರತ್ಯೇಕ ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಕ್ಯಾಂಪಸ್ನೊಳಗೆ ಪ್ರವೇಶ ಲಭಿಸಲಿದ್ದು, ಬೆಳಗ್ಗೆ 10ಕ್ಕೆ ಮುಂಚಿತವಾಗಿ ಕ್ಯಾಂಪಸ್ನೊಳಗೆ ತಲುಪುವಂತೆ ಸೂಚಿಸಲಾಗಿದೆ.
ಬೆಳಗ್ಗೆ 10.20ಕ್ಕೆ ಮಂಗಳೂರು ವಿಮಾನ ನಿಲಾಣ ತಲುಪುವ ಉಪರಾಷ್ಟ್ರಪತಿ, ಹೆಲಿಕಾಪ್ಟರ್ ಮೂಲಕ ಪೆರಿಯದ ಕೇಂದ್ರೀಯ ವಿಶ್ವ ವಿದ್ಯಾಲಯ ಕೇರಳ ಕ್ಯಾಂಪಸ್ನ ಹೆಲಿಪ್ಯಾಡ್ನಲ್ಲಿ ಬಂದಿಳಿಯಲಿದ್ದಾರೆ. 11ಕ್ಕೆ ಪೆರಿಯದಲ್ಲಿ ವಿಶ್ವ ವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸುವರು. ಮಧ್ಯಾಹ್ನ 12.30ಕ್ಕೆ ಉಪರಾಷ್ಟ್ರಪತಿ ಮಂಗಳೂರಿಗೆ ವಾಪಸಾಗುವರು.
2015ರ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಈ ಎಂಟು ಬ್ಲಾಕ್ಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ 231 ಕೋಟಿ ರೂ. ವೆಚ್ಚದಲ್ಲಿ ಈ ಬ್ಲಾಕ್ಗಳನ್ನು ನಿಮರ್ಿಸಲಾಗಿದೆ. ಪ್ರಸ್ತುತ ಸಮಾರಂಭದಲ್ಲಿ ಕೇರಳ ಬಂದರು ಖಾತೆ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಾಂಸದ ಪಿ.ಕರುಣಾಕರನ್, ಯು.ಜಿ.ಸಿ. ಸದಸ್ಯ ಯು.ಗೋಪಾಲ ರೆಡ್ಡಿ, ಜಿಲ್ಲೆಯ ಶಾಸಕರು ಮತ್ತಿತರರು ಉಪಸ್ಥಿತರಿರುವರು.
ಇದುವರೆಗೆ ವಿದ್ಯಾನಗರ, ಪಡನ್ನಕ್ಕಾಡು ಮತ್ತು ಕುಣಿಯದಲ್ಲಿರುವ ತಾತ್ಕಾಲಿಕ ಕ್ಯಾಂಪಸ್ಗಳಲ್ಲಿ ಕಾಯರ್ಾಚರಿಸುತ್ತಿದ್ದ ಎಲ್ಲಾ ಕ್ಯಾಂಪಸ್ಗಳು ಇನ್ನು ಮುಂದೆ ಪೆರಿಯದ ಹೊಸ ಅಕಾಡೆಮಿಕ್ ಬ್ಲಾಕ್ ಕಟ್ಟಡಗಳಲ್ಲಿ ಕಾಯರ್ಾಚರಿಸಲಿವೆ. 22 ಸಂಶೋಧನಾ ಇಲಾಖೆಗಳ ಸಹಿತ 23 ಅಧ್ಯಯನ ವಿಭಾಗಗಳು ಈ ವಿಶ್ವವಿದ್ಯಾನಿಲಯದಲ್ಲಿ ಈಗ ಕಾರ್ಯವೆಸಗುತ್ತಿದೆ. 17 ರಾಜ್ಯಗಳ 1400ಕ್ಕಿಂತಲೂ ಅಧಿಕ ಮಂದಿ ವಿದ್ಯಾಥರ್ಿಗಳು ಇಲ್ಲಿ ಅಧ್ಯಯನ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಇದಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಗುಣಮಟ್ಟ ಹೊಂದಿದ 121 ಮಂದಿ ಅಧ್ಯಾಪಕರು ಇಲ್ಲಿ ಕಾರ್ಯವೆಸಗುತ್ತಿದ್ದಾರೆ.
2014ನೇ ಆಗಸ್ಟ್ ತಿಂಗಳಲ್ಲಿ ಉಪಕುಲಪತಿಗಳಾಗಿ ಸ್ಥಾನ ವಹಿಸಿದ ಪ್ರೊ.ಡಾ.ಜಿ.ಗೋಪಕುಮಾರ್ ಅವರ ನೇತೃತ್ವದಲ್ಲಿ ಈ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಅಭಿವೃದ್ಧಿ ಕೆಲಸಕಾರ್ಯಗಳು ನಡೆದಿವೆ. 750 ಮಂದಿ ವಿದ್ಯಾಥರ್ಿಗಳಿಗೆ ವಾಸಿಸಿ ಅಧ್ಯಯನ ನಡೆಸುವ ಹಾಸ್ಟೆಲ್ ಸೌಲಭ್ಯವನ್ನು ಈಗಾಗಲೇ ಈ ಕ್ಯಾಂಪಸ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ನೂರು ವಿದ್ಯಾಥರ್ಿಗಳ ಹಾಸ್ಟೆಲ್ ನಿಮರ್ಾಣವು ಈಗ ಕಾಮಗಾರಿ ಹಂತದಲ್ಲಿದೆ. ಜೊತೆಗೆ ಅತ್ಯುತ್ತಮ ಸೌಕರ್ಯಗಳಿರುವ ಅತಿಥಿ ಗೃಹಗಳು, 72 ಕೋಟಿ ರೂ. ಗಳ ಅಡ್ಮಿನಿಸ್ಟ್ರೇಷನ್ ಬ್ಲಾಕ್, 22 ಕೋಟಿ ರೂ. ಗಳ ಸೆಂಟ್ರಲ್ ಲೈಬ್ರೆರಿಯ ನಿಮರ್ಾಣ ಯೋಜನೆಯು ಶೀಘ್ರದಲ್ಲೇ ಕಾರ್ಯಗತಗೊಳ್ಳಲಿದೆ.
ಯೋಗ, ಸ್ಕೂಲ್ ಆಫ್ ಎಜ್ಯುಕೇಶನ್ ಎಂಬೀ ಇಲಾಖೆಗಳಿಗೆ ಆವಶ್ಯಕವಾದ ಕಟ್ಟಡಗಳು, ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿಗಳ ಕ್ವಾರ್ಟಸರ್್ಗಳು, ಸ್ಟಾಟ್ಯೂಟರಿ ಆಫೀಸರ್ಗಳ ಔದ್ಯೋಗಿಕ ವಸತಿಗಳು, ಕೇಂದ್ರೀಯ ವಿದ್ಯಾಲಯ ಹೀಗೆ 17 ಬ್ಲಾಕ್ಗಳ ನಿಮರ್ಾಣವು 2022ರೊಳಗೆ ಪೂತರ್ಿಯಾಗಲಿದೆ. ಇದಕ್ಕಿರುವ ಅವಿರತ ಯತ್ನದಲ್ಲಿ ಉಪಕುಲಪತಿ ಪ್ರೊ.ಡಾ.ಜಿ.ಗೋಪಕುಮಾರ್ ಮತ್ತು ರಿಜಿಸ್ಟ್ರಾರ್ ಡಾ.ಎ.ರಾಧಾಕೃಷ್ಣನ್ ನಾಯರ್ ನೇತೃತ್ವ ನೀಡುವ ಅಕಾಡೆಮಿಕ್ ತಂಡ ತಲ್ಲೀನವಾಗಿದೆ.
ಉಪರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ಕಾರ್ಯಗಳಿಗೆ ಕಣ್ಣೂರು ವಲಯ ಐ.ಜಿ ಬಲರಾಂ ಉಪಾಧ್ಯಾಯ ಅವರಿಗೆ ಹೊಣೆ ವಹಿಸಿಕೊಡಲಾಗಿದೆ.