HEALTH TIPS

No title

                    ಜಾತ್ರೆಗಳು ಊರಿನ ಉತ್ಸವಗಳಾಗಬೇಕು - ಕತ್ತಲ್ಸಾರ್
     ಮುಳ್ಳೇರಿಯ: ಜಾತ್ರೋತ್ಸವವೇ ಮೊದಲಾದ ಧಾಮರ್ಿಕ ಕಾರ್ಯಕ್ರಮಗಳಲ್ಲಿ ಧರ್ಮ ಬೋಧನೆಯ ಪ್ರಯತ್ನ ನಡೆಯಬೇಕು, ನಮ್ಮೂರಿನ ಜಾತ್ರೆಗಳು ಊರಿನ ಉತ್ಸವಗಳಾಗಬೇಕು ಎಂದು ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾ ವಿಭಾಗ್ ಪ್ರಮುಖ್ ದಯಾನಂದಜಿ ಕತ್ತಲ್ಸಾರ್ ಹೇಳಿದರು.
 ಅವರು ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ದೇವಾಲಯದ ಜಾತ್ರೋತ್ಸವದ ಅಂಗವಾಗಿ ನಡೆದ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಧಾಮರ್ಿಕ ಭಾಷಣ ಮಾಡಿದರು. ಮಕ್ಕಳಿಗೆ ಉತ್ತಮ ಸಂಸ್ಕಾರದ ಬೋಧನೆಯನ್ನು ನೀಡಿ ಬೆಳೆಸುವ ಜವಾಬ್ದಾರಿ ತಾಯಂದಿರಿಗಿದೆ. ಪ್ರಕೃತಿಯ ಉಳಿವಿಗಾಗಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಧಾಮರ್ಿಕ ಸಭೆಯಲ್ಲಿ ಶ್ರೀಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡಿದರು.
 ರಾಜೇಂದ್ರ.ಕೆ ಸ್ಟೇಟ್ ಟ್ಯಾಕ್ಸ್ ಆಫೀಸರ್ ಜಿಎಸ್ಟಿ ಕಾಸರಗೋಡು,  ಕಿಶೋರ್ಕೃಷ್ಣ.ಕೆ.ಯು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಗೀತ ವಿದುಷಿ ಶಕುಂತಳಾ ಭಟ್ ಕುಂಚಿನಡ್ಕ, 5ನೇ ತಲೆಮಾರಿನ ಮಹಿಳೆ ದೇವಕಿ ಹುಣಸೆ ಅಡ್ಕ, ಶತಾಯುಷಿ ಲಕ್ಷ್ಮಿ ಮಾಯಿಲಂಕೋಟೆ ಇವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾಥರ್ಿನಿ ಅನುಶ್ರೀ.ಪಿ ಅವರನ್ನು ಅಭಿನಂದಿಸಲಾಯಿತು. ಕುಂಟಾರು ಎಯುಪಿ ಶಾಲೆಯ 7ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾಥರ್ಿನಿ ಸುಪ್ರಿಯಾ.ವಿ.ಎಸ್ ಇವರನ್ನು ಯುಕೆಕೆ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.
 ಬ್ರಹ್ಮಶ್ರೀ ರವೀಶ ತಂತ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ದಾಮೋದರ.ಎಂ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಮಾಸ್ತರ್ ವಂದಿಸಿದರು.
 ಜಾತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀದೇವರ ಭೂತಬಲಿ ಉತ್ಸವ, ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ರಂಗಪೂಜೆ,  ಉಯಿತ್ತಡ್ಕ ಶ್ರೀ ಮೂಕಾಂಬಿಕಾ ಭಜನಾ ಸಂಘ, ಕುಂಟಾರು ಶ್ರೀ ಅಯ್ಯಪ್ಪ ಭಜನಾ ಸಂಘ, ಕುಂಟಾರು ಮಿತ್ರವೃಂದ, ಪೆರದಡಿ ರಾಣಿಪುರಂ ಶ್ರೀ ಮಹಾದೇವ ಭಜನಾ ಸಂಘ ಮತ್ತು ಕುಂಟಾರು ಶ್ರೀ ಶಾರದಾ ಸಂಗೀತ ಕಲಾ ಶಾಲೆಯವರಿಂದ ಭಜನಾಮೃತ, ಆಟರ್್ ಓಫ್ ಲಿವಿಂಗ್ನ ಸ್ವಾಮಿ ಸೂರ್ಯಪಾದ ಬೆಂಗಳೂರು ಇವರಿಂದ ಸತ್ಸಂಗ, ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ನಂದಗೋಕುಲ ಕಲಾವಿದರಿಂದ ಗಾನ- ನೃತ್ಯ ವೈಭವ, ನಾಟ್ಯ ನಿಲಯಂ ಬಾಲಕೃಷ್ಣ ಮಂಜೇಶ್ವರ  ಇವರ ಶಿಷ್ಯೆ ಸ್ವಾತಿಲಕ್ಷ್ಮಿ ಪಿಲಿಕೂಡ್ಲು ಮತ್ತು ಬಳಗದವರಿಂದ ನೃತ್ಯ ಸಂಗಮ, ಶಕುಂತಳಾ ಭಟ್ ಕುಂಚಿನಡ್ಕ ಇವರಿಂದ ಸಂಗೀತ ಕಾರ್ಯಕ್ರಮ, ಶ್ರೀ ದುಗರ್ಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕೊಲ್ಲಂಗಾನ ಇವರಿಂದ ಯಕ್ಷಗಾನ ಬಯಲಾಟ ಬಪ್ಪನಾಡು ಕ್ಷೇತ್ರ ಮಹಾತ್ಮೆ ಮತ್ತು ಕುಂಟಾರು ಚಾಮುಂಡಿ ದೈವದ ನೇಮ, ಪಡೈ ಚಾಮುಂಡಿ ದೈವದ ನೇಮ ನಡೆಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries