HEALTH TIPS

No title

                    ಪಿ.ಎಸ್.ಸಿ : ಅಜರ್ಿ ಸಲ್ಲಿಸಿ ಪರೀಕ್ಷೆ  ಬರೆಯದಿದ್ದರೆ ಕಠಿಣ ಕ್ರಮ
     ಕಾಸರಗೋಡು: ಇನ್ನು  ಮುಂದೆ ಕೇರಳ ಲೋಕ ಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಎಲ್ಲಾ  ರೀತಿಯ ಸ್ಪಧರ್ಾತ್ಮಕ ಪರೀಕ್ಷೆಗಳನ್ನು  ಬರೆಯುವ ಬಗ್ಗೆ  ಉದ್ಯೋಗಾಥರ್ಿಗಳು ಖಾತರಿ ನೀಡಬೇಕು. ಹಾಗಿದ್ದಲ್ಲಿ  ಮಾತ್ರ ಪರೀಕ್ಷಾ  ಕೇಂದ್ರಗಳನ್ನು  ಒದಗಿಸುವ ಹೊಸ ವ್ಯವಸ್ಥೆಯನ್ನು  ಆಗಸ್ಟ್  15ರಿಂದ ಜಾರಿಗೆ ಬರುವಂತೆ ಸಿದ್ಧಪಡಿಸಲಾಗುತ್ತಿದೆ. ಪರೀಕ್ಷೆಗೆ ಹಾಜರಾಗದಿದ್ದರೆ ಸೂಕ್ತ  ಕಠಿಣ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸಲಾಗಿದೆ.
   ಕೆಪಿಎಸ್ಸಿ ಸಂಸ್ಥೆಯು ಆನ್ಲೈನ್ ಮೂಲಕ ಉಚಿತವಾಗಿ ಅಜರ್ಿ ಸ್ವೀಕರಿಸುತ್ತಿದೆ. ಆನ್ಲೈನ್ ಮೂಲಕ ಅಜರ್ಿ ಸಲ್ಲಿಸುವ ಉದ್ಯೋಗಾಥರ್ಿಗಳ ಪೈಕಿ ಹೆಚ್ಚಿನವರು ಪರೀಕ್ಷೆಗೆ ಹಾಜರಾಗುವುದೇ ಇಲ್ಲ. ಇದರಿಂದಾಗಿ ಕೆಪಿಎಸ್ಸಿಗೆ ಆಥರ್ಿಕ ನಷ್ಟ  ಸಂಭವಿಸುತ್ತಿರುವುದನ್ನು  ಮನಗಂಡು ನೂತನ ಪರಿಷ್ಕರಣೆಯನ್ನು  ಮಾಡಲಾಗುತ್ತಿದೆ.
   ಸ್ಪಧರ್ಾತ್ಮಕ ಪರೀಕ್ಷೆ  ಬರೆಯುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ  ಅಜರ್ಿ ಸಲ್ಲಿಸಲಾಗುತ್ತದೆ. ಆದರೆ ಪರೀಕ್ಷೆ  ಬರೆಯುವ ಸಂದರ್ಭಗಳಲ್ಲಿ  ಅರ್ಧದಷ್ಟು  ಉದ್ಯೋಗಾಥರ್ಿಗಳು ಹಾಜರಾಗುವುದಿಲ್ಲ. ಅಜರ್ಿ ಅನುಸಾರವಾಗಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಆಯೋಗವು ಪ್ರಶ್ನೆಪತ್ರಿಕೆ, ಪರೀಕ್ಷಾ ಕೇಂದ್ರ,  ಮೇಲ್ವಿಚಾರಕರನ್ನು  ನೇಮಿಸುತ್ತದೆ. ಆದರೆ ಉದ್ಯೋಗಾಥರ್ಿಗಳು ಪರೀಕ್ಷೆಗೆ ಹಾಜರಾಗದಿದ್ದರೆ ಅಪಾರ ನಷ್ಟ  ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ  ಹೊಸ ಪರಿಷ್ಕರಣೆಗೆ ಮುಂದಾಗಿದೆ.
   ಸ್ಪಧರ್ಾತ್ಮಕ ಪರೀಕ್ಷೆಯ 70 ದಿನಗಳ ಮೊದಲು ಪರೀಕ್ಷಾ  ದಿನಾಂಕವನ್ನು  ವೆಬ್ಸೈಟ್ನಲ್ಲಿ  ಪ್ರಕಟಿಸಲಾಗುವುದು. 60ರಿಂದ 40 ದಿನಗಳ ತನಕ ಇರುವಾಗ ಉದ್ಯೋಗಾಥರ್ಿ ಪರೀಕ್ಷೆ  ಬರೆಯುವ ಬಗ್ಗೆ  ಖಾತರಿ ನೀಡಬೇಕು. ಈ ಎಲ್ಲಾ  ದಿನಾಂಕಗಳನ್ನು  ವೆಬ್ಸೈಟ್ನಲ್ಲಿ  ಪ್ರಕಟಿಸಲಾಗುವುದು. ಉದ್ಯೋಗಾಥರ್ಿಗೆ ಒನ್ ಟೈಂ ಪ್ರೊಫೈಲ್, ಮೊಬೈಲ್ ಸಂದೇಶ ಮೂಲಕ ಪರೀಕ್ಷಾ  ದಿನಾಂಕವನ್ನು  ತಿಳಿಸಲಾಗುವುದು. ಈ ಸಂದೇಶದ ಮೂಲಕ ಪರೀಕ್ಷಾ ದಿನಾಂಕ, ಸಮಯವನ್ನು  ತಿಳಿದುಕೊಳ್ಳಬಹುದು.
   ಬಳಿಕ ಪರೀಕ್ಷೆ  ಬರೆಯುವ ಬಗ್ಗೆ  ಭರವಸೆ ನೀಡುವುದಲ್ಲದೆ, ಅಡ್ಮಿಶನ್ ಟಿಕೆಟ್ ಜನರೇಟ್ ಮಾಡುವ ಸೌಲಭ್ಯವನ್ನು  ಏರ್ಪಡಿಸಲಾಗುವುದು. ನಿಗದಿತ ದಿನಾಂಕದೊಳಗೆ ಖಾತರಿ ನೀಡಿದರೆ ಮಾತ್ರ ಅಡ್ಮಿಶನ್ ಟಿಕೆಟ್ ಲಭ್ಯವಾಗುವುದಿಲ್ಲ. 
   ಪರೀಕ್ಷೆ  ಬರೆಯುವ ಭರವಸೆ ನೀಡಿ ನಂತರ ಪರೀಕ್ಷೆ  ಬರೆಯದಿದ್ದಲ್ಲಿ  ಸೂಕ್ತ  ಕ್ರಮ ತೆಗೆದುಕೊಳ್ಳುವ ಕುರಿತು ಆಯೋಗವು ಚಿಂತನೆ ನಡೆಸಿದೆ. ಆದರೆ ಯಾವ ರೀತಿಯ ಶಿಕ್ಷೆ  ಎಂಬುದರ ಕುರಿತು ಇನ್ನೂ  ವಿಮಶರ್ೆ ನಡೆದಿಲ್ಲ. ಈ ನಿಟ್ಟಿನಲ್ಲಿ  ಪ್ರಾಥಮಿಕ ಹಂತದ ಕಾರ್ಯಯೋಜನೆಗಳನ್ನು  ತಯಾರಿಸಲಾಗಿದ್ದು, ಮುಂದಿನ ಹಂತದ ಕುರಿತು ಸಮಾಲೋಚನೆ ನಡೆಯುತ್ತಿದೆ.
   ಬೇಕಾಬಿಟ್ಟಿ  ಅಜರ್ಿ ಸಲ್ಲಿಕೆಗೆ ಬಂದ್ : ಅಜರ್ಿ ಸಲ್ಲಿಸಿ ಬಳಿಕ ಪರೀಕ್ಷೆ  ಬರೆಯದವರಿಗಾಗಿ ದಂಡ ವಿಧಿಸಬೇಕೆಂದು ಈ ಮೊದಲು ಕೇರಳ ಲೋಕ ಸೇವಾ ಆಯೋಗವು ಕಾರ್ಯಯೋಜನೆ ಸಿದ್ಧಪಡಿಸಿತ್ತು. ಆದರೆ ರಾಜ್ಯ ಸರಕಾರವು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ನಿಧರ್ಾರವನ್ನು  ಕೈಬಿಡಲಾಯಿತು. ಅದರ ಬದಲು ಇದೀಗ ಹೊಸ ಪರಿಷ್ಕರಣೆಯನ್ನು  ತರುವ ಬಗ್ಗೆ  ಚಿಂತನೆ ನಡೆಸಲಾಗಿದೆ. ಈ ತೀಮರ್ಾನ ಜಾರಿಯಾದರೆ ಅಜರ್ಿ ಸಲ್ಲಿಸಿದವರೆಲ್ಲಾ  ಪರೀಕ್ಷೆ  ಬರೆಯುವಂತಾಗಬಹುದು ಅಥವಾ ಬೇಕಾಬಿಟ್ಟಿ  ಅಜರ್ಿ ಸಲ್ಲಿಸುವ ಪ್ರಮಾಣ ಕಡಿಮೆಯಾಗಬಹುದು ಎಂಬುದು ಕೆಪಿಎಸ್ಸಿಯ ಲೆಕ್ಕಾಚಾರವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries