HEALTH TIPS

No title

                  ಕನ್ನಡ ಯುವಬಳಗ ಸಭೆ
     ಕಾಸರಗೋಡು:  ಕನ್ನಡ ಯುವಬಳಗದ ಮುಂದಿನ ಕಾರ್ಯಚಟುವಟಿಕೆಗಳನ್ನು  ಸಕ್ರಿಯವಾಗಿ ನಡೆಸುವುದರ ಅಂಗವಾಗಿ  ವಿದ್ಯಾನಗರ ಚಾಲದ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ಶುಕ್ರವಾರ ಸಭೆ ನಡೆಯಿತು.
   ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆ ಹಾಗೂ ಗೌರವ ಸಲಹೆಗಾರ ಡಾ. ರಾಜೇಶ್ ಬೆಜ್ಜಂಗಳ ಮಾತನಾಡಿ, ಯುವಬಳಗದ ನೋಂದಣಿಯನ್ನು ಶೀಘ್ರ ನಡೆಸುವ ಕುರಿತು ಹಾಗೂ  ಮೇ ತಿಂಗಳೊಳಗೆ ಸದಸ್ಯತನ ಅಭಿಯಾನವನ್ನು  ಪೂತರ್ಿಗೊಳಿಸುವ ಅನಿವಾರ್ಯತೆಯ ಕುರಿತು ತಿಳಿಸಿದರು. ಭಾರತೀಯ ಭಾಷಾ ಅಧ್ಯಯ ಕೇಂದ್ರದಿಂದ ನಡೆಯಲಿರುವ ನೆಟ್ ಕೋಚಿಂಗ್ ತರಗತಿಗೆ ಬಳಗದ ಸಹಕಾರ ಮತ್ತು ಬಳಗದ ಸದಸ್ಯರಾಗಿರುವ ವಿಜ್ಞಾನ ಹಾಗೂ ಮಾನವಿಕ ವಿಷಯಗಳ  ಸಂಪನ್ಮೂಲ ವ್ಯಕ್ತಿಗಳನ್ನು  ಪಾಲ್ಗೊಳ್ಳಿಸುವ ಕುರಿತು  ಸಭೆಯಲ್ಲಿ ಚಚರ್ಿಸಲಾಯಿತು. ಬಳಗದ ನೇತೃತ್ವದಲ್ಲಿ ಲೋಕಸೇವಾ ಆಯೋಗದ(ಪಿಎಸ್ಸಿ) ಕೋಚಿಂಗ್ ನಡೆಸುವ ಬಗ್ಗೆ ಹಾಗೂ ಅದಕ್ಕೆ ಭಾರತೀಯ ಭಾಷಾ ಅಧ್ಯಯ ಕೇಂದ್ರದ ಸಹಕಾರ ಸದುಪಯೋಗಪಡಿಸುವ ಕುರಿತು ಸಭೆಯಲ್ಲಿ ಚಚರ್ಿಸಲಾಯಿತು.
   ಕನ್ನಡ ವಿದ್ಯಾಥರ್ಿಗಳ ಶೈಕ್ಷಣಿಕ ಹಾಗೂ ಔದ್ಯೋಗಿಕ ಅವಕಾಶಗಳಿಗೆ ಕೇಂದ್ರ  ಸದಾ ಯುವಬಳಗದ ಜತೆ ಸಹಕರಿಸುವುದಾಗಿ  ಕೇಂದ್ರದ ನಿದರ್ೆಶಕ ಡಾ. ರಾಜೇಶ್ ಬೆಜ್ಜಂಗಳ ಹೇಳಿದರು.
   ಬಳಗದ ಅಧ್ಯಕ್ಷ ರಕ್ಷಿತ್, ಉಪಾಧ್ಯಕ್ಷ  ಪ್ರಶಾಂತ್ ಹೊಳ್ಳ, ಜೊತೆ ಕಾರ್ಯದಶರ್ಿಗಳಾದ ಸೌಮ್ಯ ಪ್ರಸಾದ್, ರಶೀದ್ ಉಪ್ಪಳ, ಬಳಗದ ಸದಸ್ಯರಾದ ಪ್ರದೀಪ್ ಕುಮಾರ್, ಸುಜಿತ್ ಕುಮಾರ್, ಕೀರ್ತನ್ ಕುಮಾರ್ ಸಿ. ಎಚ್.,  ಅಜಿತ್ ಶೆಟ್ಟಿ, ಸೌಮ್ಯ ಕೊಲ್ಲಂಗಾನ, ಸಂಧ್ಯಾ, ಫಾತಿಮತ್ ಫಾಹಿದಾ, ಮೀನಾಕ್ಷಿ ಬೊಡ್ಡೋಡಿ, ಪಿಎಚ್ಡಿ ವಿದ್ಯಾಥರ್ಿಗಳಾದ ರವಿಶಂಕರ ಜಿ. ಕೆ., ಸವಿತ  ಬೇವಿಂಜೆ, ಭರತನಾಟ್ಯ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಮತ್ತಿತರರು ಉಪಸ್ಥಿತರಿದ್ದರು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries