ಬದಿಯಡ್ಕದಲ್ಲಿ ಪಂಚಾಯತ್ ರಾಜ್ ದಿನಾಚರಣೆ
ಬದಿಯಡ್ಕ : ಗ್ರಾಮಸಭೆಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಅಭಿವೃದ್ಧಿಗೆ ಬೇಕಾದ ರೂಪುರೇಷೆಗಳನ್ನು ತಯಾರಿಸುವಲ್ಲಿ ತಮ್ಮ ಕೊಡುಗೆಗಳನ್ನು ನೀಡಬೇಕು. ಪಂಚಾಯತು ರಾಜ್ಯ ವ್ಯವಸ್ಥೆ ಅಧಿಕಾರಶಾಹಿಗಳಿಂದ ಅಧಿಕಾರವು ಜನಸಾಮಾನ್ಯರಿಗೆ ನೇರವಾಗಿ ದಕ್ಕುವ ಲಕ್ಷ್ಯವುಳ್ಳದ್ದೆಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಅವರು ಮಂಗಳವಾರ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಅಂಗವಾಗಿ ಬದಿಯಡ್ಕ ಗ್ರಾಮಪಂಚಾಯತು ವತಿಯಿಂದ ಪಂಚಾಯತು ಮಿನಿ ಸಭಾಂಗಣದಲ್ಲಿ ಹಮ್ಮಿಕೊಂಡ ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಪಂಚಾಯತು ಉಪಾಧ್ಯಕ್ಷೆ ಸೈಬುನ್ನೀಸ ಮೊಯ್ದೀನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಸದಸ್ಯರುಗಳಾದ ಮುನೀರ್ ಚೆಡೆಕಲ್ಲು, ಜಯಶ್ರೀ ಮಾತನಾಡಿದರು.
ಗ್ರಾ.ಪಂ.ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಮಾತನಾಡಿ ಅರ್ಹ ಫಲಾನುಭವಿಗಳು ತಳಮಟ್ಟದಿಂದ ಗುರುತಿಸಲ್ಪಡಬೇಕಾದರೆ ಗ್ರಾಮಸಭೆಗಳಲ್ಲಿ ಊರಿನ ಜನರ ಸಹಭಾಗಿತ್ವ ಅತೀ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸಬೇಕಾಗಿದೆ ಎಂದರು.
ಸದಸ್ಯರುಗಳಾದ ಶಾಂತಾ, ಪ್ರಸನ್ನ ಕುಮಾರಿ, ಪ್ರೇಮ, ಜಯಂತಿ, ವಿಶ್ವನಾಥ ಪ್ರಭು, ಲಕ್ಷ್ಮೀನಾರಾಯಣ ಪೈ, ಶಶಿಕಲಾ, ಅನಿತಾ ಕ್ರಾಸ್ತಾ ಹಾಗೂ 19 ವಾಡರ್ುಗಳ ಮಹಿಳೆಯರು ಹಾಗೂ ಮಹನೀಯರು ಪಾಲ್ಗೊಂಡಿದ್ದರು. ಗ್ರಾಮಪಂಚಾಯತು ಉಪ ಕಾರ್ಯದಶರ್ಿ ಮನೋಜ್ ಸ್ವಾಗತಿಸಿ, ಗ್ರಾಮಪಂಚಾಯತು ಸದಸ್ಯ ಸಿರಾಜ್ ಮಹಮ್ಮದ್ ವಂದಿಸಿದರು.