HEALTH TIPS

No title

              ಮಜಕ್ಕಾರು ದೈವಸ್ಥಾನದ ಪುನಃಪ್ರತಿಷ್ಠೆ; ದೈವಂಕಟ್ಟು ಮಹೋತ್ಸವ
    ಮುಳ್ಳೇರಿಯ: ಮಜಕ್ಕಾರು ಬೆಟ್ಟುಗದ್ದೆ ಶ್ರೀ ಅಬ್ಬೆ ಕನ್ಯಾ ಕೊಟ್ಯ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ದೈವಂಕಟ್ಟು ಮಹೋತ್ಸವ ಶನಿವಾರ ಆರಂಭಗೊಂಡಿತು.
  ಶನಿವಾರ ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, 9ಕ್ಕೆ ಪತ್ತಾಯಪುರ ಶ್ರೀ ಧೂಮಾವತಿ ವಿಷ್ಣುಮೂತರ್ಿ ದೈವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ದೈವಕ್ಷೇತ್ರಕ್ಕೆ ಆಗಮಿಸಿತು. ಬಳಿಕ  11.30ರಿಂದ ಆಧ್ಯಾತ್ಮಿಕ ಸಮ್ಮೇಳನ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಟ್ರಸ್ಟಿ ಕೃಷ್ಣಮೂತರ್ಿ ಭಟ್ ಉದ್ಘಾಟಿಸಿದರು.  ಅಗಲ್ಪಾಡಿ ಶ್ರೀ ಕ್ಷೇತ್ರ ಆಡಳಿತೆ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು. ಡಾ.ಆರ್.ಸಿ.ಕರಿಪತ್ತ್ ಪಯ್ಯನ್ನೂರು ಮುಖ್ಯ ಭಾಷಣ ಮಾಡಿದರು. ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಆಡಳಿತ ಟ್ರಸ್ಟಿ ಬಲರಾಮನ್ ನಾಯರ್ ಪಾಟಿಕೊಚ್ಚಿ, ಕುಂಡಡ್ಕ ರಕ್ತೇಶ್ವರಿ ವಿಷ್ಣುಮೂತರ್ಿ ದೈವಸ್ಥಾನದ ಉಪಾಧ್ಯಕ್ಷ ಕೇಳು ಮಣಿಯಾಣಿ ಪಾಟಿಕೊಚ್ಚಿ, ಕೊಡವಂಜಿ ಶ್ರೀ ಪುಳ್ಳಿಕರಿಂಗಾಳಿ ಭಗವತೀ ಕ್ಷೇತ್ರದ ಅಧ್ಯಕ್ಷ ವಿಶ್ವನ್ ನೆಕ್ರಂಪಾರೆ, ಕಮಲಾಕ್ಷನ್ ಪಾತ್ತನಡ್ಕ, ಉಷಾಕುಮಾರಿ.ಎನ್ ಉಪಸ್ಥಿತರಿದ್ದರು. ಮಧ್ಯಾಹ್ನ 2.30ಕ್ಕೆ ಸಾಂಸ್ಕೃತಿಕ ಸಮ್ಮೇಳನವನ್ನು ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಉದ್ಘಾಟಿಸಿದರು.  ಮಲ್ಲ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರ ಆಡಳಿತೆ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದರು. ಕಣ್ಣೂರು ವಿವಿ ಮಾಜಿ ಉಪಕುಲಪತಿ ಖಾದರ್ ಮಾಂಗಾಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಳಿಯಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾಗೋಪಾಲನ್, ಕಾನತ್ತೂರು ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ಅಧ್ಯಕ್ಷ ಇ.ಮಣಿಕಂಠನ್, ಮುಳಿಯಾರು ಗ್ರಾಮ ಪಂಚಾಯಿತಿ ಸದಸ್ಯೆ ಅನೀಸ ಮನ್ಸೂರ್ ಮಲ್ಲತ್ತ್, ಪತ್ತಾಯಪುರ ಶ್ರೀ ಧೂಮಾವತಿ ವಿಷ್ಣುಮೂತರ್ಿ ದೈವಸ್ಥಾನ ಅಧ್ಯಕ್ಷ ವಿಠಲ ರೈ, ಮುಳಿಯಾರು ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್ ಮಜಕ್ಕಾರು, ಪಿ.ಬಾಲಕೃಷ್ಣ, ರಾಜಾರಾಂ ಚೇಕೋಡು, ಶಂಭು ಪಣಿಕ್ಕರ್, ಅಡ್ಕ ಗೋಪಾಲಕೃಷ್ಣ ಭಟ್, ಸುನಿಲ್ ಕುಮಾರ್ ವೆಳ್ಳಾಲ, ಚೇಕೋಡು ಬಾಲಕೃಷ್ಣನ್ ನಾಯರ್, ರಾಮಚಂದ್ರನ್, ಕರುಣಾಕರನ್ ಮಾಸ್ಟರ್, ಶ್ಯಾಂ ಪ್ರಸಾದ್ ಮಾನ್ಯ, ಅಂಬಿಕಾ, ಸುನಿಲ್ ಕುಮಾರ್ ಉಪಸ್ಥಿತರಿದ್ದರು.  ಸಂಜೆ 6ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.  ರಾತ್ರಿ 10ಕ್ಕೆ ಮಲ್ಲ ಮೇಳದವರಿಂದ ಯಕ್ಷಗಾನ ಬಯಲಾಟ ದೇವಿ ಮಹಾತ್ಮೆ ಪ್ರದರ್ಶನಗೊಂಡಿತು.
   ಏ.29ರಂದು ಬೆಳಿಗ್ಗೆ 8ರಿಂದ ಭಜನೆ, ಸಂಜೆ 4ಕ್ಕೆ ಬ್ರಹ್ಮಶ್ರೀ ವಾಸುದೇವ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, 6ರಿಂದ ವೈದಿಕ ಕಾರ್ಯಕ್ರಮಗಳು, ಏ.30ರಂದು ಬೆಳಿಗ್ಗೆ 7ರಿಂದ ವಿವಿಧ  ವೈದಿಕ ಕಾರ್ಯಕ್ರಮಗಳು, 9.10ರಿಂದ ಪ್ರತಿಷ್ಠೆ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 2.30ರಿಂದ ಧಾಮರ್ಿಕ ಸಭೆ, ಉದ್ಯಮಿ ವಸಂತ ಪೈ ಬದಿಯಡ್ಕ ಉದ್ಘಾಟಿಸುವರು, ಮಣಿಲ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಆಶರ್ೀರ್ವಚನ ನೀಡುವರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೇಣುಗೋಪಾಲ ತತ್ವಮಸಿ ಅಧ್ಯಕ್ಷತೆ ವಹಿಸುವರು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾಮರ್ಿಕ ಭಾಷಣ ಮಾಡುವರು. ಬೆಂಗಳೂರಿನ ವ್ಯವಸಾಯಿಗಳಾದ ಕುಮಾರ್ ಬಾಬು, ರಾಜಗೋಪಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮುಳಿಯಾರು ಕ್ಷೇತ್ರ ಆಡಳಿತ  ಟ್ರಸ್ಟಿ ಸೀತಾರಾಮ ಬಳ್ಳುಳ್ಳಾಯ, ಮಂಜುನಾಥ ಮಾನ್ಯ, ಹರೀಶ್ ನಾರಂಪಾಡಿ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಚೇತನಾ, ರಾಜನ್  ಬೇಪ್ಪ್ ಭಾಗವಹಿಸುವರು, ಸಂಜೆ 5.30ರಿಂದ ಕಲಾಸಂಧ್ಯಾ, ರಾತ್ರಿ 9ಕ್ಕೆ ನಾಡನ್ ಕಲಾ ಮೇಳ ನಡೆಯಲಿದೆ.
   ಮೇ.1ರಂದು ಬೆಳಿಗ್ಗೆ 10ಕ್ಕೆ ಭಂಡಾರ ಆಗಮನ, ಮಧ್ಯಾಹ್ನ 12ಕ್ಕೆ ಮಾರ್ಣ ಗುಳಿಗನ್, 3ಕ್ಕೆ ಚೌಕಾರು ಗುಳಿಗನ್, ಸಂಜೆ 5ಕ್ಕೆ ಮಹಿಷಂದಾಯ ದೈವಕೋಲ, ರಾತ್ರಿ 8ಕ್ಕೆ ಏರು ಗೋಪಾಲ ದೈವಕೋಲ, 8.30 ಪಂಜುಲರ್ಿ ದೈವದ ತೊಡಂಗಲ್, 9ಕ್ಕೆ ಪಿಲಿಚಾಮುಂಡಿ ದೈವದ ತೊಡಂಗಲ್, 10ಕ್ಕೆ ಮೂವರ್ ಭೂತ-ಕಾಜಾರ್ಕುಲೈ, ಗುಳಿಗನ್, 12ಕ್ಕೆ ಪಂಜುಲರ್ಿ ದೈವ ನಡೆಯಲಿದೆ.
  ಮೇ 2ರಂದು ಬೆಳಿಗ್ಗೆ 4ಕ್ಕೆ ಕನ್ಯಾ-ಕಾಟ್ಯತ್ತಿ, 2ಕ್ಕೆ ಮೂರಿ ದೈವಗಳ ನೃತ್ಯ ನಡೆಯಲಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries